ಆರ್‌ಸಿಬಿ ಪ್ಲೇಆಫ್ ಕನಸಿಗೆ ಇನ್ನೂ ಇದೆ ಜೀವ, ಆದರೆ ಹಿಂಗೆ ಆಗಬೇಕು ಅಷ್ಟೇ!
ಆರ್‌ಸಿಬಿ ತಂಡ ಕಪ್ ಗೆಲ್ಲಬೇಕು & ಆರ್‌ಸಿಬಿ ತಂಡಕ್ಕೆ ಕಪ್ ಬರಬೇಕು ಎಂಬುದು ಕೋಟಿ, ಕೋಟಿ ಕನ್ನಡಿಗರ ಆಸೆಯಾಗಿದೆ. ಆದರೂ ಅದು ಈಡೇರುತ್ತಿಲ್ಲ, ಆರ್‌ಸಿಬಿ ತಂಡ ಕಪ್‌ನ ಗೆಲ್ಲುತ್ತಿಲ್ಲ. ನಿನ್ನೆ ಕೂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಆರ್‌ಸಿಬಿ ತಂಡವು, ರೋಚಕ ಸೋಲು ಕಂಡಿದೆ. ಈ ಮೂಲಕ ಸತತ 6 ಸೋಲು ಕಂಡು ಆರ್‌ಸಿಬಿ ಕಂಗಾಲಾಗಿ ಕುಳಿತಿದೆ. ಇದೇ ಸಮಯದಲ್ಲಿ ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗುತ್ತಾ? ಎಂಬ ಡೌಟ್ ಕೂಡ ಕಾಡುತ್ತಿದ್ದು, ಅದಕ್ಕೆ ಉತ್ತರ ಇಲ್ಲಿದೆ.
ಅಂದಹಾಗೆ ಯಾಕೋ ಆರ್‌ಸಿಬಿ ಟೈಂ ಸರಿ ಇಲ್ಲ ಅಂತಾ ಕಾಣುತ್ತಿದೆ. ಐಪಿಎಲ್ 2024ರಲ್ಲಿ ಆರ್‌ಸಿಬಿ ತಂಡ ಐಪಿಎಲ್ ಟೂರ್ನಿಯ ಸಾಲು ಸಾಲು ಪಂದ್ಯಗಳನ್ನು ಸೋತು ಹೋಗುತ್ತಿದೆ. ಅದರಲ್ಲೂ ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್ (KKR vs RCB) ಜೊತೆಗಿನ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಮಾಡಿಯೂ ಸೋತು ಹೋಗಿದೆ. ಒಟ್ಟು, 223 ರನ್‌ಗಳ ಗುರಿ ಬೆನ್ನುಹತ್ತಿದ್ದ ಆರ್‌ಸಿಬಿ ತಂಡವು ಕೇವಲ 1 ರನ್ ಅಂತರದಲ್ಲಿ ಸೋತು ಸುಣ್ಣವಾಗಿದೆ. ಹೀಗಿದ್ದಾಗ ಅಭಿಮಾನಿಗಳು ಇದೀಗ ಫುಲ್ ಬೇಸರದಲ್ಲಿದ್ದಾರೆ. ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗುತ್ತಾ? ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ, ನಿಮ್ಮ ಪ್ರಶ್ನೆಗೆ ರೋಚಕ ಉತ್ತರ ಇಲ್ಲಿದೆ ಮುಂದೆ ಓದಿ.

ಆರ್‌ಸಿಬಿ ಇನ್ನೂ ಎಷ್ಟು ಮ್ಯಾಚ್ ಗೆಲ್ಲಬೇಕು?
ಮೊದಲೇ ಹೇಳಿದಂತೆ ಆರ್‌ಸಿಬಿ ತಂಡ ನಿನ್ನೆಯ ಸೋಲಿನ ಮೂಲಕ ಸತತ 6ನೇ ಸೋಲನ್ನ ಕಂಡಿದೆ. ಆಡಿರುವ 8 ಪಂದ್ಯದಲ್ಲಿ 1 ಮ್ಯಾಚ್ ಮಾತ್ರ ಗೆದ್ದಿದೆ ಆರ್‌ಸಿಬಿ. ಇನ್ನು ಉಳಿದ 7ರಲ್ಲಿ ಸೋತಿದ್ದು, 2 ಅಂಕ ಪಡೆದು -1.046ರ ನೆಟ್ ರನ್‌ರೇಟ್ ಪಡೆದಿದೆ. ಈ ಮೂಲಕ ಆರ್‌ಸಿಬಿ ತಂಡ ಇದೀಗ 2024ರ ಐಪಿಎಲ್ ಟೂರ್ನಿಯಲ್ಲಿ ಕೊನೆಯ ಸ್ಥಾನದಲ್ಲಿ ಇದೆ. ಹಾಗಾದ್ರೆ ಈ ಹಂತದಲ್ಲಿ ಆರ್‌ಸಿಬಿ ತಂಡ ಮುಂದಿನ ಹಂತಕ್ಕೆ ಹೋಗುತ್ತಾ? ಆರ್‌ಸಿಬಿ ಪ್ಲೇಆಫ್ ಹಂತಕ್ಕೆ ಹೋಗಲು ಇನ್ನೂ ಎಷ್ಟು ಗೆಲುವು ಬೇಕು? ಮುಂದೆ ಓದಿ.
ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಆರ್‌ಸಿಬಿ ತಂಡ ಪ್ಲೇಆಫ್ ಹಂತಕ್ಕೆ ಹೋಗಲು ಪವಾಡವೇ ನಡೆಯಬೇಕಿದೆ. ಯಾಕಂದ್ರೆ ಆರ್‌ಸಿಬಿ ಈಗಾಗಲೇ 8 ಪಂದ್ಯದಲ್ಲಿ 1 ಮ್ಯಾಚ್ ಮಾತ್ರ ಗೆದ್ದಿದೆ, ಇನ್ನುಳಿದ 7 ಮ್ಯಾಚ್ ಸೋತಿದೆ. ಹೀಗಾಗಿ ಆರ್‌ಸಿಬಿ ಮುಂದಿನ 6 ಪಂದ್ಯದಲ್ಲೂ ಗೆಲ್ಲಬೇಕು ಅಷ್ಟೇ ಅಲ್ಲದೆ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ. ಆಗ ಅಂತಿಮವಾಗಿ 6 ಪಂದ್ಯ ಗೆದ್ದರೆ ಲೀಗ್ ಕೊನೆಗೆ ಒಟ್ಟು 7 ಪಂದ್ಯ ಗೆದ್ದಂತೆ ಆಗುತ್ತದೆ. ಈ ಮೂಲಕ ಲೀಗ್ ಹಂತದಲ್ಲಿನ ಪಂದ್ಯಗಳು ಮುಗಿದಾಗ ಆರ್‌ಸಿಬಿ ತಂಡ ಒಟ್ಟು 14 ಅಂಕ ಪಡೆದಿರುತ್ತೆ. ಉಳಿದ ತಂಡಗಳು ಇವರಿಗಿಂತ ಹಿಂದೆ ಇರಬೇಕಾಗುತ್ತದೆ. ಆರ್‌ಸಿಬಿ ಕೊನೇ ತಂಡವಾಗಿ ಪ್ಲೇಆಫ್ ತಲುಪುವುದಕ್ಕೆ ಇದರಿಂದ ಸಾಧ್ಯತೆ ಇರುತ್ತದೆ.
ಸಂಕಷ್ಟದಲ್ಲಿ ಜೊತೆಗಿರುವ ಅಭಿಮಾನಿಗಳು!
'ಐಪಿಎಲ್' ಟೂರ್ನಿ ಭಾರತೀಯರ ಭಾವನೆಗಳ ಜೊತೆ ಬೆರೆತು ಹೋಗಿದೆ. ಹೀಗಾಗಿಯೇ ಐಪಿಎಲ್ ಶುರುವಾಯ್ತು ಅಂದ್ರೆ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಎಲ್ಲ ಪಂದ್ಯಕ್ಕೂ ಕಾಯ್ತಾರೆ. ಈಗಲೂ ಅಷ್ಟೇ ಐಪಿಎಲ್ ಟೂರ್ನಿ ಶುರುವಾಗಿದ್ದು ಆರ್‌ಸಿಬಿ ತಂಡಕ್ಕೆ ದೊಡ್ಡ ಸಪೋರ್ಟ್ ಸಿಕ್ಕಿದೆ. ಆದರೂ ಆರ್‌ಸಿಬಿ (RCB Team) ಸಾಲು ಸಾಲು ಪಂದ್ಯದಲ್ಲಿ ಸೋಲು ಅನುಭವಿಸಿ ಪರದಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ತಂಡದ ಅಭಿಮಾನಿ ದೇವರುಗಳು ಆರ್‌ಸಿಬಿ ತಂಡಕ್ಕೆ ಧೈರ್ಯ ತುಂಬುತ್ತಾ ಮತ್ತೆ ತಮ್ಮ ತಂಡದ ಬೆನ್ನಿಗೆ ನಿಲ್ಲುತ್ತಿದ್ದಾರೆ.












Click it and Unblock the Notifications