RCB Vs DC: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆರ್‌ಸಿಬಿ ಪರ ಕಣಕ್ಕಿಳಿಯಲಿದ್ದಾರೆ ಸ್ಫೋಟಕ ಬ್ಯಾಟರ್: ಪ್ಲೇಯಿಂಗ್‌ 11 ಹೀಗಿದೆ

IPL 2025 RCB Vs DC: ಐಪಿಎಲ್ 2025ರ 46ನೇ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ ಆಗಲಿದೆ. ಡಿಸಿ ಮಣಿಸಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಭರ್ಜರಿ ಸಿದ್ಧತೆ ನಡೆಸಿದೆ. ಹಾಗಾದ್ರೆ ಪ್ಲೇಯಿಂಗ್‌ 11 ಹೇಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.

ಇಂದಿನ ಹೈ ವೊಲ್ಟೇಜ್‌ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬಲಿಷ್ಠ ತಂಡಗಳಾದ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ನಡೆಯಲಿದೆ. ಈ ಪಂದ್ಯ ವೀಕ್ಷಣೆ ಮಾಡಲು ಕೊಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಾಕಂದ್ರೆ ಈಗಾಗಲೇ ಡೆಲ್ಲಿ ವಿರುದ್ಧ ತವರು ಮೈದಾನ ಚಿನ್ನಸ್ವಾಮಿಯಲ್ಲಿ ಸೋತಿರುವ ಆರ್‌ಸಿಬಿ ಇಂದು ಅದೇ ತಂಡದ ವಿರುದ್ಧ ಗೆಲುವು ಸಾಧಿಸಿ ಸೇಡು ತೀರಿಸಿಕೊಳ್ಳಲು ತಯಾರಿ ನಡೆಸಿದೆ.

ದೆಹಲಿಯಲ್ಲಿರುವ ಈ ಮೈದಾನ ಬ್ಯಾಟಿಂಗ್ಗೆ ಸಹಕಾರಿಯಾಗಿದೆ. ಆದ್ದರಿಂದ ಆರ್ಸಿಬಿ 5+3 ಸೂತ್ರದೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅದರಂತೆಯೇ ಆರ್‌ಸಿಬಿ ಪರ ಐವರು ಬ್ಯಾಟರ್ಗಳು ಹಾಗೂ ಮೂವರು ಆಲ್ರೌಂಡರ್ಗಳು ಡೆಲ್ಲಿ ವಿರುದ್ಧ ಅಬ್ಬರಿಸಲು ಸಜ್ಜಾಗಿದ್ಧಾರೆ.

ರಾಯಲ್ಸ್‌ ಚಾಲೆಂಜರ್ಸ್‌ ಪರ ಆರಂಭಿಕರಾಗಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್, ನಾಲ್ಕನೇ ಕ್ರಮಾಂಕದಲ್ಲಿ ನಾಯಕ ರಜತ್ ಪಾಟಿದಾರ್ ಕಣಕ್ಕಿಯಲು ಸಜ್ಜಾಗಿದ್ದಾರೆ. ಇನ್ನು ನಂತರದ 5ನೇ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟರ್‌ ರೊಮೊರಿಯೊ ಶೆಫರ್ಡ್ ಬಾಹುಬಲಿಯಂತೆ ಎಂಟ್ರಿ ಕೊಡಲಿದ್ದಾರೆ.

6ನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಹಾಗೂ ಚಾಣಕ್ಷನ ಬ್ಯಾಟರ್ ಜಿತೇಶ್ ಶರ್ಮಾಗೆ ಕಣಕ್ಕಿಳಿಯಲಿದ್ದಾರೆ. 7 ಹಾಗೂ 8ನೇ ಕ್ರಮಾಂಕಗಳಲ್ಲಿ ಟಿಮ್ ಡೇವಿಡ್ ಹಾಗೂ ಕೃನಾಲ್ ಪಾಂಡ್ಯ ಕಣಕ್ಕಿಳಿಯಲಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಜೋಶ್ ಹ್ಯಾಝಲ್ವುಡ್, ಯಶ್ ದಯಾಳ್ ಹಾಗೂ ಭುವನೇಶ್ವರ್ ಕುಮಾರ್ ಮಾರಕ ಬೌಲಿಂಗ್ ದಾಳಿ ನಡೆಸಲು ಸಜ್ಜಾಗಿದ್ದು, ಇವರಿಗೆ ಸ್ಪಿನ್ನರ್‌ಗಳಾದ ಕೃನಾಲ್‌ ಪಾಂಡ್ಯ, ಸುಯೇಶ್‌ ಶರ್ಮಾ ಸಾಥ್‌ ಕೊಡಲಿದ್ದಾರೆ ಎನ್ನಲಾಗುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಝಲ್‌ವುಡ್, ಯಶ್ ದಯಾಳ್, ಸುಯೇಶ್ ಶರ್ಮಾ, ಸ್ವಪ್ನಿಲ್ ಸಿಂಗ್, ರಾಸಿಖ್ ದರ್ ಸಲಾಮ್, ಜೇಕಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಲುಂಗಿ ಎನ್‌ಗಿಡಿ, ನುವಾನ್ ತುಷಾರ, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರ, ಅಭಿನಂದನ್ ಸಿಂಗ್.

ಆರ್‌ಸಿಬಿ ಸಂಭಾವ್ಯ ತಂಡ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್‌ (ನಾಯಕ), ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಝಲ್‌ವುಡ್, ಯಶ್ ದಯಾಳ್. ಹೀಗೆ ಆರ್‌ಸಿಬಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ರಣತಂತ್ರ ರೂಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+