CSK Vs MI: ಐಪಿಎಲ್‌ ಇತಿಹಾಸದಲ್ಲಿ ಬೇಡದ ದಾಖಲೆ ಮಾಡಿದ ರೋಹಿತ್ ಶರ್ಮಾ

CSK Vs MI: ಈಗಾಗಲೇ ಐಪಿಎಲ್ 2025ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಯು ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧ ಅಬ್ಬರದ ಬ್ಯಾಟಿಂಗ್‌ ಮಾಡಿ ದಾಖಲೆಗಳನ್ನು ಮಾಡಿದರೆ, ಇತ್ತ ಇಂದು ಸಿಎಸ್‌ಕೆ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಈ ಮೂಲಕ ಬೇಡದ ದಾಖಲೆ ಮಾಡಿದ್ದಾರೆ.

ಇನ್ನು ಇಂದು (ಮಾರ್ಚ್ 23) ಸಿಎಸ್‌ಕೆ ಮತ್ತು ಮುಂಬೈ ನಡುವೆ ಪಂದ್ಯ ಆರಂಭವಾಗಿದ್ದು, ಮೊದಲು ಮುಂಬೈ ಪರ ಮೊದಲು ಬ್ಯಾಟ್‌ ಮಾಡಿದ ರೋಹಿತ್‌ ಶರ್ಮಾ ಬೇಡದ ದಾಖಲೆಯೊಂದನ್ನು ಮಾಡಿದ್ದಾರೆ. ನಾಲ್ಕು ಬಾಲ್‌ಗಳನ್ನು ಆಡಿದ ಯಾವುದೇ ರನ್‌ ಇಲ್ಲದೆ ಕ್ಯಾಚ್‌ ನೀಡಿ ಪೆವಿಲಿಯನ್‌ನತ್ತ ತೆರಳಿದ್ದಾರೆ. ಈ ಮೂಲಕ ಅವರು ಅತೀ ಹೆಚ್ಚು ಬಾರಿ ಡಕ್‌ ಔಟ್‌ ಆದ ದಾಖಲೆ ಮಾಡಿದ್ದಾರೆ.

Rohit Sharma unwanted Record as Most Ducks in IPL History

ಸಿಎಸ್‌ಕೆ ವಿರುದ್ಧ ಮುಂಬೈ ಕಾದಾಟ ನಡೆಸುತ್ತಿದ್ದು, ಮೊದಲು ಬ್ಯಾಟ್‌ ಮಾಡಿದ ರೋಹಿತ್ ಶರ್ಮಾ ಯಾವುದೇ ರನ್‌ ಇಲ್ಲದೆ, ಖಲೀಲ್ ಅಹ್ಮದ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ ಈ ಮೂಲಕ ಅತೀ ಹೆಚ್ಚಯ ಡಕ್‌ ಔಟ್‌ ಆದ ದಾಖಲೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇನ್ನು ವಿರಾಟ್ ಕೊಹ್ಲಿಯಂತೆಯೇ, ಕಳೆದ ವರ್ಷವೇ ಟಿ20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಶರ್ಮಾ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳಿದರು. ಇದೀಗ ಐಪಿಎಲ್‌ನಲ್ಲಿ ಮುಂಬೈ ಪರ ಆಡಿದ ಅವರು ಬೇಡದ ದಾಖಲೆ ಮಾಡಿದ್ದಾರೆ.

ಐಪಿಎಲ್‌ಲ್ಲಿ ಅತಿ ಹೆಚ್ಚು ಡಕ್‌ ಔಟ್‌ ಆದವರು

* ದಿನೇಶ್ ಕಾರ್ತಿಕ್ - 18 (ಡೆಕ್ಕನ್‌ ಚಾರ್ಜಸ್‌, ಗುಜರಾತ್ ಲಯನ್ಸ್‌, ಕೆಕೆಆರ್, ಪಂಜಾಬ್‌, ಮುಂಬಯ, ಆರ್‌ಸಿಬಿ)
* ಗ್ಲೆನ್ ಮ್ಯಾಕ್ಸ್‌ವೆಲ್ - 18 (ಡಿಸಿ, ಪಂಜಾಬ್‌, ಎಂಐ, ಆರ್‌ಸಿಬಿ)
* ರೋಹಿತ್ ಶರ್ಮಾ - 18 (ಡೆಕ್ಕನ್ ಚಾರ್ಜರ್ಸ್, ಮುಂಬೈ ಇಂಡಿಯನ್ಸ್)
* ಸುನಿಲ್ ನರೈನ್ - 16 (ಕೋಲ್ಕತ್ತಾ ನೈಟ್ ರೈಡರ್ಸ್)
* ಪಿಯೂಷ್ ಚಾವ್ಲಾ - 16 (ಸಿಎಸ್‌ಕೆ, ಕೆಕೆಆರ್, ಪಂಜಾಬ್, ಎಂಐ)

ರೋಹಿತ್ ಶರ್ಮಾ ಅವರು, ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅರ್ಧಶತಕ ಗಳಿಸುವ ಮೊದಲು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಶತಕ ಗಳಿಸಿದರು. ಇನ್ನು ಇದೀಗ ಐಪಿಎಲ್‌ನಲ್ಲಿ ಅತೀ ಹೆಚ್ಚು ಡಕ್‌ ಔಟ್‌ ಆಗುವುದರಲ್ಲಿ ದಾಖಲೆ ಮಾಡಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಅವರು, ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಸಾಲಿಗೆ ಸೇರಿದ್ದಾರೆ. ಈ ಮೂವರೂ ಐಪಿಎಲ್‌ನಲ್ಲಿ 18 ಬಾರಿ ಡಕ್ ಔಟ್ ಆಗಿದ್ದರೆ, ಸುನಿಲ್ ನರೈನ್ ಮತ್ತು ಪಿಯೂಷ್ ಚಾವ್ಲಾ ತಲಾ 16 ಡಕ್ ಔಟ್ ಆಗಿದ್ದಾರೆ. ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 258 ಪಂದ್ಯಗಳನ್ನು ಆಡಿದ್ದು, 6,628 ರನ್ ಗಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+