Rohit Sharma: ಒಂದೇ ಇನ್ನಿಂಗ್ಸ್‌ನಲ್ಲಿ ಏಳು ದಾಖಲೆ ಬರೆದ ಹಿಟ್‌ಮ್ಯಾನ್
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್‌ನಲ್ಲಿ ಮೈ ಚಳಿ ಬಿಟ್ಟು ಆಡಿದ್ದಾರೆ. ಸೂಪರ್ 8 ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಮೋಘ ಬ್ಯಾಟಿಂಗ್ ಮಾಡಿದ ಹಿಟ್ ಮ್ಯಾನ್ ರೋಹಿತ್ ಹಲವು ದಾಖಲೆಗಳಿಗೆ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದ್ದಾರೆ.
ಪವರ್ ಪ್ಲೇನಿಂದಲೇ ಪವರ್ ಫುಲ್ ಆಟದ ಪ್ರದರ್ಶನ ನೀಡಿದ ಹಿಟ್ ಮ್ಯಾನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ತಂಡಕ್ಕೆ ಅಗತ್ಯವಿದ್ದಾಗ ಬಿಗ್ ಇನ್ನಿಂಗ್ಸ್ ನೆರವು ನೀಡಿದರು. ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲೇ ಅರ್ಧಶತಕ ಬಾರಿಸಿದ ಹಿಟ್ ಮ್ಯಾನ್ ರೌದ್ರ ರೂಪ ಪ್ರದರ್ಶನ ನೀಡಿದರು. ತಮ್ಮ ನೈಜ ಆಟವನ್ನು ಆಡಿದ ರೋಹಿತ್ ಬೌಂಡರಿ ಹಾಗೂ ಸಿಕ್ಸರ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು.

ಪವರ್ ಪ್ಲೇ ಆಟ
ಕೇವಲ 19 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ನೆರವಿನಿಂದ 50 ರನ್ ಬಾರಿಸಿದ ರೋಹಿತ್ ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿದರು. ರೋಹಿತ್ ಶರ್ಮಾ ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಔಟ್ ಆದರು. ರೋಹಿತ್ 41 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್ ಬಾರಿಸುವ ಮೂಲಕ ಅಬ್ಬರಿಸಿದರು.
ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರ ನಡೆಸಿದರು. ಅವರು ಆಕ್ರಮಣಕಾರಿ ಆಟಕ್ಕೆ ಆಸೀಸ್ ಕಂಗಾಲಾಯಿತು. ರೋಹಿತ್ ಈ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್‌ಗಳನ್ನು ಪೂರೈಸುವ ಮೂಲಕ ಇತಿಹಾಸ ನಿರ್ಮಿಸಿದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗರಿಷ್ಠ ಟಿ20 ರನ್
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆಯನ್ನು ಹಿಟ್ ಮ್ಯಾನ್ ತಮ್ಮ ಹೆಸರಿಗೆ ನಮೂದಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ 92 ರನ್‌ಗಳ ಅಮೋಘ ಇನ್ನಿಂಗ್ಸ್ ಆಡುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ 4165 ರನ್ ಸಿಡಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಈ ಮೂಲಕ ಪಾಕ್‌ನ ಬಾಬರ್ ಅಜಮ್ (4145) ದಾಖಲೆಯನ್ನು ಅಳಿಸಿ ಹಾಕಿದರು.
ಯುವಿ ರೆಕಾರ್ಡ್ ಪೀಸ್ ಪೀಸ್
ಸಿಕ್ಸರ್ ಕಿಂಗ್ ಎಂದೇ ಖ್ಯಾತಿ ಪಡೆದಿದ್ದ ಯುವರಾಜ್ ಸಿಂಗ್, ಅವರ ದಾಖಲೆಯನ್ನು ಅಳಿಸಿ ಹಾಕಿದರು. 2007ರಲ್ಲಿ ನಡೆದಿ ಟಿ20 ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ಏಳು ಸಿಕ್ಸರ್ ಗಳನ್ನು ಬಾರಿಸಿದ್ದರು. ಈ ದಾಖಲೆಯನ್ನು ರೋಹಿತ್ ಶರ್ಮಾ ಅಳಿಸಿ ಹಾಕಿದರು. ಇವರು ಆಸೀಸ್ ವಿರುದ್ಧ ಒಂದೇ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್ ಬಾರಿಸಿದ್ದಾರೆ.
ರೋಹಿತ್ ಶರ್ಮಾ 19 ಸಾವಿರ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19 ಸಾವಿರ ರನ್‌ಗಳನ್ನು ಗಡಿ ದಾಟಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಟೆಸ್ಟ್‌ನಲ್ಲಿ ಹಿಟ್ ಮ್ಯಾನ್ 4137, ಏಕದಿನ ಕ್ರಿಕೆಟ್‌ನಲ್ಲಿ 10709, ಟಿ20ಯಲ್ಲಿ 4165 ರನ್ ಸಿಡಿಸಿ ಅಬ್ಬರಿಸಿದ್ದಾರೆ.

ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್
ಸಿಕ್ಸರ್ ಆಟಗಾರ
203 ರೋಹಿತ್ ಶರ್ಮಾ
173 ಮಾರ್ಟಿನ್ ಗಪ್ಟಿಲ್
137 ಜೋಸ್ ಬಟ್ಲರ್
132 ನಿಕೋಲಸ್ ಪೂರನ್
130 ಗ್ಲೆನ್ ಮ್ಯಾಕ್ಸ್‌ವೆಲ್
ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಬೌಂಡರಿ
ಬೌಂಡರಿ ಆಟಗಾರ
144 ರೋಹಿತ್ ಶರ್ಮಾ
142 ಡೇವಿಡ್ ವಾರ್ನರ್
141 ಕ್ರಿಸ್ ಗೇಲ್
137 ವಿರಾಟ್ ಕೊಹ್ಲಿ
ಟಿ20 ವಿಶ್ವಕಪ್‌ನಲ್ಲಿ ವೇಗವಾಗಿ 50 ರನ್ ಬಾರಿಸಿದ ನಾಯಕ
ಎಸೆತ ಆಟಗಾರ ವಿರುದ್ಧ
19 ರೋಹಿತ್ ಶರ್ಮಾ ಆಸ್ಟ್ರೇಲಿಯಾ, 2024
20 ಮೊಹಮ್ಮದ್ ಅಶ್ರಫುಲ್ ವೆಸ್ಟ್ ಇಂಡೀಸ್, 2007
21 ಮಹೇಲಾ ಜಯವರ್ಧನೆ ಕೀನ್ಯಾ, 2007
T20 ವಿಶ್ವಕಪ್‌ನ ಪವರ್‌ಪ್ಲೇನಲ್ಲಿ 50+ ರನ್ ಬಾರಿಸಿದ ಆಟಗಾರ
- 2014 ರಲ್ಲಿ ಸ್ಟೀಫನ್ ಮೈಬರ್ಗ್ ವಿರುದ್ಧ ಐರ್ಲೆಂಡ್
- 2021ರಲ್ಲಿ ಕೆಎಲ್ ರಾಹುಲ್ ವಿರುದ್ಧ ಸ್ಕಾಟ್ಲೆಂಡ್
- 2022 ರಲ್ಲಿ ಲಿಟನ್ ದಾಸ್ ವಿರುದ್ಧ ಭಾರತ
- 2024ರಲ್ಲಿ ರೋಹಿತ್ ಶರ್ಮಾ ವಿರುದ್ಧ ಆಸ್ಟ್ರೇಲಿಯಾ












Click it and Unblock the Notifications