India Rain Alert: ಚಂಡಮಾರುತ ಪ್ರಸರಣ, ದೇಶದ ಈ ಭಾಗಗಳಲ್ಲಿ ಜುಲೈ 11ರವರೆಗೆ ಬಿರುಗಾಳಿ ಮಳೆ
India Weather Forecast: ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಒಳಗೊಂಡಂತೆ ಸಮುದ್ರ ಮಟ್ಟದಲ್ಲಿ ಉಂಟಾಗಿರುವ ವಾಯು ಚಂಡಮಾರುತ ಪ್ರಸರಣ ಸೃಷ್ಟಿ, ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ಮುಂಗಾರು ಮಳೆ ದೇಶವ್ಯಾಪಿ ವಿಸ್ತರಣೆಗೆ ಪೂರಕ ವಾತಾವರ ನಿರ್ಮಾಣವಾಗಿದೆ. ಕರ್ನಾಟಕ, ಒಡಿಶಾ ಒಳಗೊಂಡಂತೆ ದೇಶದ ಅನೇಕ ರಾಜ್ಯಗಳಲ್ಲಿ ಜುಲೈ 11ರವರೆಗೆ ಧಾರಾಕಾರ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಭಾನುವಾರ (ಜುಲೈ 5) ಮುನ್ಸೂಚನೆ ನೀಡಿದೆ.
ದೆಹಲಿ, ಮಧ್ಯಪ್ರದೇಶ ದಾಟಿರುವ ಮುಂಗಾರು ಮಳೆ (Monsoon Rain Prediction) ಮುಂದಿನ 3 ದಿನಗಳಲ್ಲಿ ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್‌ನ ಇತರ ಭಾಗಗಳಲ್ಲಿ ವಿಸ್ತರಿಸಲಿದ್ದು, ಅಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಆಗಲಿದೆ. ಜುಲೈ 11ರವರೆಗೆ ದೇಶದ ವಿವಿಧ ಭಾಗಗಳಿಗೆ ಮಳೆರಾಯನ ದರ್ಶನವಾಗಲಿದೆ. ಬಿತ್ತನೆ ಆಗದ ಉತ್ತರ ಭಾರತದಲ್ಲಿ ಈಗಾಗಲೇ ಭತ್ತ ಬಿತ್ತನೆ, ಇನ್ನಿತರ ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ.

ಈ ಭಾಗಗಳಲ್ಲಿ ಧಾರಾಕಾರ ಮಳೆ ಎಚ್ಚರಿಕೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಂಗಾರು ಆರಂಭದಲ್ಲೇ ಆರ್ಭಟಿಸುತ್ತಿದೆ. ಕಾದ ನೆಲಕ್ಕೆ ತಂಪೆರೆದ ಮಳೆರಾಯ ಪ್ರವಾಸ ಸೃಷ್ಟಿಸುವ ಆತಂಕ ಮೂಡಿಸಿದ್ದಾನೆ. ಮುಂದಿನ 5 ದಿನಗಳ ಕಾಲ ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು-ಕಾಶ್ಮೀರ, ಪಂಜಾಬ್, ದೆಹಲಿಯಲ್ಲಿ ಪ್ರತಿ ಗಂಟೆಗೆ 40 ರಿಂದ 50 ಬಿರುಗಾಳಿ, ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ನಿರೀಕ್ಷೆ ಇದೆ.
ಮಧ್ಯ ಭಾರತದ ಮಧ್ಯಪ್ರದೇಶ, ಛತ್ತೀಸ್‌ಗಢ, ವಿದರ್ಭ ವ್ಯಾಪ್ತಿಯ ಅನೇಕ ಪ್ರದೇಶಗಳಲ್ಲಿ ಮುಂಗಾರು ಅಬ್ಬರಿಸಲಿದೆ. ಅತಿ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ನದಿ ತೀರ ಮತ್ತು ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಇದು ನಿವಾಸಿಗಳ ಚಿಂತೆಗೆ ಕಾರಣವಾಗಿದೆ. ಕಳೆದ ವರ್ಷವು ಈ ಭಾಗಗಳಲ್ಲಿ ಒಂದಷ್ಟು ಪ್ರವಾಹ ಸಂಕಷ್ಟ ಉಂಟಾಗಿತ್ತು.
ತಿವ್ರ ಬಿರುಗಾಳಿ ಮಳೆ ಆತಂಕ
ಇನ್ನೂ ಪೂರ್ವ ಭಾರತದ ರಾಜ್ಯಗಳಾದ ಒಡಿಶಾ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಮುನ್ನೆಚರಿಕೆ ಕೊಡಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಗಂಟೆಗೆ ಗರಿಷ್ಠ 70 ಕಿಲೋಮೀಟರ್ ವೇಗದಲ್ಲಿ ತೀವ್ರ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ನಿರ್ದೇಶಿಸಲಾಗಿದೆ. ಜೊತೆಗೆ ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ಭಾಗದಲ್ಲಿ ಮುಂದಿನ ಮೂರರಿಂದ ಐದು ದಿನ ಸಾಧಾರಣದಿಂದ ಭಾರೀ ಮಳೆ ಸಂಭವವಿದೆ ಎಂದು ಐಎಂಡಿ ವಿಜ್ಞಾನಿಗಳು ವರದಿಯಲ್ಲಿ ತಿಳಿಸಿದ್ದಾರೆ.
ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಮೇಲ್ಭಾಗದಲ್ಲಿ ವ್ಯಾಪಕ ಬದಲಾವಣೆಗಳು ಆಗಿವೆ. ಟ್ರಫ್, ಬಿರುಗಾಲಿ ಜೊತೆಗೆ ವಾಯು ಚಂಡಮಾರುತ ಪರಿಚಲನೆ ಉಂಟಾಗಿದೆ. ಹೀಗಾಗಿ ಮುಂಗಾರು ಮಳೆ ಕರಾವಳಿ ರಾಜ್ಯಗಳಲ್ಲಿ ಮಾತ್ರವಲ್ಲದೇ, ಉತ್ತರ ಭಾರತದ ರಾಜ್ಯಗಳಲ್ಲೂ ಚುರುಕಾಗಿದೆ.













Click it and Unblock the Notifications