Rohit Sharma: ರೋಹಿತ್ ಶರ್ಮಾಗೆ ಅವಮಾನ ಮಾಡಿತಾ ಮುಂಬೈ ಇಂಡಿಯನ್ಸ್? ಸಿಟ್ಟಾದ ಅಭಿಮಾನಿಗಳು

ಐಪಿಎಲ್ 2024ರ ಆವೃತ್ತಿಗೆ ಮುಂಚೆ ಹಲವು ವಿಚಾರಗಳಿಗೆ ಹಲವು ಫ್ರಾಂಚೈಸಿಗಳು ಸುದ್ದಿಯಾಗುತ್ತಿವೆ. ಹಾರ್ದಿಕ್ ಪಾಂಡ್ಯ ಮುಂಬೈ ತಂಡಕ್ಕೆ ಮರಳಿ, ನಾಯಕನಾಗಿ ನೇಮಕವಾದ ನಂತರ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮುಂಬೈ ಇಂಡಿಯನ್ಸ್ ಇಂಡಿಯನ್ಸ್ ತಂಡ ರೋಹಿತ್ ಶರ್ಮಾರನ್ನು ಕಡೆಗಣಿಸುತ್ತಿದೆಯಾ ಎನ್ನುವ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ.

2021 ರ ಋತುವಿನ ನಂತರ ತಂಡದಿಂದ ಬಿಡುಗಡೆಯಾದ ಎರಡು ವರ್ಷಗಳ ಅನುಪಸ್ಥಿತಿಯ ನಂತರ ಹಾರ್ದಿಕ್ ಪಾಂಡ್ಯ ತಮ್ಮ ತಂಡಕ್ಕೆ ಹಿಂದಿರುಗಿಸುವುದಾಗಿ ಘೋಷಿಸಿದಾಗ ಚರ್ಚೆಗಳನ್ನು ಹುಟ್ಟುಹಾಕಿತು; ಪಾಂಡ್ಯ ಗುಜರಾತ್ ತಂಡದ ನಾಯಕಾರಿ ಆಯ್ಕೆಯಾದ ಬಳಿಕ ಮೊದಲ ಋತುವಿನಲ್ಲಿ ತಂಡವನ್ನು ಪ್ರಶಸ್ತಿ ಗೆಲ್ಲುವತ್ತ ಮುನ್ನಡೆಸಿದರು.

 Rohit Sharma: Mumbai Indians Cryptic Social Media Post Sparks Conspiracy Theories

ಮುಂಬೈ ಇಂಡಿಯನ್ಸ್, ಪಾಂಡ್ಯರನ್ನು ವಾಪಸ್ ಕರೆತರುವ ಜೊತೆಗೆ ಅವರನ್ನು ನಾಯಕನ್ನಾಗಿ ನೇಮಿಸಿತು. ತಂಡದ ಚುಕ್ಕಾಣಿ ಹಿಡಿದ ರೋಹಿತ್ ಶರ್ಮಾ ಅವರ ಅತ್ಯಂತ ಯಶಸ್ವಿ ಅವಧಿಯನ್ನು ಕೊನೆಗೊಳಿಸಿತು.

ರೋಹಿತ್‌ರನ್ನು ಕಡೆಗಣಿಸುತ್ತಿದೆಯಾ?

ನಾಯಕತ್ವದ ಈ ಬದಲಾವಣೆಯು ಮುಂಬೈ ಇಂಡಿಯನ್ಸ್‌ನ ಅಭಿಮಾನಿಗಳ ಕೋಪಕ್ಕೆ ಕಾರಣವಾಯಿತು. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ನಲ್ಲಿ ಉಳಿದುಕೊಂಡಿದ್ದರೂ, ಅಭಿಮಾನಿಗಳು ಸಂತೋಷವಾಗಿಲ್ಲ. 5 ಬಾರಿ ಪ್ರಶಸ್ತಿ ಗೆದ್ದು ಕೊಟ್ಟ ನಾಯಕನಿಗೆ ಅವಮಾನ ಮಾಡಿದೆ ಎಂದು ಟೀಕಿಸಲಾಗಿದೆ.

ಫ್ರಾಂಚೈಸಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿನ ಇತ್ತೀಚಿನ ಪೋಸ್ಟ್‌ ಮತ್ತೆ ರೋಹಿತ್ ಅಭಿಮಾನಿಗಳನ್ನು ಕೆರಳಿಸಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಗೆ ಭಾರತದ ತಂಡವನ್ನು ಒಳಗೊಂಡ ಗ್ರಾಫಿಕ್ ಅನ್ನು ಮುಂಬೈ ಇಂಡಿಯನ್ಸ್ ಹಂಚಿಕೊಂಡಿದೆ. ರೋಹಿತ್ ಶರ್ಮಾ ಟೆಸ್ಟ್ ತಂಡದ ನಾಯಕಾರಿದ್ದರೂ, ಗ್ರಾಫಿಕ್‌ನಲ್ಲಿ ಕೆಎಲ್ ರಾಹುಲ್‌ ಜೊತೆ ಜಸ್ಪ್ರೀತ್ ಬುಮ್ರಾ ಮತ್ತು ಶ್ರೇಯಸ್ ಅಯ್ಯರ್ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ರೋಹಿತ್ ಶರ್ಮಾ ಅವರ ಫೋಟೊವನ್ನೇ ಮುಂಬೈ ಇಂಡಿಯನ್ಸ್ ಕೈಬಿಟ್ಟಿದೆ.

ಹಲವು ಅಭಿಮಾನಿಗಳು ಇದನ್ನು ಕಂಡು ಕೆರಳಿದ್ದು, ಎಕ್ಸ್ ಖಾತೆಯನ್ನು ಅನ್‌ಫಾಲೋ ಮಾಡುವುದಗಾಗಿ ಹೇಳಿದ್ದಾರೆ. ತಮ್ಮ ತಂಡಕ್ಕಾಗಿ ಐದು ಪ್ರಶಸ್ತಿಗಳನ್ನು ಗೆದ್ಟು ಕೊಟ್ಟ ಆಟಗಾರನಿಗೆ ಮುಂಬೈ ಇಂಡಿಯನ್ಸ್ ಈ ರೀತಿ ಅವಮಾನ ಮಾಡಬಾರದು ಎಂದು ಕಿಡಿ ಕಾರಿದ್ದಾರೆ.

ಮುಂಬೈ ಇಂಡಿಯನ್ಸ್‌ಗೆ ತಮ್ಮ ತಂಡದ ಆಟಗಾರನಿಗೆ ಹೇಗೆ ಬೆಲೆ ಕೊಡಬೇಕು ಎನ್ನುವುದು ಗೊತ್ತಿಲ್ಲ. ರೋಹಿತ್ ಮುಂಬೈ ತಂಡಕ್ಕಾಗಿ ಎಷ್ಟು ಕಷ್ಟಪಟ್ಟಿದ್ದಾರೆ. ಆದರೂ ಅವರ ಮೇಲೆ ಇಷ್ಟೊಂದು ದ್ವೇಷ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಐಪಿಎಲ್ ನಾಯಕತ್ವದಿಂದ ತೆಗೆದುಹಾಕಲ್ಪಟ್ಟರೂ, ರೋಹಿತ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಭಾರತ ಟಿ20 ತಂಡದ ನಾಯಕತ್ವನಾಗಿ ಮರಳಿದರು. ರೋಹಿತ್ 14 ತಿಂಗಳ ವಿರಾಮದ ನಂತರ ಟಿ20 ತಂಡಕ್ಕೆ ಮರಳಿದರು. ಅವರ ಜೊತೆಯಲ್ಲಿ ವಿರಾಟ್ ಕೊಹ್ಲಿ ಕೂಡ ತಂಡಕ್ಕೆ ಮರಳಿದ್ದು, ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 2024 ರ ಟಿ20 ವಿಶ್ವಕಪ್‌ಗೆ ತಂಡವು ಸಜ್ಜಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+