Rohit Sharma: ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಕಿಡಿಕಾರಿದ ರೋಹಿತ್ ಶರ್ಮಾ

ಐಪಿಎಲ್ 2024ರ ಆವೃತ್ತಿಯಲ್ಲಿ ಸಾಕಷ್ಟು ಸುದ್ದಿ ಮಾಡಿರುವ ತಂಡ ಮುಂಬೈ ಇಂಡಿಯನ್ಸ್, ಅದು ಆಟಕ್ಕಾಗಿ ಅಲ್ಲ, ಬದಲಾಗಿ ತಂಡದಲ್ಲಿ ನಡೆದ ಘಟನೆಗಳಿಂದ. ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಆಡುವುದು ಇದೇ ಕೊನೆ ಎನ್ನುವ ರೋಹಿತ್ ಶರ್ಮಾ ಅವರ ವಿಡಿಯೋ ವೈರಲ್ ಆಗಿತ್ತು. ಇದು ಈಗ ರೋಹಿತ್ ಶರ್ಮಾ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ತಮ್ಮ ಖಾಸಗಿತನವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. ರೆಕಾರ್ಡ್ ಮಾಡದಂತೆ ಮನವಿ ಮಾಡಿದರೂ, ಸ್ಟಾರ್ ಸ್ಪೋರ್ಟ್ಸ್ ತನ್ನ ವೈಯಕ್ತಿಕ ಚಾಟ್‌ಗಳ ಆಡಿಯೊ ಮತ್ತು ತುಣುಕನ್ನು ತಂಡದ ಸಹ ಆಟಗಾರರು ಮತ್ತು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದನ್ನು ಮುಂದುವರೆಸಿದೆ ಎಂದು ರೋಹಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Rohit Sharma Fumes At Star Sports of Breaching His Privacy

ಹೆಚ್ಚುವರಿ ವೀಕ್ಷಣೆ ಪಡೆಯಲು ಕ್ರಿಕೆಟಿಗರ ಗೌಪ್ಯತೆಗೆ ಅಡ್ಡಿಪಡಿಸುವುದನ್ನು ಮುಂದುವರೆಸದಂತೆ ಸಾಮಾನ್ಯ ಜ್ಞಾನವನ್ನು ಉಪಯೋಗಿಸಿ ಎಂದು ರೋಹಿತ್ ಶರ್ಮಾ ಮಾಧ್ಯಮಕ್ಕೆ ಆಗ್ರಹಿಸಿದ್ದಾರೆ.

ಅಸಮಾಧಾನ ವ್ಯಕ್ತಪಡಿಸಿದ ಹಿಟ್‌ಮ್ಯಾನ್

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ ಪೋಸ್ಟ್ ಹಂಚಿಕೊಂಡ ರೋಹಿತ್ ಸ್ಟಾರ್ ಸ್ಪೋರ್ಟ್ಸ್ ಅನ್ನು ಟೀಕಿಸಿದರು: "ಕ್ರಿಕೆಟಿಗರ ಜೀವನದಲ್ಲಿ ಗೌಪ್ಯತೆ ಇಲ್ಲದಂತಾಗಿದೆ. ನಾವು ನಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ, ತರಬೇತಿ ಅಥವಾ ಪಂದ್ಯದ ದಿನಗಳಲ್ಲಿ ಗೌಪ್ಯವಾಗಿ ನಡೆಸುವ ಪ್ರತಿಯೊಂದು ಹೆಜ್ಜೆ ಮತ್ತು ಸಂಭಾಷಣೆಯನ್ನು ಕ್ಯಾಮೆರಾಗಳು ರೆಕಾರ್ಡ್ ಮಾಡುತ್ತಿವೆ." ಎಂದು ಹೇಳಿದ್ದಾರೆ.

ನಾವು ನಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಖಾಸಗಿಯಾಗಿ ನಡೆಸುತ್ತಿರುವ ಪ್ರತಿಯೊಂದು ಹೆಜ್ಜೆ ಮತ್ತು ಸಂಭಾಷಣೆಯನ್ನು ರೆಕಾರ್ಡ್ ಮಾಡುತ್ತಿವೆ, ತರಬೇತಿ ಅಥವಾ ಪಂದ್ಯದ ದಿನಗಳಲ್ಲಿ ನನ್ನ ಸಂಭಾಷಣೆಯನ್ನು ರೆಕಾರ್ಡ್ ಮಾಡದಂತೆ ಸ್ಟಾರ್ ಸ್ಪೋರ್ಟ್ಸ್ ಕೇಳಿಕೊಂಡರೂ, ರೆಕಾರ್ಡ್ ಮಾಡುವುದಲ್ಲದೆ ಪ್ರಸಾರ ಕೂಡ ಮಾಡಲಾಗುತ್ತಿದೆ.

ಹೆಚ್ಚಿನ ವೀಕ್ಷಣೆಗಳನ್ನು ಮತ್ತು ಕ್ಲಿಕ್‌ಗಳನ್ನು ಪಡೆಯಲು ಈ ರೀತಿ ಮಾಡುವುದು ಒಂದು ದಿನ ಅಭಿಮಾನಿಗಳು, ಕ್ರಿಕೆಟಿಗರು ಮತ್ತು ಕ್ರಿಕೆಟ್ ನಡುವಿನ ನಂಬಿಕೆಯನ್ನು ಮುರಿಯುತ್ತದೆ ಎಂದು ಹೇಳಿದ್ದಾರೆ.

ಕೆಕೆಆರ್ ಪಂದ್ಯದ ವೇಳೆ ವಿಡಿಯೋ ವೈರಲ್

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೊಂದಿಗಿನ ಸಂಭಾಷಣೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ರೋಹಿತ್ ಅವರು ಅಸಮಾಧಾನ ವ್ಯಕ್ತವಾಗಿದೆ.

ಕೆಲವು ದಿನಗಳ ಹಿಂದೆ, ರೋಹಿತ್ ಶರ್ಮಾ ಭಾರತ ತಂಡದ ಸಹ ಆಟಗಾರ ಧವಲ್ ಕುಲಕರ್ಣಿ ಅವರೊಂದಿಗೆ ಸಂಭಾಷಣೆಯನ್ನು ರೆಕಾರ್ಡ್ ಮಾಡುವಾಗ ಆಡಿಯೊವನ್ನು ನಿಷ್ಕ್ರಿಯಗೊಳಿಸಲು ಅಧಿಕೃತ ಪ್ರಸಾರಕರ ಕ್ಯಾಮರಾಮನ್‌ಗೆ ಮನವಿ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದೆ.

"ಸಹೋದರ ದಯವಿಟ್ಟು ಆಡಿಯೋವನ್ನು ಬಂದ್ ಮಾಡಿ, ಒಂದು ಆಡಿಯೋದಿಂದ ನನಗೆ ಸಮಸ್ಯೆ ಎದುರಾಗಿದೆ" ಎಂದು ರೋಹಿತ್ ಸ್ಟಾರ್ ಸ್ಪೋರ್ಟ್ಸ್ ರೆಕಾರ್ಡ್ ಮಾಡಿದ ಕ್ಲಿಪ್‌ನಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+