ವಿರಾಟ್ ಕೊಹ್ಲಿ ಕ್ಯಾಚ್ ಹಿಡಿದ ತಕ್ಷಣ ಕಿವಿ ಕಿತ್ತೋಗುವಂತೆ ಕಿರುಚಾಡಿ ಸಂಭ್ರಮಿಸಿದ ಆರ್‌ಸಿಬಿ ಫ್ಯಾನ್ಸ್!
'ಆರ್‌ಸಿಬಿ' ಅಭಿಮಾನಿಗಳು ನಮ್ಮ ಬೆಂಗಳೂರು ತಂಡಕ್ಕೆ ಅದೆಷ್ಟು ಸಪೋರ್ಟ್ ಮಾಡುತ್ತಾರೆ, ಹೇಗೆಲ್ಲಾ ಬೆಂಬಲ ನೀಡುತ್ತಾರೆ ಅಂತಾ ಇಡೀ ಜಗತ್ತಿಗೆ ಗೊತ್ತು. ನಮ್ಮ ಆರ್‌ಸಿಬಿ ಅಭಿಮಾನಿಗಳ ಜೋಶ್ ನೋಡಿ ಜಾಗತಿಕವಾಗಿ ಕೂಡ ದೊಡ್ಡ ಚರ್ಚೆ ನಡೆಯುತ್ತದೆ. ಹೀಗೆ ನಿನ್ನೆ ಕೂಡ ನಮ್ಮ ಆರ್‌ಸಿಬಿಗೆ ಎಷ್ಟು ಬೆಂಬಲ ಇದೆ ಅನ್ನೋದು ಇಡೀ ಜಗತ್ತಿಗೆ ಗೊತ್ತಾಗಿದೆ. ಅದರಲ್ಲೂ ವಿರಾಟ್ ಕೊಹ್ಲಿ ಅವರು ಕ್ಯಾಚ್ ಹಿಡಿದ ತಕ್ಷಣ ಫ್ಯಾನ್ಸ್ ಬರೀ ಒಂದು ಕೂಗು ಹಾಕಿ ದಾಖಲೆ ಸೃಷ್ಟಿಸಿದ್ದಾರೆ!
ಆರ್‌ಸಿಬಿ ಟೀಂ ಮ್ಯಾಚ್ ನಡೆಯುತ್ತಿದ್ರೆ ಅದು ಬೆಂಗಳೂರೇ ಆಗಿರಲಿ ಅಥವಾ ಮುಂಬೈ ಆಗಿರಲಿ ಫ್ಯಾನ್ಸ್ ಮಾತ್ರ, ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಅಂತಾ ಕೂಗುತ್ತಲೇ ಇರುತ್ತಾರೆ. ಅದ್ರಲ್ಲೂ ನಿನ್ನೆ ನಡೆದ ಪಂದ್ಯ ಬೆಂಗಳೂರಲ್ಲೇ ಆಯೋಜನೆ ಆಗಿತ್ತು. ಪಂಜಾಬ್ ಕಿಂಗ್ಸ್ ಎದುರು ಮ್ಯಾಚ್ ಆಡಿದ ಆರ್‌ಸಿಬಿಗೆ ಬೆಂಬಲ ನೀಡಲು ಲಕ್ಷಾಂತರ ಆರ್‌ಸಿಬಿ ಫ್ಯಾನ್ಸ್ ಬಂದಿದ್ದರು. ಹೀಗೆ ಬಂದ ಅಭಿಮಾನಿಗಳು, ವಿರಾಟ್ ಕೊಹ್ಲಿ ಒಂದೇ ಒಂದು ಕ್ಯಾಚ್ ಹಿಡಿದ ತಕ್ಷಣ ಇಡೀ ಕ್ರಿಕೆಟ್ ಮೈದಾನ ನಡುಗಿ ಹೋಗುವಂತೆ ಕಿರುಚಿದ್ದಾರೆ, ಸಂಭ್ರಮಿಸಿದ್ದಾರೆ! ಈ ಮೂಲಕ ಹೊಸ ಇತಿಹಾಸ ಕೂಡ ಸೃಷ್ಟಿ ಮಾಡಿದ್ದಾರೆ ನಮ್ಮ ಬೆಂಗಳೂರಿನ ಆರ್‌ಸಿಬಿ ಫ್ಯಾನ್ಸ್.

ಚಿನ್ನಸ್ವಾಮಿ ಸ್ಟೇಡಿಯಂ ಫುಲ್ ಶೇಕ್!
ಅಷ್ಟಕ್ಕೂ ಸೋಮವಾರ, ಮಾರ್ಚ್ 25 ರಂದು ಅಂದ್ರೆ ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಫುಲ್ ಶೇಕ್ ಆಗಿತ್ತು. ಈ ಕ್ರೀಡಾಂಗಣದಲ್ಲಿ ನಡೆದ 2024 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ 4 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಆದರೆ ಇದೇ ಪಂದ್ಯಲ್ಲಿ ನಮ್ಮ ಆರ್‌ಸಿಬಿ ಅಭಿಮಾನಿಗಳು ಬರೀ ಕಿರುಚಾಡಿ, ಸಂಭ್ರಮ ವ್ಯಕ್ತಪಡಿಸಿ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಹಾಗಾದರೆ ಈ ಸಾಧನೆ ಮಾಡಲು ಕಾರಣವಾಗಿದ್ದು ಯಾರು? ವಿರಾಟ್ ಕೊಹ್ಲಿಗೆ ಈ ದಾಖಲೆಯ ಕ್ರೆಡಿಟ್ ಹೇಗೆ ಸಲ್ಲಬೇಕು? ಮುಂದೆ ಓದಿ.
124 DB peak Roars at Chinnaswamy when Virat Kohli takes the catch today - The best Roar in this IPL.
— CricketMAN2 (@ImTanujSingh) March 25, 2024
- RCB FANS ARE CRAZY...!!!! 🔥 pic.twitter.com/FtLVLpCN9o
ಆರ್‌ಸಿಬಿ ಅಭಿಮಾನಿಗಳ ಶಕ್ತಿ ಇದು!
ಪಂಜಾಬ್ ಕಿಂಗ್ಸ್ ನೀಡಿದ್ದ 177 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ, ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 19.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಐಪಿಎಲ್ 2024ರಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ. ಇದೇ ಮ್ಯಾಚ್‌ನಲ್ಲೇ, ವಿರಾಟ್ ಕೊಹ್ಲಿ ಅವರು ಫಸ್ಟ್ ಇನ್ನಿಂಗ್ಸ್‌ನಲ್ಲಿ ಜಾನಿ ಬೈರ್‌ಸ್ಟೋವ್ ಅವರ ಕ್ಯಾಚ್ ಹಿಡಿದರು. ಆಗ ಇಡೀ ಕ್ರೀಡಾಂಗಣ ಎದ್ದು ಕೂಗಿ, ವಿರಾಟ್ ಕೊಹ್ಲಿ ಅವರಿಗೆ ಬೆಂಬಲ ಸೂಚಿಸಿದೆ. ಆಗಲೇ ಅಭಿಮಾನಿಗಳು ಕೂಗಿದ ರೇಂಜ್‌ಗೆ 124 ಡೆಸಿಬಲ್ ತರಂಗಗಳು ಹೊರಹೊಮ್ಮಿವೆ. ಈ ಮೂಲಕ ಮನುಷ್ಯ ಕೇಳಬಹುದಾದ ಕೊನೆಯ ಹಂತ, 130ರಿಂದ 140 ಡೆಸಿಬಲ್ ತರಂಗಗಳಿಗೆ ಈ ಕೂಗು ಸಮವಾಗಿದೆ. ಈ ಮೂಲಕ ಆರ್‌ಸಿಬಿ ಫ್ಯಾನ್ಸ್ ಧ್ವನಿ ಎಷ್ಟು ಗಟ್ಟಿ ಅನ್ನೋದು ಇಡೀ ಜಗತ್ತಿಗೇ ಗೊತ್ತಾಗಿದೆ.

120 DB- Dhoni Highest Roar Meter in history of IPL🤟🏻
— Praneeth (@fantasy_d11) March 25, 2024
But But
124 DB- Just a Virat Kohli took catch in chinnaswamy 💥💥🥵🥵
Note😭:
Sounds above 120DB can cause pain and sudden hearing loss💔😭
Chinnaswamy please🥺🥺🙏🏻#RCBvPBKS pic.twitter.com/TqroQ36XXe
ಒಟ್ನಲ್ಲಿ ನಮ್ಮ ಆರ್‌ಸಿಬಿ, ನಮ್ಮ ಹೆಮ್ಮೆ ಅಂತಿದ್ದಾರೆ ಫ್ಯಾನ್ಸ್. ಈ ಮೂಲಕ ಬೆಂಗಳೂರಿನಲ್ಲಿ ಅಭಿಮಾನಿಗಳು ಸಿಕ್ಕಾಪಟ್ಟೆ ಸಪೋರ್ಟ್ ಮಾಡುತ್ತಿದ್ದು, 2024 ರಲ್ಲಿ ಬೆಂಗಳೂರು ತಂಡ ಐಪಿಎಲ್ ಕಪ್ ಗೆಲ್ಲೋದು ಪಕ್ಕಾ ಅಂತಿದ್ದಾರೆ. ಹಾಗೇ, ಆರ್‌ಸಿಬಿ ಕೂಡ ಈ ಗೆಲುವಿಗೆ ಬೇಕಿರುವ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದೆ.












Click it and Unblock the Notifications