RCB VS KKR: "ವಿರಾಟ" ರೂಪದ "ಗಂಭೀರ" ಟ್ವೀಟ್ ಭಾರೀ ವೈರಲ್
ಬೆಂಗಳೂರು, ಮಾರ್ಚ್, 29: ಮೊನ್ನೆಯಷ್ಟೇ ಎಸ್‌ಆರ್‌ಎಚ್ ವಿರುದ್ಧ ಮುಂಬೈ ಇಂಡಿಯನ್ಸ್ ಹೀನಾಯವಾಗಿ ಸೋಲನುಭವಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಎಸ್‌ಆರ್‌ಎಚ್ 3 ವಿಕೆಟ್ ನಷ್ಟಕ್ಕೆ 277 ರನ್‌ಗಳನ್ನು ಕಲೆಹಾಕುವ ಮೂಲಕ ಆರ್‌ಸಿಬಿ ರೆಕಾರ್ಡ್ ಅನ್ನು ಮುರಿದಿದೆ. ಇನ್ನು ಈ ವೇಳೆ ಹುಬ್ಬಳ್ಳಿ-ಧಾರವಾಡ ಸಿಟಿ ಪೊಲೀಸ್ ಟ್ವಿಟರ್ ಖಾತೆಯಲ್ಲಿ "ರೆಕಾರ್ಡ್ ಬ್ರೇಕ್ ಮಾಡಿ, ಆದರೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ಬೇಡಿ," ಎಂದು ಬರೆಯಲಾಗಿದ್ದು, ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಟ್ವೀಟ್ ಒಂದು ಭಾರೀ ಸದ್ದು ಮಾಡುತ್ತಿದೆ.
ಹೀಗೆ ಈ ಮೊದಲು ಇದೇ ಟ್ವಿಟರ್ ಖಾತೆಯಿಂದ ಇಂತಹ ಸಾಕಷ್ಟು ಟ್ವಿಟ್‌ಗಳು ವೈರಲ್ ಆಗಿವೆ. ಆರ್‌ಸಿಬಿ ವಿಚಾರವಾಗಿ ತುಂಬಾ ಟ್ವಿಟ್ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದವು. ಇದೀಗ ಇಂದು (ಮಾರ್ಚ್ 29) ಇನ್ನು ಕೆಲವೇ ಕ್ಷಣಗಳಲ್ಲಿ ಆರ್‌ಸಿಬಿ-ಕೆಕೆಆರ್ ತಂಡದ ನಡುವೆ ಪಂದ್ಯ ಆರಂಭವಾಗಲಿದೆ. ಈ ಬಗ್ಗೆಯೂ ಟ್ವೀಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಮೊದಲೇ ವಿರಾಟ್ ಕೊಹ್ಲಿ ಹಾಗೂ ಗಂಭೀರ್ ಒಂಥರಾ ಹಾವು ಮುಂಗಸಿ ಇದ್ದ ಹಾಗೆ. ಇನ್ನು ಇಂದು ಗೌತಮ್ ಗಂಭೀರ್ ಕೋಚಿಂಗ್ ಟೀಂ ಕೆಕೆಆರ್ ಹಾಗೂ ಆರ್‌ಸಿಬಿ ಮುಖಾಮುಖಿಯಾಗಲಿವೆ. ಈ ಮೊದಲು ಗೌತಮ್ ಗಂಭೀರ್ ಹಾಗೂ ಕೊಹ್ಲಿ ತುಂಬಾ ಬಾರಿ ಕೆಲವು ವಿಚಾರಗಳಿಗೆ ಮೈದಾನದಲ್ಲೇ ಜಗಳವಾಡಿದ ಘಟನೆಗಳು ನಡೆದಿವೆ. ಅದರಲ್ಲೂ ಇಂದು ಬೆಂಗಳೂರಿನಲ್ಲಿ ಮ್ಯಾಚ್ ನಡೆಯುವ ಹಿನ್ನೆಲೆ ಕೊಹ್ಲಿ ಪರವಾಗಿ ಶಿಳ್ಳೆ, ಘೋಷಣೆಗಳು ಕೇಳಿ ಬರುವುದಂತೂ ನಿಶ್ಚಿತ.
ಈಗಾಗಲೇ ಹಲವರು ಟ್ವಿಟರ್‌ಗಳಲ್ಲಿ ಕೊಹ್ಲಿ ಹಾಗೂ ಗಂಭೀರ್ ಬಗ್ಗೆ ವಿಚಿತ್ರ ಟ್ವಿಟ್‌ಗಳನ್ನು ಮಾಡಿದ್ದಾರೆ. ಹಾಗೆಯೇ ಹುಬ್ಬಳ್ಳಿ-ಧಾರವಾಡ ಸಿಟಿ ಪೊಲೀಸ್ ಟ್ವಿಟರ್ ಖಾತೆಯಲ್ಲಿ "ಯಾವುದೇ #ಗಂಭೀರ ಸಮಸ್ಯೆಗಳು ಉಂಟಾದಲ್ಲಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, #ವಿರಾಟ ರೂಪದಲ್ಲಿ ಸಹಾಯಕ್ಕೆ ತಕ್ಷಣ ನಾವು ಬರುತ್ತೇವೆ," ಎಂದು ಬರೆದುಕೊಂಡಿರುವ ಟ್ವೀಟ್ ಅಂತೂ ಇದೀಗ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.
Our 𝐄𝐑𝐒𝐒 𝟏𝟏𝟐 is ready..!! 🚔
— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc) March 29, 2024
ಯಾವುದೇ #ಗಂಭೀರ ಸಮಸ್ಯೆಗಳು ಉಂಟಾದಲ್ಲಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ..☎️#ವಿರಾಟ ರೂಪದಲ್ಲಿ ಸಹಾಯಕ್ಕೆ ತಕ್ಷಣ ನಾವು ಬರುತ್ತೇವೆ...👮♂️#RCBvKKR #RCB #ViratKohli #Goutamgambhir #Emergency#alert #Bengaluru #Helpline112 #KolkataKnightRiders pic.twitter.com/5EEee8Fdqk
ಪಂದ್ಯ ಆರಂಭಕ್ಕೆ ಇನ್ನು ಕಲವು ಗಂಟೆಗಳು ಬಾಕಿಯಿದೆ. ಈಗಲೇ ಇಂತಹ ಟ್ವೀಟ್‌ಗಳು ಭಾರೀ ಸದ್ದು ಮಾಡುತ್ತಿವೆ. ಇನ್ನೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾದಾಗ ಅಭಿಮಾನಿಗಳು ಯಾವ ಮಟ್ಟಿಗೆ ಘೋಷಣೆಗಳು ಕೂಗಲಿದ್ದಾರೆ ಎಂದು ಕಾದುನೋಡಬೇಕಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಇನ್ನು ಕೆಲವೇ ಕ್ಷಣಗಳಲ್ಲಿ ಸೆಣಸಾಡಲಿವೆ. ಇನ್ನು ಆರ್‌ಸಿಬಿ ಎರಡು ಮ್ಯಾಚ್‌ಗಳಲ್ಲಿ ಒಂದನ್ನು ಗೆದ್ದಿಗೆ, ಇಂದು ಮೂರನೇ ಪಂದ್ಯ ಆಡಲಿದೆ.












Click it and Unblock the Notifications