Rohit Sharma: ಕೊಹ್ಲಿ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ 'ಹಿಟ್‌ಮ್ಯಾನ್'

ಭಾನುವಾರ ಭಾರತೀಯ ಕ್ರಿಕೆಟ್‌ ಪ್ರೇಮಿಗಳಿಗೆ ಅತೀವ ಖುಷಿ ಮತ್ತು ದುಖಃ ಎರಡನ್ನೂ ಅನುಭವಿಸುವ ಅವಕಾಶ. ಒಂದು ಕಡೆ 13 ವರ್ಷಗಳ ಬಳಿಕ ಭಾರತ ಐಸಿಸಿ ಟ್ರೋಫಿ ಗೆದ್ದರೆ ಮತ್ತೊಂದು ಕಡೆ ಇಬ್ಬರು ದಿಗ್ಗಜರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಭಾರತ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ಇದೇ ನನ್ನ ಕೊನೆಯ ಟಿ20 ವಿಶ್ವಕಪ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಹೇಳುವ ಮೂಲಕ ಗೆಲುವಿನ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಮೊದಲ ಶಾಕ್ ಕೊಟ್ಟರು.

Rohit Sharma Announces T20I Retirement Following Virat Kohli

ಕಿಂಗ್ ಕೊಹ್ಲಿ ವಿದಾಯ ಹೇಳಿದ ಬೆನ್ನಲ್ಲೇ ನಾಯಕ ರೊಹಿತ್ ಶರ್ಮಾಕೂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿ ಅಭಿಮಾನಿಗಳಿಗೆ ಮತ್ತೊಂದು ಆಘಾತ ಕೊಟ್ಟರು.

ಐಸಿಸಿ ಟ್ರೋಫಿಯೊಂದಿಗೆ ವಿದಾಯ

ರೋಹಿತ್ ಶರ್ಮಾ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಭಾರತ ಹಲವು ಬಾರಿ ಐಸಿಸಿ ಟ್ರೋಫಿ ಗೆಲ್ಲುವ ಸನಿಹಕ್ಕೆ ಬಂದು ಎಡವಿತ್ತು. ಕಳೆದ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋಲು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋಲು, 2023ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಸೋಲು ರೋಹಿತ್ ಪಡೆಗೆ ನುಂಗಲಾರದ ತುತ್ತಾಗಿತ್ತು.

ವಿರಾಟ್, ರೋಹಿತ್ ಅವರಿಗೆ ಇದೇ ಕೊನೆಯ ಟಿ20 ವಿಶ್ವಕಪ್ ಎನ್ನುವುದು ಗೊತ್ತಿತ್ತು. ಆಟಗಾರನಾಗಿ ಐಸಿಸಿ ಟ್ರೋಫಿ ಗೆಲ್ಲದ ರಾಹುಲ್ ದ್ರಾವಿಡ್ ಅವರಿಗೆ ಕೋಚ್‌ ಆಗಿ ಆ ಕೊರತೆ ನೀಗಿಸಿಕೊಳ್ಳಲು ಇದು ಕೊನೆಯ ಅವಕಾಶವಾಗಿತ್ತು. ಕೊನೆಗೂ ಕೋಟ್ಯಂತರ ಭಾರತೀಯರ ಹಾರೈಕೆ, ಆಟಗಾರರ ಛಲ ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟಿದೆ.

ಈಗ ಕೊಹ್ಲಿ, ರೋಹಿತ್ ನೆಮ್ಮದಿಯಿಂದ ವಿದಾಯ ಹೇಳಿದ್ದರೆ. ದ್ರಾವಿಡ್ ಕೂಡ ಖುಷಿಯಿಂದಲೇ ಕೋಚ್ ಸ್ಥಾನವನ್ನು ಬಿಟ್ಟುಕೊಡಲಿದ್ದಾರೆ.

ಹಿಟ್‌ಮ್ಯಾನ್‌ ಹೇಳಿದ್ದೇನು?

ಇದು ನನ್ನ ಕೊನೆಯ ಪಂದ್ಯವೂ ಆಗಿತ್ತು. ನಾನು ಈ ಸ್ವರೂಪವನ್ನು ಆಡಲು ಪ್ರಾರಂಭಿಸಿದ ಸಮಯದಿಂದ ನಾನು ಆನಂದಿಸಿದೆ. ಈ ಸ್ವರೂಪಕ್ಕೆ ವಿದಾಯ ಹೇಳಲು ಉತ್ತಮ ಸಮಯ. ನಾನು ಈ ಪ್ರತಿಯೊಂದು ಕ್ಷಣವನ್ನು ಪ್ರೀತಿಸುತ್ತೇನೆ. ನಾನು ಬಯಸಿದ್ದು ಇದನ್ನೇ ನಾನು ಕಪ್ ಗೆಲ್ಲಲು ಬಯಸಿದ್ದೆ ಎಂದು ರೋಹಿತ್ ಶರ್ಮಾ ಪಂದ್ಯದ ನಂತರ ಹೇಳಿದರು.

ಇಂತಹ ತಂಡವನ್ನು ಹೊಂದಲು ನಾನು ಅದೃಷ್ಟ ಮಾಡಿದ್ದೇನೆ. ಪ್ರಶಸ್ತಿ ಗೆಲ್ಲುವುದು ನನಗೆ ತುಂಬಾ ಅಗತ್ಯವಾಗಿತ್ತು. ಇಷ್ಟು ವರ್ಷಗಳಲ್ಲಿ ನಾನು ಗಳಿಸಿದ ಎಲ್ಲಾ ರನ್‌ಗಳು, ಅಂಕಿ ಅಂಶಗಳು ನನಗೆ ಮುಖ್ಯವಲ್ಲ. ಆದರೆ ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲುವುದು, ಭಾರತಕ್ಕಾಗಿ ಟ್ರೋಫಿಗಳನ್ನು ಗೆಲ್ಲುವುದು, ಅದನ್ನೇ ನಾನು ಎದುರುನೋಡುತ್ತೇನೆ," ಎಂದು ಹೇಳಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಇಬ್ಬರು ದಿಗ್ಗಜರ ವೃತ್ತಿಜೀವನ ಯುಗಾಂತ್ಯವಾಗಿದೆ. ಆದರೆ ಇಬ್ಬರೂ ಇನ್ನೂ ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಇದೆ. ಭಾರತ ತಂಡದ ಜೆರ್ಸಿಯಲ್ಲಿ ಇಬ್ಬರನ್ನು ನೋಡಲು ಆಗದೇ ಇದ್ದರು, ಐಪಿಎಲ್‌ನಲ್ಲಿ ಇಬ್ಬರನ್ನು ಇನ್ನೊಮ್ಮೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+