RCB: ಡಿಸಿ ವಿರುದ್ಧ ಸೋತರೂ ಆರ್‌ಸಿಬಿ ಬೌಲರ್‌ಗಳ ಬೆನ್ನಿಗೆ ನಿಂತ ದಿನೇಶ್ ಕಾರ್ತಿಕ್; ಇಲ್ಲಿದೆ ಕಾರಣ

RCB Dinesh Karthik: ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಶನಿವಾರ (ಏಪ್ರಿಲ್‌ 18) ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ರೋಚಕ ಐಪಿಎಲ್‌ ಪಂದ್ಯದಲ್ಲಿ ಸೋತರೂ ಸಹ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಪ್ರದರ್ಶನವನ್ನು ಮೆಂಟರ್ ದಿನೇಶ್ ಕಾರ್ತಿಕ್ ಶ್ಲಾಘಿಸಿದ್ದಾರೆ. ಆರ್‌ಸಿಬಿ ನೀಡಿದ 175 ರನ್‌ಗಳ ಗುರಿಯನ್ನು ಡೆಲ್ಲಿ ತಲುಪುವ ಮೂಲಕ ಗೆಲುವು ಸಾಧಿಸಿತು

"ನಮ್ಮ ಬೌಲರ್‌ಗಳು ನಿರೀಕ್ಷೆಗೂ ಮೀರಿದ ಅದ್ಭುತ ಪ್ರದರ್ಶನ ನೀಡಿದರು. ಅವರು 175 ರನ್‌ಗಳ ಮೊತ್ತವನ್ನು ಎದುರಾಳಿಗಳಿಗೆ 190 ರನ್‌ಗಳಂತೆ ಭಾಸವಾಗುವಂತೆ ಮಾಡಿದರು," ಎಂದು ಹೇಳಿದರು. ಬ್ಯಾಟಿಂಗ್‌ನಲ್ಲಿ ಅಂದುಕೊಂಡಷ್ಟು ರನ್ ಬರಲಿಲ್ಲ. ಆದರೂರೂ, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಆಟಗಾರರು ತೋರಿದ ಬದ್ಧತೆ ಬಗ್ಗೆ ಕಾರ್ತಿಕ್ ಶ್ಲಾಘಸಿದರು.

RCB vs DC IPL 2026 Dinesh Karthik Praises Bowlers Despite Royal Challengers Bengaluru Loss

ಆರ್‌ಸಿಬಿ ರನ್‌ ವೇಗಕ್ಕೆ ಡಿಸಿ ಬ್ರೇಕ್‌

ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿತು. ಆರಂಭಿಕ ಆಟಗಾರ ಫಿಲ್ ಸಾಲ್ಟ್ 38 ಎಸೆತಗಳಲ್ಲಿ 63 ರನ್ (4 ಬೌಂಡರಿ, 3 ಸಿಕ್ಸರ್) ಸಿಡಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಒಂದು ಹಂತದಲ್ಲಿ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದ ತಂಡ ಕೊನೆಯ 5 ಓವರ್‌ಗಳಲ್ಲಿ ಕೇವಲ 29 ರನ್ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ಬೌಲರ್‌ಗಳ ಶಿಸ್ತಿನ ಬೌಲಿಂಗ್‌ ದಾಳಿ ಬೆಂಗಳೂರಿನ ರನ್ ವೇಗಕ್ಕೆ ಬ್ರೇಕ್ ಹಾಕಿತು.

ಡೆಲ್ಲಿ ಪರ ಅಬ್ಬರಿಸಿದ ಸ್ಟಬ್ಸ್‌, ಮಿಲ್ಲರ್

176 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೆ.ಎಲ್.ರಾಹುಲ್ (57) ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅಜೇಯ 60 ರನ್‌ ರಳಿಸುವ ಮೂಲಕ ಆಸರೆಯಾದರು. ಇನ್ನೂ ಅಂತಿಮ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಸಿಡಿಸಿದ ಸಿಕ್ಸರ್‌ಗಳ ನೆರವಿನಿಂದ ಡೆಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿತು. ಇನ್ನೂ ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ 26 ರನ್ ನೀಡಿ 3 ವಿಕೆಟ್ ಪಡೆದು ಗಮನಾರ್ಹ ಪ್ರದರ್ಶನ ನೀಡಿದರು.

ಡೆಲ್ಲಿ ಕ್ಯಾಪಿಟಲ್ಸ್‌ ಗೆಲ್ಲಿಸಿದ ಡೇವಿಡ್ ಮಿಲ್ಲರ್

ಆರ್‌ಸಿಬಿ ಪರ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಪವರ್‌ಪ್ಲೇನಲ್ಲಿಯೇ ಮೂರು ವಿಕೆಟ್ ಪಡೆಯುವ ಮೂಲಕ ಡೆಲ್ಲಿ ತಂಡದ 3 ವಿಕೆಟ್ ಕಳೆದುಕೊಳ್ಳುವಂತೆ ಮಾಡಿ ಸಂಕಷ್ಟಕ್ಕೆ ತಳ್ಳಿದರು. ಆದರೆ, ಪಂದ್ಯದ ಅಂತಿಮ ಹಂತದಲ್ಲಿ ಡೆಲ್ಲಿ ಪರ ಡೇವಿಡ್ ಮಿಲ್ಲರ್ ಅಬ್ಬರ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಕೊನೆಯ ಓವರ್‌ನಲ್ಲಿ ಮಿಲ್ಲರ್ ಎರಡು ಭರ್ಜರಿ ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ರೋಚಕ ಜಯ ತಂದುಕೊಟ್ಟರು. ಇದರಿಂದಾಗಿ ಗೆಲ್ಲುವ ಹಂತದಲ್ಲಿದ್ದ ಪಂದ್ಯ ಆರ್‌ಸಿಬಿ ಕೈಜಾರಿತು.

ಆರ್‌ಸಿಬಿ ಬೌಲರ್‌ಗಳನ್ನ ಶ್ಲಾಘಿಸಿದ ಡಿಕೆ

ದಿನೇಶ್ ಕಾರ್ತಿಕ್ ಅವರು ಈ ಕುರಿತು ಮಾತನಾಡಿದ್ದು, "ನಾವು 175 ರನ್‌ಗಳನ್ನು 190 ರನ್‌ಗಳ ಮೊತ್ತದಂತೆ ಭಾಸವಾಗುವಂತೆ ಮಾಡಿದೆವು. ಯಾವುದೇ ಹಂತದಲ್ಲೂ ನಮಗೆ ರನ್‌ಗಳ ಕೊರತೆಯಿದೆ ಎಂದು ಅನಿಸಲಿಲ್ಲ. ನಮ್ಮ ಬಳಿ ಎಷ್ಟು ರನ್‌ಗಳು ಇದ್ದವೋ ಅದನ್ನು ಇಟ್ಟುಕೊಂಡೇ ಹೋರಾಡಲು ಬಯಸಿದ್ದೆವು. ತಂಡವಾಗಿ ನಮ್ಮ ಆಟಗಾರರು ತೋರಿದ ಈ ಹೋರಾಟದ ಮನೋಭಾವ ನಮಗೆ ನಿಜಕ್ಕೂ ಹೆಚ್ಚಿನ ಪ್ರೋತ್ಸಾಹ ನೀಡಿದೆ," ಎಂದು ಹೇಳಿದರು.

"ಬ್ಯಾಟಿಂಗ್ ಮಾಡಲು ಇದು ಕಠಿಣವಾದ ಪಿಚ್ ಆಗಿತ್ತು. ನಮ್ಮ ಬ್ಯಾಟರ್‌ಗಳು ಇನ್ನಿಂಗ್ಸ್‌ನ ಸುಮಾರು ಶೇಕಡ 75ರಷ್ಟು ಸಮಯ ತುಂಬಾ ಚೆನ್ನಾಗಿ ಆಡಿದರು. ಆದರೆ, ಒಪ್ಪಿಕೊಳ್ಳಲೇಬೇಕಾದ ವಿಷಯವೆಂದರೆ, ಕೊನೆಯ ಐದು ಓವರ್‌ಗಳಲ್ಲಿ ನಿರೀಕ್ಷಿಸಿದಷ್ಟು ರನ್‌ಗಳು ಬರಲಿಲ್ಲ," ಎಂದು ದಿನೇಶ್ ಕಾರ್ತಿಕ್ ಅವರು ಒಪ್ಪಿಕೊಂಡರು.

ಮುಂದುವರಿದು ಮಾತನಾಡಿದ ಅವರು, "ಆದರೆ ನಮ್ಮ ತಂಡದ ಆಟಗಾರರು ಬೌಲಿಂಗ್ ತುಂಬಾ ಚೆನ್ನಾಗಿ ಮಾಡಿದರು ಮತ್ತು ಅದ್ಭುತವಾಗಿ ಫೀಲ್ಡಿಂಗ್ ಮಾಡಿದರು. ಮಾಡಬಹುದಾದ ಎಲ್ಲವನ್ನೂ ಮಾಡಿದರು. ತಂಡದ ಕಡೆಗೆ ಆಟಗಾರರಿಗಿರುವ ಬದ್ಧತೆಯನ್ನು ಪ್ರತಿಯೊಬ್ಬರೂ ಮೈದಾನದಲ್ಲಿ ತೋರಿದ್ದಾರೆ," ಎಂದು ತಂಡದ ಹೋರಾಟವನ್ನು ಶ್ಲಾಘಿಸಿದರು. ಆದರೆ ಪಂದ್ಯದ ಅಂತಿಮ ಹಂತದಲ್ಲಿ ಮಿಲ್ಲರ್ ಮತ್ತು ಸ್ಟಬ್ಸ್ ಬಂದು ಅಬ್ಬರಿಸಿದರು. ಟಿ20 ಪಂದ್ಯಗಳಲ್ಲಿ ಇಂತಹ ಸಂಗತಿಗಳು ನಡೆಯುತ್ತಲಿರುತ್ತವೆ," ಎಂದು ಹೇಳಿದರು. ಒಟ್ಟಿನಲ್ಲಿ ಬ್ಯಾಟಿಂಗ್‌ನಲ್ಲಿ ಅಂತಿಮ ಓವರ್‌ಗಳ ವೈಫಲ್ಯ ಆರ್‌ಸಿಬಿ ತಂಡಕ್ಕೆ ಸೋಲಿಗೆ ಪ್ರಮುಖ ಕಾತಣವಾಯಿತಿ. ಈ ಸೋಲಿನ ಹೊರತಾಗಿಯೂ ತಂಡದ ಹೋರಾಟದ ಗುಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+