RCB: ಇಂದು ಕೆಕೆಆರ್ ವಿರುದ್ಧ ಆರ್‌ಸಿಬಿ ಪಂದ್ಯ ಬಹುತೇಕ ರದ್ದು ಸಾಧ್ಯತೆ
IPL 2025 RCB Vs KKR: ಅರ್ಧಕ್ಕೆ ರದ್ದಾಗಿದ್ದ ಐಪಿಎಲ್ 2025 ಹಬ್ಬ ಮತ್ತೆ ಇಂದಿನಿಂದ ಅಂದರೆ ಮೇ 17ರಿಂದ ಅದ್ಧೂರಿಯಾಗಿ ಆರಂಭವಾಗುತ್ತಿದೆ. ಹೊಸ ವೇಳಾಪಟ್ಟಿ ಪ್ರಕಾರ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿದೆ. ಈ ನಡುವೆಯೇ ಪಂದ್ಯ ರದ್ದಾಗುವ ಭೀತಿ ಎದುರಾಗಿದೆ. ಕಾರಣ ಏನೆಂದು ಇಲ್ಲಿ ತಿಳಿಯಿರಿ.
ಭಾರತ-ಪಾಕಿಸ್ತಾನ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆ ಆಟಗಾರರು, ಅಭಿಮಾನಿಗಳ ಹಿತದೃಷ್ಟಿಯಿಂದ ಪ್ರಾಂಚೈಸಿಗಳ ಮನವಿ ಮೇರೆಗೆ ಬಿಸಿಸಿಐ ಐಪಿಎಲ್ ಐಪಿಎಲ್ 2025 ಟೂರ್ನಿಯನ್ನು ರದ್ದುಪಡಿಸಿ ಒಂದು ವಾರಕ್ಕೆ ಮುಂದೂಡಿಕೆ ಮಾಡಿತ್ತು. ಬಳಿಕ ಎರಡು ರಾಷ್ಟ್ರಗಳ ಪರಿಸ್ಥಿತಿ ಸುಧಾರಿಸಿದ್ದು, ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಂತೆಯೇ ಶನಿವಾರ (ಮೇ 17) ದಿಂದ ಪಂದ್ಯ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ಸೆಣಸಲಿವೆ.

ಆರ್‌ಸಿಬಿ ಪಡೆ ತವರು ಮೈದಾನವಾದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಕೆಆರ್ ಅನ್ನು ಎಸದುರಿದಲು ಸಜ್ಜಾಗಿದೆ. ಆದರೆ ಈ ನಡುವೆಯೇ ಮಳೆ ಭೀತಿ ಎದುರಾಗಿದ್ದು, ಒಂದು ವೇಳೆ ಭಾರೀ ಮಳೆ ಮುಂದುವರೆದರೆ ಪಂದ್ಯ ರದ್ದಾಗುವ ಸಾಧ್ಯತೆಯಿದೆ. ಆಗ ಎರಡು ತಂಡಗಳಿಗೂ ತಲಾ ಒಂದು ಪಾಯಿಂಟ್ ನೀಡಲಾಗುತ್ತದೆ. ಮತ್ತೊಂದೆಡೆ ನೋಡೋದಾದ್ರೆ ಸಾಧಾರಣ ಮಳೆಯಾಗಿ ಅರ್ಧಕ್ಕೆ ನಿಂತರೆ, ಓವರ್‌ಗಳನ್ನ ಕಡಿತಗೊಳಿಸಲಾಗುತ್ತದೆ.
ಅಂಡಮಾನ್ ಮತ್ತು ಬಂಗಾಳಕೊಲ್ಲಿಯಲ್ಲಿ ಶಕ್ತಿ ಚಂಡಮಾರುತ ಉಂಟಾಗಿರುವ ಪರಿಭಾಮ ಬೆಂಗಳೂರು ಸೇರಿದಂತೆ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆ ಮುಂದುವರೆದಿದೆ. ಬೆಂಗಳೂರಿನ ವಿಚಾರಕ್ಕೆ ಬಂದರೆ ಕಳೆದ ಮೂರು ದಿನಗಳಿಂದ ನಗರದಲ್ಲಿ ಸಂಜೆ ಆಗುತ್ತಿದ್ದಂತೆ ಮಳೆರಾಯ ಎಂಟ್ರಿ ಕೊಡುತ್ತಿದ್ದಾರೆ. ಇಂದು (ಮೇ 17) ಕೂಡ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ನಿನ್ನೆ ಅಂದರೆ ಶುಕ್ರವಾರ ರಾತ್ರಿ ರಣಮಳೆ ಸುರಿದಿದೆ.
ಅದರಲ್ಲೂ ಇಂದು ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ಹೈವೊಲ್ಟೇಜ್ ಐಪಿಎಲ್ ಪಂದ್ಯ ನಡೆಯುತ್ತಿದ್ದು, ಮಳೆ ಅಡ್ಡಿಯಾದ್ರೆ ಬಹುತೇ ಪಂದ್ಯ ರದ್ದಾಗುವ ಎಲ್ಲಾ ಲಕ್ಷಣಗಳು ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸಾಧಾರಣ ಮಳೆಯಾಗಿ ನಿಂತರೆ ಓವರ್‌ಗಳನ್ನು ಕಡಿತ ಮಾಡಲಾಗುತ್ತದೆ. ಈ ನಿರ್ಧಾರ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲವಾಗಲಿದೆ. ಆದ್ದರಿಂದ ಇಂದಿನ ಪಂದ್ಯ ಟಾಸ್ ಮೇಲೂ ನಿರ್ಧಾರವಾಗಲಿದೆ ಅಂತಲೂ ಹೇಳಬಹುದು.
ಸಾಮಾನ್ಯವಾಗಿ ಮಳೆ ಬಾರದಿದ್ರೂ ಈ ಪಿಚ್‌ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ತಂಡ ಗೆದ್ದಿರುವ ಉದಾಹರಣೆಗಳಿಗೆ. ಆದ್ದರಿಂದ ಇಂದಿನ ಪಂದ್ಯ ಟಾಸ್ ಮೇಲೂ ನಿಂತಿದೆ ಅಂತಲೂ ಹೇಳಬಹದು. ಆರ್‌ಸಿಬಿ ಪ್ಲೇ ಆಫ್ ಪ್ರವೇಶಕ್ಕೆ ಇದು ಬಹುಮುಖ್ಯ ಪಂದ್ಯವಾಗಿದ್ದು, ಇಂದೊಂದು ದಿನ ಮಳೆ ಬಾರದಿದ್ದರೆ ಅಷ್ಟೇ ಸಾಕು ಎನ್ನುವುದು ಅಭಿಮಾನಿಗಳ ಕೋರಿಕೆಯಾಗಿದೆ. ಆರ್‌ಸಿಬಿ ಉಳಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಪ್ಲೇ ಆಪ್ ಪ್ರವೇಶ ಮಾಡಲಿದೆ.
ಆದರೂ ಇದೀಗ ಪ್ಲೇ ಆಫ್ ಸ್ಥಾನಕ್ಕೆ ಏಳು ತಂಡಗಳೂ ಪೈಪೋಟಿ ನಡೆಸುತ್ತಿರುವುದರಿಂದ ಆರ್‌ಸಿಬಿಗೆ ಇಂದಿನ ಗೆಲುವು ಪ್ರಮುಖವಾಗಿದೆ. ಈಗಾಗಲೇ ಇದುವರೆಗೂ ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಗೆದ್ದು, ಮೂರರಲ್ಲಿ ಸೋಲು ಕಂಡಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ಲೇ ಇನ್ನೊಂದು ಪಂದ್ಯ ಗೆಲ್ಲಲ್ಲೇಬೇಕಿದೆ. ಆದ್ದರಿಂದ ಕೆಕೆಆರ್ ವಿರುದ್ಧ ಶಾತಾಯ ಗತಾಯ ಗೆಲ್ಲಲೇಬೇಕೆಂಬ ಪಣತೊಟ್ಟು ನಿಂತಿದೆ.
ಮತ್ತೊಂದೆಡೆ ಕೆಕೆಆರ್ ಆರ್‌ಸಿಬಿ ವಿರುದ್ಧ ಸೋತರೆ ಪ್ಲೇ ಆಫ್ ರೇಸ್‌ನಿಂದ ಈ ಬಾರಿಯ ಐಪಿಎಲ್‌ನಿಂದ ಹೊರಬೀಳುವುದು ಖಚಿತವಾಗಿದೆ. ಇಲ್ಲದಿದ್ದರೆ, ಬೇರೆ ತಂಡಗಳನ್ನು ಬೇಡಬೇಕಾಗುತ್ತದೆ. ಇದುವರೆಗೂ ಆಡಿರುವ 12 ಪಂದ್ಯಗಳಲ್ಲಿ 5ರಲ್ಲಿ ಗೆಲುವು, 6ರಲ್ಲಿ ಸೋಲು ಕಂಡಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ 10 ಅಂಕಗಳನ್ನು ಪಡೆಯುವ ಮೂಲಕ ಆರನೇ ಸ್ಥಾನದಲ್ಲಿದೆ.
ಪಂದ್ಯ ರದ್ದಾದ್ರೆ ಯಾರಿಗೆ ಲಾಭ?: ಆದರೆ, ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ಮುಂದಿನ ಹಲವು ದಿನಗಳ ಕಾಲ ಭಾರೀ ಮಳೆ ಮುಂದುವರೆಯುವ ಸಾಧ್ಯತೆಯಿದ್ದು, ಇದರಿಂದ ಪಂದ್ಯ ರದ್ದು ಮಾಡುವ ಸಾಧ್ಯತೆಯಿರುತ್ತದೆ. ಮತ್ತೊಂದೆಡೆ ನೋಡೋದಾದ್ರೆ, ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಡ್ರೈ ವ್ಯಸ್ಥೆ ಇದ್ದು, ಭಾರೀ ಮಳೆ ಬಂದರೂ ಸಹ ಓವರ್‌ಗಳನ್ನ ಕಡಿತ ಮಾಡಿ ಆಡಿಸಲಾಗುತ್ತದೆ. ಈಗಾಗಲೇ ಪಂಜಾಬ್ ಕಿಂಗ್ಸ್ ವಿರುದ್ಧ ಒಂದು ಪಂದ್ಯವನ್ನು ಮಳೆಯಿಂದಾಗಿ 14 ಓವರ್ಗಳಿಗೆ ಕಡಿತಗೊಳಿಸಲಾಗಿದ್ದು, ಈ ವೇಳೆ ಚೇಸಿಂಗ್ ಮಾಡಿದ ಆರ್‌ಸಿಬಿ ತಂಡ ಸೋಲು ಕಂಡಿತ್ತು. ಆದರೆ, ಇಂದು ಆ ಪರಿಸ್ಥಿತಿ ಬಾರದಿರಲಿದೆ ಎನ್ನುವುದೇ ದೇವರಿಗೆ ಅಭಿಮಾನಿಗಳ ಮನವಿ ಆಗಿದೆ.












Click it and Unblock the Notifications