RCB: ಡೆಲ್ಲಿಯಲ್ಲಿ ಆರ್‌ಸಿಬಿ ಬೌಲರ್‌ಗಳ ರಣಬೇಟೆ; ಪವರ್‌ಪ್ಲೇನಲ್ಲೇ ಕೇವಲ 13 ರನ್‌ಗೆ 6 ವಿಕೆಟ್‌ ಪತನ

RCB Vs DC IPL 2026: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ (ಏಪ್ರಿಲ್‌ 27) ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟರ್‌ಗಳ ವಿರುದ್ಧ ಆರ್‌ಸಿಬಿ ಬೌಲರ್‌ಗಳು ಮಾರಕ ಬೌಲಿಂಗ್ ದಾಳಿ ಮೂಲಕ ರಣಬೇಟಿಯಾಟ ಮುಂದುವರೆದಿದ್ದಾರೆ. ಪವರ್ ಪ್ಲೇನಲ್ಲೇ ಆರು ವಿಕೆಟ್‌ ಕೀಳುವ ಮೂಲಕ ಡೆಲ್ಲಿಗೆ ಆರಂಭಿಕ ಆಘಾತ ನೀಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಪ್ರದರ್ಶನ ಕುಸಿತ ಕಂಡಿದೆ. ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡರು. ಅದರಂತೆಯೇ ಮೊದಲು ಬ್ಯಾಟಿಂಗ್‌ಗಿಳಿದ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ 4 ಓವರ್‌ಗಳ ಒಳಗೆ 6 ವಿಕೆಟ್ ಕಳೆದುಕೊಳ್ಳುವ ತೀವ್ರ ಸಂಕ್ಟಕ್ಕೆ ಸಿಲುಕಿದೆ.

RCB vs Delhi Capitals IPL 2026 Delhi Collapse to 13 6 Bhuvneshwar kumar and Josh Hazlewood Shine

ಪವರ್ ಪ್ಲೇನಲ್ಲೇ 6 ವಿಕೆಟ್ ಕಳೆದುಕೊಂಡ ಡಿಸಿ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ 3 ವಿಕೆಟ್ ಪಡೆಯುವ ಮೂಲಕ ಡೆಲ್ಲಿ ಬ್ಯಾಟಿಂಗ್‌ಗೆ ಮುಳ್ಳಾಗಿದ್ದಾರೆ. 6 ಓವರ್‌ಗಳ ಅಂತ್ಯಕ್ಕೆ ಅಂದರೆ ಪವರ್ ಪ್ಲೇನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 13 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿದೆ.

ಟಾಪ್‌ ಆರ್ಡರ್ ಸ್ಫೋಟಕ ಬ್ಯಾಟರ್‌ಗಳು ಒಂದಕ್ಕಿ ರನ್‌ ದಾಟದೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ನತ್ತ ನಡೆದಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಡೆಲ್ಲಿ ಪರ ಪದಾರ್ಪಣೆ ಮಾಡಿದ 18 ವರ್ಷದ ಯುವ ಆಟಗಾರ ಸಾಹಿಲ್ ಪರಾಖ್, ನಾಯಕ ಅಕ್ಷರ್ ಪಟೇಲ್ ಮತ್ತು ಸಮೀರ್ ರಿಜ್ವಿ ಶೂನ್ಯಕ್ಕೆ ಔಟಾದರೆ, ನಾಯಕ ಕೆ.ಎಲ್. ರಾಹುಲ್ ಕೇವಲ 1, ನಿತೀಶ್ ರಾಣಾ 1, ಟ್ರಿಸ್ಟಾನ್ ಸ್ಟಬ್ಸ್ 5 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿ ನಿರಾಸೆ ಮೂಡಿಸಿದರು. ಆರ್‌ಸಿಬಿಯ ಉತ್ತಮ ಬೌಲಿಂಗ್ ದಾಳಿಗೆ ಡೆಲ್ಲಿ ತತ್ತರಿಸಿದ್ದು, ಐಪಿಎಲ್ ಇತಿಹಾಸದ ಅತ್ಯಂತ ಕಡಿಮೆ ಮೊತ್ತಕ್ಕೆ ಔಟಾಗುವ ಭೀತಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+