RCB vs CSK: ದಾಖಲೆ ಬರೆದ ವಿರಾಟ್ ಕೊಹ್ಲಿ, ಶೆಫರ್ಡ್; ಬೃಹತ್ ಮೊತ್ತ ಕಲೆಹಾಕಿದ ಆರ್‌ಸಿಬಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸಿಎಸ್‌ಕೆ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಬರೆದರೆ, ತಮ್ಮ ಎರಡನೇ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ ಜಾಕೋಬ್ ಬೆಥೆಲ್ ಗಮನ ಸೆಳೆದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್ ಗಳಲ್ಲಿ ವಿಕೆಟ್ ಕಳೆದುಕೊಂಡು ರನ್ ಕಲೆಹಾಕಿತು.
2025ರ ಐಪಿಎಲ್‌ನಲ್ಲಿ ಆರ್ ಸಿಬಿ ನಾಯಕ ರಜತ್ ಪಟಿದಾರ್ ಮತ್ತೊಮ್ಮೆ ಟಾಸ್ ಸೋತರು. ಈ ಆವೃತ್ತಿಯಲ್ಲಿ ರಜತ್ ಪಟಿದಾರ್ ತವರಿನ ಪಂದ್ಯದಲ್ಲಿ ಐದೂ ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ. ಟಾಸ್ ಗೆಲ್ಲುತ್ತಿದ್ದಂತೆ ಧೋನಿ ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದರು.

ಫಿಲ್ ಸಾಲ್ಟ್ ಅವರ ಅನುಪಸ್ಥಿತಿ ನಡುವೆ ಮತ್ತೊಮ್ಮೆ ಜೇಕಬ್ ಬೆಥೆಲ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆದರು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬೆಥೆಲ್ 33 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ಸಹಿತ 55 ರನ್ ಗಳಿಸಿದರು.
ದಾಖಲೆ ಬರೆದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಕೂಡ ಅರ್ಧಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಬರೆದರು. ಸಿಎಸ್‌ಕೆ ವಿರುದ್ಧ ಯಾವುದೇ ಆಟಗಾರನೊಬ್ಬ ಅತ್ಯಧಿಕ ವೈಯಕ್ತಿಕ ರನ್ ಗಳಿಸಿದ ಸಾಧನೆ ಮಾಡಿದರು. ಸಿಎಸ್‌ಕೆ ವಿರುದ್ಧ ಕೊಹ್ಲಿ 1146 ರನ್ ಗಳಿಸಿದ್ದು ಇದು ಐಪಿಎಲ್‌ನಲ್ಲಿ ಯಾವುದೇ ತಂಡದ ವಿರುದ್ಧ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ರನ್ ಆಗಿದೆ. ಡೇವಿಡ್ ವಾರ್ನರ್ ಪಂಜಾಬ್ ಕಿಂಗ್ಸ್ ವಿರುದ್ಧ 1134 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.
ವಿರಾಟ್ ಕೊಹ್ಲಿ 2016ರಲ್ಲಿ ಮಾಡಿದ್ದ ದಾಖಲೆಯನ್ನು ಸರಿಗಟ್ಟಿದರು. 2016ರಲ್ಲಿ ಸತತವಾಗಿ 4 ಅರ್ಧಶತಕ ಗಳಿಸಿದ್ದ ಅವರು ಈ ಆವೃತ್ತಿಯಲ್ಲೂ ಸತತವಾಗಿ ನಾಲ್ಕು ಅರ್ಧಶತಕ ಸಿಡಿಸಿದರು. 300ನೇ ಸಿಕ್ಸರ್ ಸಿಡಿಸಿದ ಅವರು ಐಪಿಎಲ್‌ನಲ್ಲಿ ತಂಡದ ಪರವಾಗಿ 300 ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡರು.
ರೊಮಾರಿಯೋ ಶೆಫರ್ಡ್ ಅಬ್ಬರ
ಕೊಹ್ಲಿ, ಬೆಥೆಲ್ ಔಟಾಗುತ್ತಿದ್ದಂತೆ ಆರ್ ಸಿಬಿ ಹಾದಿ ಕಳೆದುಕೊಂಡಿರು. ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ ಮತ್ತು ರಜತ್ ಪಟಿದಾರ್ ರನ್ ಗಳಿಸಲು ತಡಕಾಡಿದರು. ಒಂದು ಹಂತದಲ್ಲಿ 12 ಓವರ್ ಗಳಲ್ಲಿ 120 ರನ್ ಗಳಿಸಿದ್ದ ಆರ್ ಸಿಬಿ 17.4 ಓವರ್ ಗಳಲ್ಲಿ 157 ರನ್ ಮಾತ್ರ ಗಳಿಸಿತ್ತು. ಆರ್ ಸಿಬಿ 180 ರನ್ ಗಳಿಸುತ್ತಾ ಎನ್ನುವ ಪ್ರಶ್ನೆ ಇದ್ದಾಗಲೇ ರೊಮಾರಿಯೋ ಶೆಫರ್ಡ್ ಕ್ರೀಸ್‌ಗೆ ಬಂದರು.
14 ಎಸೆತಗಳನ್ನು ಆಡಿದ ಅವರು ಸಿಎಸ್‌ಕೆ ಬೌಲರ್ ಗಳಿಗೆ ಅಕ್ಷರಶಃ ನರಕ ತೋರಿಸಿದರು. ಖಲೀಲ್ ಅಹ್ಮದ್ ಅವರ 19ನೇ ಓವರ್ ನಲ್ಲಿ 33 ರನ್ ಚಚ್ಚಿದ ಅವರು ಬಳಿಕ 20ನೇ ಓವರ್ ನಲ್ಲಿ 21 ರನ್ ಗಳಿಸಿ ಐಪಿಎಲ್ 2025ರ ಆವೃತ್ತಿಯ ಅತಿ ವೇಗದ ಅರ್ಧಶತಕ ದಾಖಲಿಸಿದರು. 14 ಎಸೆತಗಳಲ್ಲಿ 4 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ ಅಜೇಯ 53 ರನ್ ಗಳಿಸಿದರು.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಶುಭ್ಮನ್ ಗಿಲ್ ಭೇಟಿಯಾದ ಅನನ್ಯಾ ಬಿರ್ಲಾ; ಆರ್‌ಸಿಬಿ ಹೊಸ ಮಾಲೀಕನ ಸಹೋದರಿಗೆ ಗುಜರಾತ್ ಜೆರ್ಸಿನಾ ಎಂದ ನೆಟ್ಟಿಗರು -
IPL 2026: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ 'ನಮ್ಮ ಮೆಟ್ರೋ' ಪ್ರಯಾಣ ಉಚಿತ -
IPL 2026: ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯ, ಮಾರ್ಚ್ 28ಕ್ಕೆ ಬೆಂಗಳೂರಿನ ಯಾವ ರಸ್ತೆಗಳೆಲ್ಲ ಬಂದ್ ಆಗಲಿದೆ? ಇಲ್ಲಿದೆ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL 2026: ಆರ್‌ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್‌ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ












Click it and Unblock the Notifications