53 ರನ್ ಚಚ್ಚಿ ಚೆನ್ನೈ ಬೌಲರ್‌ಗಳನ್ನ ಓಡಾಡಿಸಿಕೊಂಡು ಹೊಡೆದ ರೊಮಾರಿಯೋ ಶೆಫರ್ಡ್... Romario Shepherd
ಕನ್ನಡಿಗರು ಕುಣಿದಾಡುತ್ತಿದ್ದು, 2025ರ ಐಪಿಎಲ್ ಕಪ್ ಬೆಂಗಳೂರು ತಂಡ ಆರ್‌ಸಿಬಿ ಟೀಂಗೆ ಒಲಿಯುವುದು ಗ್ಯಾರಂಟಿ ಆಗಿದೆ. ಅದರಲ್ಲೂ ನಿನ್ನೆ 213 ರನ್ ಚಚ್ಚಿದ್ದ ಆರ್‌ಸಿಬಿ ತಂಡವು ಕೊನೇ ಹಂತದ ತನಕ ಹೋರಾಡಿ ರೋಚಕ ಗೆಲುವು ದಾಖಲಿಸಿದೆ. ಇಂತಹ ಸಮಯದಲ್ಲೇ ಚೆನ್ನೈ ಬೌಲರ್‌ಗಳಿಗೆ ಚಳಿ ಜ್ವರ ಬರಿಸಿದ್ದು ಬೆಂಗಳೂರು ತಂಡದ ದಾಂಡಿಗ ರೊಮಾರಿಯೋ ಶೆಫರ್ಡ್ ಅವರು. ಹೀಗಿದ್ದಾಗಲೇ, 53 ರನ್ ಚಚ್ಚಿ ಚೆನ್ನೈ ಬೌಲರ್‌ಗಳನ್ನ ಓಡಾಡಿಸಿಕೊಂಡು ಹೊಡೆದ ರೊಮಾರಿಯೋ ಶೆಫರ್ಡ್...
ಚೆನ್ನೈ ತಂಡದ ವಿರುದ್ಧ ಆರ್‌ಸಿಬಿ ತಂಡ ಗೆಲ್ಲಬೇಕು ಎಂಬುದು ಬೆಂಗಳೂರು ತಂಡ ಪ್ರತಿ ಒಬ್ಬ ಅಭಿಮಾನಿಯ ಆಸೆ ಆಗಿತ್ತು. ಹೀಗಿದ್ದಾಗ ಆರ್‌ಸಿಬಿ ತಂಡ ಚೆನ್ನೈ ವಿರುದ್ಧ ಮೊದಲು ಬ್ಯಾಟ್ ಮಾಡಿದಾಗ ಆರಂಭದಲ್ಲೇ ಚನ್ನಾಗಿ ಇತ್ತು. ಆದರೆ ಆ ನಂತರ ಸಂಕಷ್ಟ ಎದುರಾಗಿ ಸಾಲು ಸಾಲು ಬ್ಯಾಟ್ಸ್‌ಮನ್‌ಗಳು ಔಟ್ ಆಗಿಬಿಟ್ಟರು. ಆ ನಂತರ ಆತಂಕದ ವಾತಾವರಣವು ಇದ್ದಾಗಲೇ ಭರ್ಜರಿ ದಾಂಡಿಗನ ಎಂಟ್ರಿ ಆರ್‌ಸಿಬಿ ತಂಡಕ್ಕೆ ಭರ್ಜರಿ ಬೆಂಬಲವನ್ನ ಕೂಡ ನೀಡಿತ್ತು!

ರೊಮಾರಿಯೋ ಶೆಫರ್ಡ್ ಆರ್ಭಟ ಜೋರು!
ಹೌದು, ವಿಂಡೀಸ್ ಆಟಗಾರ ರೊಮಾರಿಯೋ ಶೆಫರ್ಡ್ ಆಟದ ಬಗ್ಗೆ ಹಲವರಿಗೆ ಗೊತ್ತಿರಲಿಲ್ಲ ಎನ್ನಬಹುದು. ಯಾಕಂದ್ರೆ ರೊಮಾರಿಯೋ ಶೆಫರ್ಡ್ ಇನ್ನೂ ಒಂದು ಬಾರಿ ಕೂಡ ಆರ್‌ಸಿಬಿ ಪರವಾಗಿ ಬ್ಯಾಟಿಂಗ್ ಮಾಡೇ ಇರಲಿಲ್ಲ. ಆದರೆ ಚೆನ್ನೈ ತಂಡದ ವಿರುದ್ಧ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಬ್ಯಾಟಿಂಗ್ ಮಾಡಿದ ರೊಮಾರಿಯೋ ಶೆಫರ್ಡ್ ಇಡೀ ಕ್ರಿಕೆಟ್ ಮೈದಾನವನ್ನೇ ನಡುಗಿಸಿಬಿಟ್ಟರು!
ಬೆಂಗಳೂರು ತಂಡಕ್ಕೆ ಶೆಫರ್ಡ್ ಬಲ!
ಆರ್‌ಸಿಬಿ ತಂಡ ಸಂಕಷ್ಟಕ್ಕೆ ಸಿಲುಕಿ, 170 ರನ್ ಬಾರಿಸುವುದು ಕೂಡ ಕಷ್ಟ ಎನ್ನುವಾಗಲೇ ಎಂಟ್ರಿ ಕೊಟ್ಟಿದ್ದ ರೊಮಾರಿಯೋ ಶೆಫರ್ಡ್ ಇಡೀ ಪಂದ್ಯವನ್ನೇ ಬದಲಿಸಿಬಿಟ್ಟರು. ಕೇವಲ 14 ಬಾಲ್ ಆಡಿದ್ದ ರೊಮಾರಿಯೋ ಶೆಫರ್ಡ್ ಬರೋಬ್ಬರಿ 53 ರನ್ ಚಚ್ಚಿ ಬಿಸಾಡಿಬಿಟ್ಟರು. ಹೀಗೆ 6 ಸಿಕ್ಸರ್ & 4 ಫೋರ್ ಬಾರಿಸಿ ಆರ್‌ಸಿಬಿ ತಂಡ ಭರ್ಜರಿ ಸ್ಕೋರ್ ಕಲೆಹಾಕಲು ಇದೇ ರೊಮಾರಿಯೋ ಶೆಫರ್ಡ್ ನೆರವಾಗಿ ನಿಂತರು. 213 ರನ್ ಚಚ್ಚಿದ್ದ ಆರ್‌ಸಿಬಿ ತಂಡವು ಚೆನ್ನೈ ತಂಡದ ಬೌಲರ್‌ಗಳ ಎದೆ ನಡುಗುವಂತೆ ಮಾಡಿತ್ತು, ಅಂತಿಮವಾಗಿ ರೋಚಕ ಹೋರಾಟ ತೋರಿಸಿ ಗೆದ್ದು ಬೀಗಿದೆ ಆರ್‌ಸಿಬಿ ತಂಡ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದ್ದ 214 ರನ್‌ಗಳ ಗುರಿ ಬೆನ್ನುಹತ್ತಿದ್ದ ಇದೇ ಚೆನ್ನೈ ತಂಡ, ಅಂತಿಮವಾಗಿ 211 ರನ್‌ಗೆ 5 ವಿಕೆಟ್ ಕಳೆದುಕೊಂಡು ಸೋಲು ಕಂಡಿತು. ಕೊನೆಗೆ ಬೆಂಗಳೂರಿನಲ್ಲಿ ಚೆನ್ನೈ ತಂಡ ಸೋತ ಹಿನ್ನೆಲೆ ಅಭಿಮಾನಿಗಳು ಕೂಡ ಭರ್ಜರಿಯಾಗಿ ಸಂಭ್ರಮಿಸಿದರು. ಅದರಲ್ಲೂ ಆರ್‌ಸಿಬಿ ತಂಡ ಪ್ಲೇಆಫ್‌ಗೆ ಕೂಡ ಭರ್ಜರಿ ಎಂಟ್ರಿ ಕೊಟ್ಟು ಖುಷಿ ಪಟ್ಟಿದೆ.












Click it and Unblock the Notifications