RCB vs GT: ಟೈಟನ್ಸ್ ಮಣಿಸಿದ ಆರ್‌ಸಿಬಿಗೆ ಹ್ಯಾಟ್ರಿಕ್ ಜಯ: ಪ್ಲೇ ಆಫ್ ಲೆಕ್ಕಾಚಾರ ಶುರು
ತವರಿನ ಅಭಿಮಾನಿಗಳ ಮುಂದೆ ಅಮೋಘ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿ, ಪ್ಲೇ ಆಫ್ ರೇಸ್‌ನಲ್ಲಿ ತಾನಿನನ್ನು ಜೀವಂತವಾಗಿರುವುದಾಗಿ ತಿಳಿಸಿದೆ. ಗುಜರಾತ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿತು.
ಟಾಸ್ ಸೋತರೂ ಗುಜರಾತ್ ಟೈಟನ್ಸ್ 19.3 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು. ಸಾಧಾರಣ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ಇನ್ನು 38 ಎಸೆತಗಳು ಬಾಕಿ ಇರುವಂತೆ ಆರು ವಿಕೆಟ್‌ಗಳನ್ನು ಕಳೆದುಕೊಂಡು 152 ರನ್ ಸೇರಿಸಿತು. ಈ ಗೆಲುವಿನ ಮೂಲಕ ಆರ್‌ಸಿಬಿ ಆಡಿದ 11 ಪಂದ್ಯಗಳಲ್ಲಿ 4 ಜಯ, 7 ಸೋಲು ಕಂಡಿದ್ದು, 8 ಅಂಕ ಕಲೆ ಹಾಕಿದೆ. ಅಲ್ಲದೆ ಆರ್‌ಸಿಬಿ ರನ್ ರೇಟ್ ಸಖತ್ ಇಂಪ್ರೂ ಆಗಿದೆ.

ಆರ್‌ಸಿಬಿ ತಂಡ ತನ್ನ ಮುಂದಿನ ಎಲ್ಲ ಪಂದ್ಯಗಳನ್ನೂ ಇದೇ ರೀತಿ ಬಿಗ್ ಮಾರ್ಜಿನ್‌ನಲ್ಲಿ ಗೆಲ್ಲುತ್ತಾ ಸಾಗಿದರೆ, ಪ್ಲೇ ಆಫ್ ಆಸೆ ಜೀವಂತವಾಗುತ್ತದೆ. ಇನ್ನು ಶನಿವಾರ ಆರ್‌ಸಿಬಿ ಸುಮಾರು 11 ಓವರ್‌ಗಳಲ್ಲಿ ಮುಗಿಸಿದ್ದರೆ ತಂಡದ ರನ್ ರೇಟ್ ಪಾಸಿಟಿವ್ ಆಗುತ್ತಿತ್ತು. ಇದೇ ಪ್ರಯತ್ನದಲ್ಲಿ ಸಾಗಿದ ಆರ್‌ಸಿಬಿ ವಿಕೆಟ್‌ಗಳನ್ನು ಕಳೆದುಕೊಂಡಿತು.
ಭರ್ಜರಿ ಆರಂಭ ಪಡೆದ ಆರ್‌ಸಿಬಿ
ಸಾಧಾರಣ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ತಂಡದ ಆರಂಭ ಭರ್ಜರಿಯಾಗಿತ್ತು. ಪವರ್ ಫುಲ್ ಆಟದ ಪ್ರದರ್ಶನ ನೀಡಿದ ಆರ್‌ಸಿಬಿ ಬ್ಯಾಟರ್‌ಗಳು ಅಬ್ಬರಿಸಿದರು. ಪವರ್ ಪ್ಲೇನ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದ ಆರ್‌ಸಿಬಿ ಓಪನರ್ಸ್ ಕ್ಲಾಸಿಕ್ ಆರಂಭ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕಲು ಗುಜರಾತ್ ವಿಫಲವಾಯಿತು.
ಫಾಫ್ ಡುಪ್ಲೇಸಿಸ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲಿ 92 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಇದರಲ್ಲಿ ನಾಯಕ ಫಾಫ್ ಸಿಂಹಪಾಲು ರನ್ ಅವರೇ ಬಾರಿಸಿದ್ದರು. ಫಾಫ್ 23 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ನೆರವಿನಿಂದ 64 ರನ್ ಬಾರಿಸಿ ಔಟ್ ಆದರು.

ಪಟಪಟನೆ ಬಿದ್ದ ವಿಕೆಟ್
ಫಾಫ್ ಡು ಪ್ಲೆಸಿಸ್ ಮತ್ತು ವಿಲ್ ಜಾಕ್ವೆಸ್ ಅವರ ವಿಕೆಟ್‌ಗಳನ್ನು ಕಳೆದುಕೊಂಡ ನಂತರ, RCB ಬೇಗನೆ 2 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಲ್ಲಿ ರಜತ್ ಪಾಟಿದಾರ್ 2 ರನ್ ಗಳಿಸಿದರು ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 4 ರನ್ ಗಳಿಸಿ ಔಟ್ ಆದರು. ಕ್ಯಾಮರೂನ್ ಗ್ರೀನ್ ಕೂಡ ಕೇವಲ 1 ರನ್ ಗಳಿಸಲಷ್ಟೇ ಶಕ್ತರಾದರು.
ವಿರಾಟ್ ಕೊಹ್ಲಿ 7 ಎಸೆತಗಳಲ್ಲಿ 42 ರನ್ ಗಳಿಸಿ ನೂರ್ ಅಹ್ಮದ್‌ಗೆ ಬಲಿಯಾದರು. ಆರ್‌ಸಿಬಿ 117 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಇಲ್ಲಿಂದ ಇನಿಂಗ್ಸ್ ಕೈಗೆತ್ತಿಕೊಂಡ ದಿನೇಶ್ ಕಾರ್ತಿಕ್ ಮತ್ತು ಸ್ವಪ್ನಿಲ್ ಸಿಂಗ್ 13.4 ಓವರ್ ಗಳಲ್ಲಿ ತಂಡಕ್ಕೆ ಜಯ ತಂದುಕೊಟ್ಟರು. ಕಾರ್ತಿಕ್ 21 ರನ್‌ಗಳ ಇನ್ನಿಂಗ್ಸ್ ಆಡಿದರೆ, ಸ್ವಪ್ನಿಲ್ ಅವರ ಬ್ಯಾಟ್‌ನಿಂದ 15 ರನ್ ಗಳಿಸಿದರು.

ಪವರ್ ಫುಲ್ ಬೌಲಿಂಗ್
ತವರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಪವರ್ ಫುಲ್ ಪ್ರದರ್ಶನ ನೀಡಿದರು. ಟಾಪ್ ಆರ್ಡರ್ ಬ್ಯಾಟರ್‌ಗಳಾದ ವೃದ್ಧಿಮನ್ ಸಹಾ (1), ನಾಯಕ ಶುಭ್‌ಮನ್ ಗಿಲ್ (2), ಸಾಯಿ ಸುದರ್ಶನ್ (6) ರನ್ ಕಲೆ ಹಾಕುವಲ್ಲಿ ವಿಫಲರಾದರು. ಪವರ್ ಪ್ಲೇನಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಪವರ್ ಪ್ಲೇನಲ್ಲಿ ಮೊಹಮ್ಮದ್ ಸಿರಾಜ್ 2 ಹಾಗು ಕ್ಯಾಮರೂನ್ ಗ್ರೀನ್ 1 ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಪೆಟ್ಟು ನೀಡಿದರು.
ಡೇವಿಡ್ ಮಿಲ್ಲರ್ (30) ಮತ್ತು ಶಾರುಖ್ ಖಾನ್ (37) ನಡುವೆ ಖಂಡಿತವಾಗಿಯೂ ಜೊತೆಯಾಟ ಕಂಡುಬಂದಿತು ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕರಣ್ ಶರ್ಮಾ ಸಫಲರಾದರು. ಗುಜರಾತ್ ಟೈಟಾನ್ಸ್ ತನ್ನ ಇನಿಂಗ್ಸ್‌ನ ಕೊನೆಯ 3 ವಿಕೆಟ್‌ಗಳನ್ನು ಸತತವಾಗಿ ಕಳೆದುಕೊಂಡಿತು ಮತ್ತು ಇಡೀ ತಂಡವು 19.3 ಓವರ್‌ಗಳಲ್ಲಿ 147 ಕ್ಕೆ ಕುಸಿಯಿತು.
ಅಂಕಪಟ್ಟಿಯಲ್ಲಿ ಆರ್‌ಸಿಬಿ 7ನೇ ಸ್ಥಾನಕ್ಕೆ ತಲುಪಿದೆ
ಈ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿರುವ ಆರ್‌ಸಿಬಿ ಇದೀಗ ಐಪಿಎಲ್ 17ನೇ ಸೀಸನ್‌ನಲ್ಲಿ 7ನೇ ಸ್ಥಾನಕ್ಕೆ ತಲುಪಿದೆ. ಈ ಪಂದ್ಯದ ಸೋಲಿನ ನಂತರ ಗುಜರಾತ್ ಟೈಟಾನ್ಸ್‌ಗೆ ಪ್ಲೇ ಆಫ್‌ಗೆ ಪ್ರವೇಶಿಸುವುದು ಬಹುತೇಕ ಅಸಾಧ್ಯವಾಗಿದೆ. ಈ ಋತುವಿನಲ್ಲಿ 11ನೇ ಪಂದ್ಯದಲ್ಲಿ ಗುಜರಾತ್ ತಂಡಕ್ಕೆ 7ನೇ ಸೋಲು ಇದಾಗಿದೆ.












Click it and Unblock the Notifications