Virat Kohli: ವಿರಾಟ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ರಿಜ್ವಾನ್ ಹೇಳಿದ ಭವಿಷ್ಯ ಏನು?

ವಿರಾಟ್ ಕೊಹ್ಲಿ ತಮ್ಮ 35ನೇ ಹುಟ್ಟು ಹಬ್ಬ ಆಚರಣೆಗೆ ಸಜ್ಜಾಗುತ್ತಿದ್ದಾರೆ. ನವೆಂಬರ್ 5ರಂದು ಕೊಹ್ಲಿ 35ನೇ ವಯಸ್ಸಿಗೆ ಕಾಲಿಡಲಿದ್ದು, ಅಂದೇ ಭಾರತ ದಕ್ಷಿಣ ಆಫ್ರಿಕಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಅಭಿಮಾನಿಗಳಿಗೆ ಎರಡು ಖುಷಿ ಒಟ್ಟೊಟ್ಟಿಗೆ ಸಿಕ್ಕಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಈ ಪಂದ್ಯ ನಡಯಲಿದೆ.

ಪಾಕಿಸ್ತಾನದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್, ಮೊಹಮ್ಮದ್ ರಿಜ್ವಾನ್, ವಿರಾಟ್ ಕೊಹ್ಲಿಗೆ ತಮ್ಮ ಆರಂಭಿಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಈಡನ್ ಗಾರ್ಡನ್ಸ್‌ನಲ್ಲಿ ಮಂಗಳವಾರ ಪಾಕಿಸ್ತಾನ ಬಾಂಗ್ಲಾದೇಶ ಮುಖಾಮುಖಿಯಾಗಿದ್ದವು, ಈ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

birthday-greeting-to-virat-kohli

ಬಾಮಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ಅಭ್ಯಾಸದ ಸಮಯದಲ್ಲಿ, ಮೊಹಮ್ಮದ್ ರಿಜ್ವಾನ್ ವಿರಾಟ್ ಕೊಹ್ಲಿಗೆ ಶುಭಾಶಯ ಕೋರಿದರು. ಇಂಡಿಯಾ ಟುಡೇ - ಆಜ್ ತಕ್ ಜೊತೆ ಮಾತನಾಡಿದ ಅವರು, "ನವೆಂಬರ್ 5 ರಂದು ಅವರ ಜನ್ಮದಿನ. ನಾನು ನನ್ನ ಸ್ವಂತ ಹುಟ್ಟುಹಬ್ಬವನ್ನು ಆಚರಿಸದಿದ್ದರೂ ನಾನು ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ. ನಾನು ವಿರಾಟ್ ಕೊಹ್ಲಿಗೆ ಶುಭ ಹಾರೈಕೆಗಳನ್ನು ಕಳುಹಿಸುತ್ತಿದ್ದೇನೆ ಮತ್ತು ಅವರ ಜನ್ಮದಿನದಂದು ಅವರು ತಮ್ಮ 49 ನೇ ಏಕದಿನ ಶತಕವನ್ನು ಗಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಈ ವಿಶ್ವಕಪ್‌ನಲ್ಲಿ ಅವರು ತಮ್ಮ 50ನೇ ಏಕದಿನ ಶತಕವನ್ನು ತಲುಪುತ್ತಾರೆ ಎಂದು ನಾನು ನಂಬಿದ್ದೇನೆ" ಎಂದು ಶುಭ ಹಾರೈಸಿದ್ದಾರೆ.

ಬಾಬರ್ ಆಜಂ ಹೇಳಿದ್ದೇನು?

ಮತ್ತೊಂದೆಡೆ, ಪಾಕಿಸ್ತಾನದ ನಾಯಕ, ಬಾಬರ್ ಅಜಮ್, ವಿರಾಟ್ ಅವರ 35 ನೇ ಹುಟ್ಟುಹಬ್ಬದ ಬಗ್ಗೆ ಕೇಳಿದಾಗ ಹೆಚ್ಚು ಹೇಳಲಿಲ್ಲ. ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಕೆಲವು ಕಠಿಣ ಸಮಯವನ್ನು ಎದುರಿಸುತ್ತಿದ್ದರೂ, ಸತತ ನಾಲ್ಕು ಸೋಲುಗಳೊಂದಿಗೆ ಪಾಕಿಸ್ತಾನ ಸೆಮಿಫೈನಲ್ ಸ್ಥಾನ ಅಪಾಯದಲ್ಲಿದೆ.

ಏಕದಿನ ವಿಶ್ವಕಪ್‌ನಲ್ಲಿ ಭಾರತ ಇದುವರೆಗೂ ಆರು ಪಂದ್ಯಗಳನ್ನು ಆಡಿದ್ದು, ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನವೆಂಬರ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದರೆ ಭಾರತದ ಸೆಮಿಫೈನಲ್ ಸ್ಥಾನ ಖಚಿತವಾಗಲಿದೆ.

ಇನ್ನು ವಿರಾಟ್ ಕೊಹ್ಲಿ ಹುಟ್ಟುಹಬ್ಬ ಕೂಡ ಇರುವ ಕಾರಣ ಅವರಿಂದ ಶತಕವನ್ನು ಅಭಿಮಾನಿಗಳು ನಿರೀಕ್ಷೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಇನ್ನೊಂದು ಶತಕ ಗಳಿಸಿದರೆ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟುತ್ತಾರೆ. ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳುವ ಅವಕಾಶ ಕೂಡ ಅವರಿಗೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+