ಧೋನಿ ಆಯ್ತು ರೋಹಿತ್ ಮೂಲಕ ಭಾರತದಲ್ಲಿ ಇತಿಹಾಸ ಸೃಷ್ಟಿ ಗ್ಯಾರಂಟಿ!
ಭಾರತೀಯರ ಎದೆ ಈಗ ಹೆಚ್ಚಾಗಿ ಬಡಿದುಕೊಳ್ಳುತ್ತಿದೆ, ಭಾರತ ಕ್ರಿಕೆಟ್ ತಂಡದಿಂದ 2ನೇ ಟಿ20 ವಿಶ್ವಕಪ್ ಟ್ರೋಫಿ ಬಯಸುತ್ತಿರುವ ಭಾರತೀಯರಿಗೆ ಇಂದು ಖುಷಿ ಸುದ್ದಿ ಸಿಗುವುದು ಗ್ಯಾರಂಟಿ ಆಗಿದೆ. 2007 ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತದ ತಂಡ ಮಾಡಿದ್ದ ಸಾಧನೆಯನ್ನ ಭಾರತ ಇಂದು ಮತ್ತೆ, ಅಂದ್ರೆ 2024 ರಲ್ಲಿ ಕೂಡ ಸಾಧಿಸುವುದು ಬಹುತೇಕ ಪಕ್ಕಾ ಆಗಿದೆ.
ರೋಹಿತ್ ಶರ್ಮಾ ಪಾಲಿಗೆ ಇದು 2ನೇ ಅವಕಾಶ, ಯಾಕಂದ್ರೆ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಹೋಗಿತ್ತು ಭಾರತ ತಂಡ. ಈ ರೀತಿ ಒಂದು ವಿಶ್ವಕಪ್ ಸೋತ ನಂತರ ಮತ್ತೊಂದು ವಿಶ್ವಕಪ್ 2024 ರಲ್ಲಿ ಬಂದಿದ್ದು, ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡ ಮಿಂಚುತ್ತಿದೆ. ಅದರಲ್ಲೂ ಈ ಬಾರಿಯ ಟಿ20 ವಿಶ್ವಕಪ್ ನಮ್ಮದೆನೇ ಅಂತಾ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಹೀಗೆ ಎಲ್ಲೆಲ್ಲೂ ಭಾರತಕ್ಕೆ ಬೆಂಬಲವು ಸಿಗುತ್ತಿದೆ. ಹಾಗಾದ್ರೆ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ಇಂದು ಗೆದ್ದರೆ ಏನೆಲ್ಲಾ ಆಗಬಹುದು? ಬನ್ನಿ ತಿಳಿಯೋಣ.

ಮಧ್ಯರಾತ್ರಿ ರಸ್ತೆ ರಸ್ತೆಯಲ್ಲಿ ಜನ!
ಭಾರತ & ದಕ್ಷಿಣ ಆಫ್ರಿಕಾ ನಡುವೆ ಇಂದು 2024ರ ಟಿ20 ವಿಶ್ವಕಪ್ ಫೈನಲ್ ಪಂದ್ಯವು ನಡೆಯಲಿದೆ. ಹೀಗಾಗಿ ಅಮೆರಿಕ ಸಮಯದ ಪ್ರಕಾರ ಮ್ಯಾಚ್ ಮುಗಿಯುವ ಟೈಂ ಪಕ್ಕಾ ಭಾರತದಲ್ಲಿ ಮಧ್ಯರಾತ್ರಿ ಆಗಿರುತ್ತೆ. ಭಾರತ ತಂಡ ಇಂದು ದಕ್ಷಿಣ ಆಫ್ರಿಕಾಗೆ ಮಣ್ಣು ಮುಕ್ಕಿಸಿ ಟ್ರೋಫಿ ಗೆದ್ದರೆ ಮಧ್ಯ ರಾತ್ರಿಯಲ್ಲೇ ಜನರು ರಸ್ತೆಗಳಲ್ಲಿ ಮೆರವಣಿಗೆ ಮಾಡುವುದು ಗ್ಯಾರಂಟಿ. ಅಲ್ಲದೆ, ಇನ್ನೂ ಒಂದು ವಿಶೇಷ ಘಟನೆಗೆ ಭಾರತ ಸಾಕ್ಷಿ ಆಗಲಿದೆ. ಅದು ಏನು ಗೊತ್ತೆ? ಬನ್ನಿ ತಿಳಿಯೋಣ.
ಇತಿಹಾಸ ಸೃಷ್ಟಿಸಲಿದೆ ಭಾರತ ತಂಡ!
ಕ್ರಿಕೆಟ್ ಇತಿಹಾಸ ಹೇಳುವಂತೆ ಈವರೆಗೂ ಯಾವುದೇ ತಂಡ ಏಕದಿನ ವಿಶ್ವಕಪ್ ಫೈನಲ್‌ಗೆ ಹೋಗಿ ಆ ನಂತರದ ವರ್ಷದಲ್ಲಿ ಟಿ20 ವಿಶ್ವಕಪ್ ಗೆದ್ದಿರುವ ಉದಾಹರಣೆ ಇಲ್ಲ. ಆದರೆ ಇಂದು ಭಾರತದ ಗೆಲುವಿನ ಮೂಲಕ ಆ ಇತಿಹಾಸ ಕೂಡ ಸೃಷ್ಟಿ ಆಗಲಿದೆ. ಮತ್ತೊಂದು ಕಡೆ ಭಾರತದ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಅವರ ಪಾತ್ರ ಕೂಡ ದೊಡ್ಡದಾಗಿ ಇರಲಿದೆ ಎಂಬುದು ಫ್ಯಾನ್ಸ್ ನಿರೀಕ್ಷೆ. ಹಾಗೇ ಸಾಲು ಸಾಲು ನೋವಿನ ಪ್ರದರ್ಶನದಿಂದ ವಿರಾಟ್ ಕೊಹ್ಲಿ ಅದೆಲ್ಲವನ್ನೂ ಮೆಟ್ಟಿ ನಿಂತು ಮುಂದೆ ಬರುವ ಸಾಧ್ಯತೆ ದಟ್ಟವಾಗಿದೆ.
ದೇಶಾದ್ಯಂತ ಸಂಭ್ರಮಾಚರಣೆ ಗ್ಯಾರಂಟಿ
ಭಾರತ ಕ್ರಿಕೆಟ್ ತಂಡ ಇಂದು ಟಿ20 ವಿಶ್ವಕಪ್ ಟ್ರೋಫಿ ಗೆದ್ದು ಬೀಗಿದರೆ ಇಡೀ ಭಾರತ ಈ ಸಂಭ್ರಮವನ್ನ ಕುಣಿದಾಡುತ್ತಾ ಆಚರಿಸಲಿದೆ. ಹಾಗೇ ದೇಶದ ಗಲ್ಲಿ ಗಲ್ಲಿಗಳಲ್ಲಿ ಈ ಸಂಭ್ರಮ ಮೇಳೈಸಲಿದೆ. ಹೀಗಾಗಿಯೇ ಇಂದು ಭಾರತ ತಂಡ ಗೆಲ್ಲಬೇಕು ಅಂತಿದ್ದಾರೆ, ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು. ಹಾಗೇ ಸದ್ಯದ ಪರಿಸ್ಥಿತಿ ನೋಡುತ್ತಿದ್ದರೆ ಈ ಸಮಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋಲುವುದು ಗ್ಯಾರಂಟಿನೇ ಬಿಡಿ!












Click it and Unblock the Notifications