ನಮನ್ ತಿವಾರಿಗೆ ಕಾಲು ಮುಟ್ಟಲು ಬಿಡದ ವಿರಾಟ್ ಕೊಹ್ಲಿ: ವಿಡಿಯೋ ಭಾರಿ ವೈರಲ್‌

RCB Vs LSG IPL 2026: ಆರ್‌ಸಿಬಿ ತಂಡವು ಎಲ್‌ಎಸ್‌ಜಿ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯದ ನಂತರ ವಿರಾಟ್ ಕೊಹ್ಲಿ ಮತ್ತು ಎಲ್‌ಎಸ್‌ಜಿ ಯುವ ಆಟಗಾರ ನಮನ್ ತಿವಾರಿ ಅವರ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಚಿನ್ನಸ್ವಾಮಿಯಲ್ಲಿ ಬುಧವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಮತ್ತು ಯುವ ಆಟಗಾರ ನಮನ್ ತಿವಾರಿ ನಡುವಿನ ವಿಶೇಷ ಕ್ಷಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

RCB vs LSG IPL 2026 Virat Kohli Stops Youngster Naman Tiwari from Touching His Feet Video Viral

ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅರ್ಧಶತಕಕ್ಕೆ ಒಂದು ರನ್‌ (49 ರನ್) ಬೇಕಿರುವಾಗಲೇ ಕ್ಯಾಚ್ ನೀಡಿ ಪೆವಿಲಿಯನ್‌ಗೆ ತೆರಳಿದರು. ಆದರೂ, ತಂಡಕ್ಕೆ ಉತ್ತಮ ಆರಂಭ ನೀಡುವ ಮೂಲಕ ನಂತರ ಬಂದಂತಹ ಬ್ಯಾಟರ್‌ಗಳ ಮೇಲಿನ ಒತ್ತಡವನ್ನು ತಗ್ಗಿಸಿದರು. ಇವರು ಆರ್‌ಸಿಬಿ ಐದು ವಿಕೆಟ್‌ಗಳ ಸುಲಭ ಗೆಲುವಿನತ್ತ ಮುನ್ನಡೆಸಿದರು. ಈ ಜಯದೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಕೊಹ್ಲಿ ಪಾದ ಮುಟ್ಟಿ ನಮಸ್ಕರಿಸಲು ಮುಂದಾದ ತಿವಾರಿ

ಪಂದ್ಯ ಮುಗಿದ ನಂತರ ವೈರಲ್ ಆಗಿರುವ ವಿಡಿಯೋದಲ್ಲಿ, ವಿರಾಟ್ ಕೊಹ್ಲಿ ಲಕ್ನೋ ತಂಡದ ಯುವ ಆಟಗಾರರಾದ ನಮನ್ ತಿವಾರಿ ಮತ್ತು ಮುಕುಲ್ ಚೌಧರಿ ಅವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ನಮನ್ ತಿವಾರಿ ತಕ್ಷಣ ಕೊಹ್ಲಿ ಅವರ ಪಾದ ಮುಟ್ಟಿ ನಮಸ್ಕರಿಸಲು ಮುಂದಾದರು. ಇದನ್ನು ಕಂಡು ಶಾಕ್ ಆದ ಕೊಹ್ಲಿ, ಕೂಡಲೇ ಯುವ ಆಟಗಾರನನ್ನು ತಡೆದರು. ಕೊಹ್ಲಿ ಅವರ ನಡವಳಿಕೆಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬಂದಿದೆ. ಆರ್‌ಆರ್‌ ತಂಡದೊಂದಿಗೆ ನಡೆದ ತೀವ್ರ ಪೈಪೋಟಿಯ ಹರಾಜಿನ ನಂತರ, ನಮನ್ ತಿವಾರಿ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡವು 1 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು.

'ನನ್ನ ಆಟ ನನಗೆ ತೃಪ್ತಿ ನೀಡಿದೆ'

ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದು ವಿಕೆಟ್‌ಗಳ ಸುಲಭ ಜಯ ದಾಖಲಿಸಿತು. ನಂತರ ಮಾತನಾಡಿದ ವಿರಾಟ್ ಕೊಹ್ಲಿ, ತಮಗೆ ಸಂಪೂರ್ಣ ಫಿಟ್‌ನೆಸ್ ಇಲ್ಲದಿದ್ದರೂ ಸಹ ತಮ್ಮ ಆಟದ ಶೈಲಿಯ ಬಗ್ಗೆ ತೃಪ್ತಿ ಇರುವುದಾಗಿ ತಿಳಿಸಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ ನೀಡಿದ್ದ 146 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಬಲ ತುಂಬಿದರು. ಅವರು ಕೇವಲ 34 ಎಸೆತಗಳಲ್ಲಿ 49 ರನ್ ಸಿಡಿಸುವ ಮೂಲಕ ತಂಡದ ಗೆಲುವಿಗೆ ಅಡಿಪಾಯ ಹಾಕಿದರು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಈ ಗುರಿಯನ್ನು 15.1 ಓವರ್‌ಗಳಲ್ಲಿಯೇ ತಲುಪಿ ಗೆಲುವು ಸಾಧಿಸಿತು.

ಪಂದ್ಯದ ನಂತರ ವಿರಾಟ್ ಕೊಹ್ಲಿ ಹೇಳಿದ್ದೇನು?

"ನಾನು ಇನ್ನೂ 100% ಫಿಟ್ ಆಗಿಲ್ಲ. ಕಳೆದ ಪಂದ್ಯದಲ್ಲಿ ನನ್ನ ಮೊಣಕಾಲಿನ ನೋವಿತ್ತು. ಅಷ್ಟೇ ಅಲ್ಲದೆ, ಕಳೆದ ನಾಲ್ಕೈದು ದಿನಗಳಿಂದ ನನ್ನ ಆರೋಗ್ಯ ಕೂಡ ಅಷ್ಟೇನೂ ಸರಿ ಇರಲಿಲ್ಲ. ಈಗ ಮತ್ತೆ ಹಳೆಯ ಲಯಕ್ಕೆ ಮರಳಲು ಪ್ರಯತ್ನಿಸುತ್ತಿದ್ದೇನೆ," ಎಂದು ಪಂದ್ಯದ ನಂತರ ವಿರಾಟ್ ಕೊಹ್ಲಿ ಅವರು ತಿಳಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗುವ ಮುನ್ನ ವಿರಾಟ್ ಕೊಹ್ಲಿ ಅವರು ಎಡಗಾಲಿನ ಮೊಣಕಾಲಿಗೆ ಪಟ್ಟಿಯನ್ನು ಬಲವಾಗಿ ಸುತ್ತಿಕೊಂಡು ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿತ್ತು. ಮೊಣಕಾಲಿನ ನೋವಿನ ಕಾರಣದಿಂದ ಅವರನ್ನು ಇಂಪ್ಯಾಕ್ಟ್‌ ಪ್ಲೇಯರ್ ಆಗಿ ಆಡಿಸಲು ತಂಡದ ಮ್ಯಾನೇಜ್‌ಮೆಂಟ್‌ ನಿರ್ಧರಿಸಿತು. ಈ ಪಂದ್ಯದಲ್ಲಿ ಕೊಹ್ಲಿ 6 ಬೌಂಡರಿ, 1 ಸಿಕ್ಸರ್ ಸಿಡಿಸಿ ಮಿಂಚಿದರು. ಈ ಮೂಲಕ ಟೂರ್ನಿಯಲ್ಲಿ ತಮ್ಮ ಒಟ್ಟು ಮೊತ್ತವನ್ನು 228 ರನ್‌ಗಳಿಗೆ ಏರಿಸಿಕೊಂಡ ಕೊಹ್ಲಿ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+