ODI World Cup: ಈ ಬಾರಿ ವಿಶ್ವಕಪ್‌ ಗೆಲ್ಲಲು ಉತ್ತಮ ಅವಕಾಶ ಇದೆ: ನಾಯಕ ರೋಹಿತ್ ಶರ್ಮಾ ವಿಶ್ವಾಸ

2023ರ ಏಕದಿನ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸುತ್ತಿದ್ದು ಈ ಬಾರಿ ಟ್ರೋಫಿ ಗೆಲ್ಲಲ್ಲು ಭಾರತ ತಂಡಕ್ಕೆ ಉತ್ತಮ ಅವಕಾಶ ಇದೆ ಎಂದು ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ದಶಕದಿಂದ ಯಾವುದೇ ಐಸಿಸಿ ಟ್ರೋಫಿ ಗೆಲ್ಲದ ಭಾರತಕ್ಕೆ ಈ ಬಾರಿ ತವರಿನಲ್ಲಿ ಪಂದ್ಯಾವಳಿ ನಡೆಯುತ್ತಿರುವುದು ಗೆಲುವಿನ ಆಸೆಯನ್ನು ಹೆಚ್ಚಿಸಿದೆ.

ಈ ಬಗ್ಗೆ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿ ಈ ಭಾರಿ ಭಾರತದಲ್ಲಿ ವಿಶ್ವಕಪ್ ನಡೆಯುತ್ತಿರುವ ಕಾರಣ ನಮಗೆ ಅಭೂತಪೂರ್ವ ಬೆಂಬಲ ಸಿಗಲಿದೆ. 12 ವರ್ಷಗಳ ಹಿಂದೆ ಭಾರತದಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆದಿತ್ತು ಮತ್ತು ಆ ವರ್ಷ ಭಾರತವೇ ಚಾಂಪಿಯನ್ ಆಗಿತ್ತು, ಇತಿಹಾಸ ಈ ಬಾರಿ ಮರುಕಳಿಸಲಿದೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

Rohit Sharma Eyes World Cup 2023 Triumph with Strong Home Support

ಈ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮಾ "ನಾನು ಏಕದಿನ ವಿಶ್ವಕಪ್‌ ಟ್ರೋಫಿಯನ್ನು ಅಷ್ಟು ಹತ್ತಿರದಲ್ಲಿ ನೋಡಿಲ್ಲ. 2011ರಲ್ಲಿ ಭಾರತ ಗೆದ್ದಾಗಲೂ ನಾನು ತಂಡದ ಭಾಗವಾಗಿರಲಿಲ್ಲ. ಟ್ರೋಫಿ ಸುಂದರವಾಗಿ ಕಾಣುತ್ತದೆ, ಟ್ರೋಫಿಯ ಹಿಂದೆ ಹಲವು ನೆನಪುಗಳು ಇವೆ" ಎಂದು ರೋಹಿತ್ ಶರ್ಮಾ ಟ್ರೋಫಿಯ ಜೊತೆ ಫೋಟೊ ತೆಗೆಸಿಕೊಂಡ ಸಂದರ್ಭದಲ್ಲಿ ಹೇಳಿದ್ದಾರೆ.

"ಟ್ರೋಫಿ ಸುಂದರವಾಗಿ ಕಾಣುತ್ತದೆ ಮತ್ತು ಈ ಬಾರಿ ನಾವು ಅದನ್ನು ಮೇಲಕ್ಕೆತ್ತಬಹುದು" ಎಂದು ಪ್ರಸ್ತುತ ಯುನೈಟೆಡ್ ಸ್ಟೇಸ್ಟ್‌ಲ್ಲಿರುವ ರೋಹಿತ್ ಹೇಳಿದ್ದಾರೆಂದು ಐಸಿಸಿ ವರದಿ ಮಾಡಿದೆ. ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ಏಕದಿನ ವಿಶ್ವಕಪ್ ಪಂದ್ಯಾವಳಿಯು ಭಾರತದ 10 ಸ್ಥಳಗಳಲ್ಲಿ ನಡೆಯಲಿದೆ.

ತವರಿನಲ್ಲಿ ಆಡಲು ಕಾಯುತ್ತಿದ್ದೇವೆ

"ನಾವು ಆಡುವ ಪ್ರತಿ ಮೈದಾನದಲ್ಲೂ ನಮಗೆ ಭಾರಿ ಬೆಂಬಲ ಸಿಗುತ್ತದೆ ಎಂದು ನಮಗೆ ತಿಳಿದಿದೆ. ಇದು ವಿಶ್ವಕಪ್ ಆಗಿದ್ದು ಎಲ್ಲಾ ಆಟಗಾರರೂ ಇದಕ್ಕಾಗಿ ಎದುರು ನೋಡುತ್ತಿದ್ದಾರೆ. 12 ವರ್ಷಗಳ ನಂತರ ಭಾರತದಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದೆ. 2011ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆದಾಗ ಚಾಂಪಿಯನ್ ಆಗಿದ್ದೆವು, 2016ರಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್ ನಡೆದಿತ್ತು ಆಗ ಟಿ20 ವಿಶ್ವಕಪ್ ಗೆಲ್ಲಲು ಆಗಲಿಲ್ಲ, ಈಗ ನಮಗೆ ಏಕದಿನ ವಿಶ್ವಕಪ್ ಗೆಲ್ಲಲು ಉತ್ತಮ ಅವಕಾಶ ಇದೆ" ಎಂದು ಹೇಳಿದರು.

"2011 ನಮಗೆಲ್ಲರಿಗೂ ಸ್ಮರಣೀಯವಾದದ್ದು, ನಾನು ಅದನ್ನು ಮನೆಯಿಂದಲೇ ನೋಡಿದ್ದೇನೆ, ಪ್ರತಿಯೊಂದು ಪಂದ್ಯವನ್ನು, ಆಡುತ್ತಿದ್ದ ಪ್ರತಿಯೊಂದು ಬಾಲ್ ಅನ್ನು ನಾನು ನೆನಪಿಸಿಕೊಳ್ಳುತ್ತೇನೆ." ಎಂದು ಹೇಳಿದರು.

"2015 ಮತ್ತು 2019ರಲ್ಲಿ ನಡೆದ ಏಕದಿನ ವಿಶ್ವಕಪ್‌ ತಂಡದಲ್ಲಿ ನಾನು ಇದ್ದೆ. ವಿಶ್ವಕಪ್ ಆಡುವುದು ನಿಜವಾಗಿಯೂ ಉತ್ತಮವಾಗಿದೆ. ನಾವು ಸೆಮಿಫೈನಲ್‌ಗೆ ಹೋದೆವು, ಫೈನಲ್‌ಗೆ ಹೋಗಲು ಮತ್ತು ಫೈನಲ್‌ನಲ್ಲಿ ಉತ್ತಮವಾಗಿ ಆಡಲು ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಿದೆವು, ಆದರೂ ಫೈನಲ್‌ ತಲುಪಲು ಆಗಲಿಲ್ಲ" ಎಂದು ಹೇಳಿದರು. 2019ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ 5 ಶತಕಗಳನ್ನು ಸಿಡಿಸಿ ಮಿಂಚಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+