T20 World Cup: ಕಪ್‌ ಬರವನ್ನು ನೀಗಿಸಲು ವಿರಾಟ್, ರೋಹಿತ್‌ಗೆ ಕೊನೆಯ ಚಾನ್ಸ್‌!

ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್‌ನ ಸೂಪರ್‌ ಸ್ಟಾರ್ ಆಟಗಾರರು. ಈ ಪ್ಲೇಯರ್‌ಗಳು ಟೀಮ್ ಇಂಡಿಯಾದ ಬ್ಯಾಟಿಂಗ್ ಬೆನ್ನೆಲೆಬು. ಈ ಸ್ಟಾರ್ ಆಟಗಾರರು ಟೀಮ್ ಇಂಡಿಯಾವನ್ನು ಪ್ರತಿನಿಧಿಸಿ ದಶಕಗಳೇ ಕಳೆದಿವೆ. ಅಲ್ಲದೆ ತಂಡದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಈ ಇಬ್ಬರಿಗೂ ಚುಟುಕು ಕ್ರಿಕೆಟ್ ಮಾದರಿ ಇದೇ ಕೊನೆಯದ್ದಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಿರುವಾ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್, ರೋಹಿತ್‌ ಗೆ ಇದು ಕಪ್‌ ಗೆಲುವಿನ ಬರವನ್ನು ನೀಗಿಸಲು ಕೊನೆಯ ಚಾನ್ಸ್‌.

ರೋಹಿತ್ 2007 ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರೆ, ಕೊಹ್ಲಿ ಒಂದು ವರ್ಷದ ನಂತರ ಭಾರತ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರಿಬ್ಬರ ಕ್ರಿಕೆಟ್ ಪಯಣ ಒಟ್ಟೊಟ್ಟಿಗೆ ಸಾಗಿದ್ದು, ಇವರ ಜೋಡಿ ಆಗಾಗ ಮೈದಾನದಲ್ಲಿ ಸ್ಟಾರ್ ಬೌಲರ್‌ಗಳ ಹೆಡೆ ಮುರಿ ಕಟ್ಟುವುದನ್ನು ಕಾಣುತ್ತೇವೆ. ಈ ಬಾರಿಯ ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ.,ಈ ಬಾರಿಯ ವಿಶ್ವಕಪ್‌ ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್ ನ ಆತಿಥ್ಯದಲ್ಲಿ ನಡೆಯಲಿದೆ. ಈ ಮೆಗಾ ಟೂರ್ನಿಯಲ್ಲಿ ಟೀಮ್ ಇಂಡಿಯಾ ಕಪ್ ಗೆಲ್ಲುವಿನ ನೆಚ್ಚಿನ ತಂಡ ಎಂದು ಹೇಳಲಾಗುತ್ತಿದೆ.

Rohit Sharma and Virat Kohli s Last Chance Strategies to Lead India to Victory in the T20 World Cup 2024

ಈ ಸ್ಟಾರ್ ಆಟಗಾರರಿಗೆ ಇದು ಕೊನೆಯ ಚುಟುಕು ಟಿ20 ವಿಶ್ವಕಪ್ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಸ್ಟಾರ್ ಆಟಗಾರರು ಈ ಬಾರಿ ಶತಾಯ ಗತಾಯ ಪ್ರಯತ್ನ ಪಟ್ಟು ಕಪ್‌ ಗೆಲ್ಲುವ ಆಸೆಯನ್ನು ಹೊಂದಿದ್ದಾರೆ. ಇದು ವಿರಾಟ್ ಮತ್ತು ರೋಹಿತ್‌ಗೆ ಕೊನೆಯ ವಿಶ್ವಕಪ್ ಆಗಿರಬಹುದು, ಆದ್ದರಿಂದ ರೋಹಿತ್ ಮತ್ತು ವಿರಾಟ್ ಭಾರತೀಯ ತಂಡವನ್ನು ಹೇಗೆ ವಿಶ್ವ ಚಾಂಪಿಯನ್ ಮಾಡಬಹುದು ಎಂಬುದರ ಕುರಿತು ಈ ಅಂಶಗಳನ್ನು ಚರ್ಚಿಸೋಣ.

ಆಕ್ರಮಣಕಾರಿಯ ಅವಶ್ಯಕತೆ ಇಲ್ಲ

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಇತ್ತೀಚಿನ ದಿನಗಳಲ್ಲಿ ಆಕ್ರಮಣಕಾರಿ ಆಟವನ್ನು ಆಡುತ್ತಾರೆ. ತವರಿನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್ ಅಮೋಘ ಆಟವನ್ನು ಪ್ರದರ್ಶಿಸಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ನಿರಾಸೆ ಅನುಭವಿಸಿದ್ದರು. ಈಗ ರೋಹಿತ್ 2024 ರ ಟಿ 20 ವಿಶ್ವಕಪ್‌ನಲ್ಲಿ ಅತಿಯಾಗಿ ಆಕ್ರಮಣಕಾರಿಯಾಗುವುದನ್ನು ನಿಲ್ಲಿಸಬೇಕಾಗಿದೆ. ಅವರು ಐಪಿಎಲ್ 2024 ರಲ್ಲಿ ಆಕ್ರಮಣಕಾರಿ ಆಟವನ್ನು ತೋರಿಸಿದ್ದರು. ಆದರೆ ಅವರು ಟಿ 20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸಿದರೆ, ಅವರು ಆಟದ ಶೈಲಿಯನ್ನು ಬದಲಿಸಿಕೊಳ್ಳಬೇಕಾಗುತ್ತದೆ.

Rohit Sharma and Virat Kohli s Last Chance Strategies to Lead India to Victory in the T20 World Cup 2024

ವಿರಾಟ್ ಕೊಹ್ಲಿ ತಮ್ಮ ಸ್ಟ್ರೈಕ್ ರೇಟ್ ಸುಧಾರಿಸಿಕೊಳ್ಳಬೇಕು

ಹೊಡಿ ಬಡಿ ಆಟಕ್ಕೆ ಮೇನ್ ಆಗಿ ಸ್ಟ್ರೈಕ್ ರೋಟೆಟ್ ಹಾಗೂ ಪವರ್ ಹಿಟ್ಟಿಂಗ್ ಎಬಿಲಿಟಿ ತುಂಬಾನೇ ಮುಖ್ಯ. ಈ ಎರಡೂ ಗುಣಗಳನ್ನು ಆಪೋಶನ ಮಾಡಿಕೊಂಡ ವ್ಯಕ್ತಿ ದೊಡ್ಡ ದೊಡ್ಡ ಇನ್ನಿಂಗ್ಸ್‌ ಕಟ್ಟಲು ಸಹಾಯವಾಗುತ್ತದೆ. ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರತದ ಪರ 117 ಟಿ20 ಪಂದ್ಯಗಳನ್ನಾಡಿದ್ದು 51.75ರ ಸರಾಸರಿಯಲ್ಲಿ 4,037 ರನ್ ಗಳಿಸಿದ್ದಾರೆ. ಚುಟುಕು ಸ್ವರೂಪದಲ್ಲಿ ಅವರ ಸ್ಟ್ರೈಕ್ ರೇಟ್ ಸುಮಾರು 138 ಆಗಿದೆ.

ವಿರಾಟ್ ಕೊಹ್ಲಿ ತಮ್ಮ ಸ್ಟ್ರೈಕ್‌ ರೇಟ್ ಸುಧಾರಿಸಿಕೊಳ್ಳಲಿದ್ದರೆ ಈ ಬಾರಿಯೂ ಕಪ್ ಮಿಸ್ ಆಗಬಹುದು. ಸವಾಲಿನ ಗುರಿಯನ್ನು ಸಹ ಈಗಿನ ಯುಗದ ಬ್ಯಾಟರ್‌ಗಳು ಸುಲಭವಾಗಿ ಚೇಸ್ ಮಾಡುತ್ತಾರೆ. ಭಾರತದ ಬ್ಯಾಟಿಂಗ್‌ನ ಬೆನ್ನೆಲುಬು ಎಂದು ಪರಿಗಣಿಸಲ್ಪಟ್ಟಿರುವ ವಿರಾಟ್ ಭಾರತ ತಂಡಕ್ಕೂ ಮುಖ್ಯವಾಗಿದೆ, ಆದ್ದರಿಂದ ಅವರು ವೇಗವಾಗಿ ಆಡುವುದು ಅನಿವಾರ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+