Shreyanka Patil: ಕೋಟ್ಯಂತರ ಹುಡುಗರ ಹೃದಯ ಕದ್ದು ನ್ಯಾಷನಲ್ ಕ್ರಷ್ ಆದ ಆರ್‌ಸಿಬಿ ಪ್ಲೇಯರ್ ಶ್ರೇಯಾಂಕಾ ಪಾಟೀಲ್!
RCB.. RCB.. RCB.. ಹಿಂಗೆ ಕನ್ನಡಿಗರ ಕಣ ಕಣದಲ್ಲೂ ಆರ್‌ಸಿಬಿ ಅನ್ನೋ ಪದ ಇದೀಗ ಬೆರೆತು ಹೋಗಿದೆ. 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ತಂಡವನ್ನು ಕನ್ನಡಿಗರು ಪ್ರತಿ ಹಂತದಲ್ಲೂ ಪ್ರೀತಿ ಮಾಡುತ್ತಾರೆ. ಸೋಲು & ಗೆಲುವಿನ ಸಮಯದಲ್ಲಿ ಆರ್‌ಸಿಬಿ ಪರವಾಗಿ ಕನ್ನಡಿಗರು ಗಟ್ಟಿಯಾಗಿ ನಿಂತಿದ್ದಾರೆ. ಹೀಗಿದ್ದಾಗಲೇ 'WPL' ಅಂದ್ರೆ ವುಮೆನ್ಸ್ ಪ್ರಿಮಿಯರ್ ಲೀಗ್ ಭರ್ಜರಿ ಹವಾ ಎಬ್ಬಿಸಿದೆ. ಅದರಲ್ಲೂ ಕನ್ನಡತಿ ಹಾಗೂ ಆರ್‌ಸಿಬಿ (RCB) ತಂಡದ ಮಹಿಳಾ ಆಟಗಾರ್ತಿ 'ಶ್ರೇಯಾಂಕಾ ಪಾಟೀಲ್' ನ್ಯಾಷನಲ್ ಕ್ರಷ್ ಆಗಿದ್ದಾರೆ!
'ಐಪಿಎಲ್' ಟೂರ್ನಿ ಭಾರತೀಯರ ಭಾವನೆ ಜೊತೆ ಬೆರೆತು ಹೋಗಿದೆ. ಹೀಗಾಗಿಯೇ ಐಪಿಎಲ್ ಶುರುವಾಯ್ತು ಅಂದರೆ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಎಲ್ಲ ಪಂದ್ಯಕ್ಕೂ ಕಾಯುತ್ತಾರೆ. ಈಗಲೂ ಅಷ್ಟೇ ಅಭಿಮಾನಿಗಳು ಆರ್‌ಸಿಬಿ ಪರ ನಿಂತು ಸಪೋರ್ಟ್ ಮಾಡುತ್ತಿದ್ದಾರೆ. ಆದರೆ ಈ ಬಾರಿ ಫ್ಯಾನ್ಸ್ ಬೆಂಬಲ ನೀಡುತ್ತಿರುವುದು 'WPL' ಅಂದ್ರೆ ವುಮೆನ್ಸ್ ಪ್ರಿಮಿಯರ್ ಲೀಗ್‌ನ ಆರ್‌ಸಿಬಿ ಮಹಿಳಾ ತಂಡಕ್ಕೆ. ಹೀಗಿದ್ದಾಗ ಆರ್‌ಸಿಬಿ ತಂಡದ ಅತ್ಯುತ್ತಮ ಆಟಗಾರ್ತಿ ಮತ್ತು ಕನ್ನಡತಿ 'ಶ್ರೇಯಾಂಕಾ ಪಾಟೀಲ್'ಗೆ ಕೋಟಿ ಕೋಟಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

ಕಪ್ ಗೆಲ್ಲುತ್ತಾ ಆರ್‌ಸಿಬಿ ತಂಡ?
ಕನ್ನಡಿಗರ ಹೆಮ್ಮೆಯ ತಂಡ ಆರ್‌ಸಿಬಿ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಆದರೂ ಫ್ಯಾನ್ಸ್ ಮಾತ್ರ ಆರ್‌ಸಿಬಿ ತಂಡವನ್ನು ಬಿಟ್ಟುಕೊಡದೆ, ಹಲವು ವರ್ಷಗಳ ಕಾಲ ಆರ್‌ಸಿಬಿ ತಂಡದ ಪರ ನಿಂತಿದ್ದಾರೆ. ಇದೀಗ ಮಹಿಳಾ ಪ್ರಿಮಿಯರ್ ಲೀಗ್‌ನಲ್ಲಿ ಕೂಡ ಆರ್‌ಸಿಬಿ ತಂಡವನ್ನು, ಕನ್ನಡಿಗರು ಬೆಂಬಲಿಸುತ್ತಿದ್ದಾರೆ. ಅದೇ ರೀತಿ ಇದೀಗ ಶ್ರೇಯಾಂಕ ಪಾಟೀಲ್ ಅವರ ಆಟಕ್ಕೆ ಕೂಡ ಕನ್ನಡಿಗರು ಫಿದಾ ಆಗಿದ್ದು, ಎಲ್ಲೆಲ್ಲೂ ಶ್ರೇಯಾಂಕ ಪಾಟೀಲ್ ಹೆಸರು ಪ್ರತಿಧ್ವನಿಸಿ ಸಪೋರ್ಟ್ ಬಲು ಜೋರಾಗಿದೆ. ಹಾಗೇ ಶ್ರೇಯಾಂಕ ಪಾಟೀಲ್ ಅವರನ್ನು ಅಭಿಮಾನಿಗಳು ಸಖತ್ ಇಷ್ಟಪಡುತ್ತಿದ್ದಾರೆ.
ನಮ್ಮ ಬೆಂಗಳೂರು.. ನಮ್ಮ ಹೆಮ್ಮೆ..!
ಬೆಂಗಳೂರು ಟೀಂ ಐಪಿಎಲ್ ಟೂರ್ನಿ ಗೆದ್ದೆ ಗೆಲ್ಲುತ್ತೆ ಅಂತ ಅಭಿಮಾನಿಗಳು ಕಾಯುತ್ತಾ ಇದ್ದಾರೆ ಹೀಗಾಗಿ, ಈ ಸಲ ಕಪ್ ನಮ್ದೆ ಘೋಷ ವಾಖ್ಯ ವೈರಲ್ ಆಗಿದೆ & ಆರ್‌ಸಿಬಿ ಬೆಂಗಳೂರು ತಂಡದ ಅಭಿಮಾನಿಗಳು ತಮ್ಮ ತಂಡದ ಗೆಲುವಿಗೆ ಕಾಯ್ತಾ ಕೂತಿದ್ದಾರೆ. ಅದು ಹುಡುಗರ ತಂಡವಾದ್ರು ಸರಿ, ಅಥವಾ ಮಹಿಳಾ ತಂಡವಾದ್ರೂ ಸರಿ ಆದ್ರೆ ಆರ್‌ಸಿಬಿ ತಂಡ ಕಪ್ ಗೆಲ್ಲಬೇಕೆಂಬುದು ಕೋಟಿ ಕೋಟಿ ಅಭಿಮಾನಿಗಳ ಬಯಕೆ. ಹೀಗಿದ್ದಾಗ ಇದೀಗ ಒಟ್ಟಾರೆ 6 ಪಂದ್ಯ ಆಡಿರುವ ಆರ್‌ಸಿಬಿ ಮಹಿಳಾ ತಂಡ 3 ಗೆಲುವು ಸಾಧಿಸಿ ಟಾಪ್ 2 ಸ್ಥಾನದಲ್ಲಿ ಇದೆ. ಹೀಗೆ ಕನ್ನಡಿಗರ ಆರ್‌ಸಿಬಿ ಟೀಂ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹಾಗೇ ಶ್ರೇಯಾಂಕ ಪಾಟೀಲ್ ಕೂಡ ಆರ್‌ಸಿಬಿ ಫ್ಯಾನ್ಸ್‌ಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲೂ ಹವಾ!
ಶ್ರೇಯಾಂಕ ಪಾಟೀಲ್ ಅವರ ಹೆಸರು ಇದೀಗ ಸೋಷಿಯಲ್ ಮೀಡಿಯಾದಲ್ಲೂ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಹಾಗೇ ಶೇಯಾಂಕ ಅವರನ್ನು ಹೊಗಳುವ ವಿಡಿಯೋಗಳನ್ನ ಎಡಿಟ್ ಮಾಡಿ ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ. ಹಾಗೇ ಶೇಯಾಂಕ ಆಟಕ್ಕೂ ಫ್ಯಾನ್ಸ್ ಈಗ ಫಿದಾ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶೇಯಾಂಕ ಅವರ ಹವಾ ಜೋರಾಗಿದೆ. ಅಲ್ಲದೆ ಈ ಬಾರಿ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಅನ್ನೋದು ಅಭಿಮಾನಿಗಳ ನಿರೀಕ್ಷೆ ಕೂಡ ಆಗಿದೆ.
ಒಟ್ನಲ್ಲಿ ಹೀಗೆ ನಮ್ಮ ಆರ್‌ಸಿಬಿ ನಮ್ಮ ಹೆಮ್ಮೆ ಅಂತಿದ್ದಾರೆ ಆರ್‌ಸಿಬಿ ಅಭಿಮಾನಿಗಳು. ಈ ಮೂಲಕ ಆರ್‌ಸಿಬಿ ಪರ ಘೋಷವಾಖ್ಯ ಪದೇ ಪದೇ ಮೊಳಗುತ್ತಿದೆ. ಬಹು ದಿನಗಳ ಕನಸು ಆರ್‌ಸಿಬಿ ಕಪ್ ಗೆಲ್ಲಬೇಕು ಎಂಬುದೇ ಆಗಿದ್ದು, ಅಭಿಮಾನಿಗಳ ಆಸೆಯನ್ನು ಈಗ ಮಹಿಳಾ ತಂಡ ಈಡೇರಿಸುತ್ತಾ? ವುಮೆನ್ಸ್ ಪ್ರಿಮಿಯರ್ ಲೀಗ್‌ನ ಕಪ್ ಗೆದ್ದು ಬೆಂಗಳೂರಿನ ಆರ್‌ಸಿಬಿ ತಂಡ ಹೊಸ ಇತಿಹಾಸ ನಿರ್ಮಿಸುತ್ತಾ? ಕಾದು ನೋಡಬೇಕಿದೆ.












Click it and Unblock the Notifications