RCB Vs CSK: ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ: ಸಿಎಸ್‌ಕೆ ವಿರುದ್ಧ ಯಶ್ ದಯಾಳ್ ಜಾಗಕ್ಕೆ ಮತ್ಯಾರು?
RCB Vs CSK: ಐಪಿಎಲ್ 18ನೇ ಆವೃತ್ತಿಯ ಸಿಎಸ್‌ಕೆ ಹಾಗೂ ಆರ್‌ಸಿಬಿ ಹೈ ವೋಲ್ಟೇಜ್ ಪಂದ್ಯ ಮಾರ್ಚ್ 18ರಂದು ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಈ ಕ್ರೀಡಾಂಗಣದಲ್ಲಿ ಕಳೆದ 17 ಸೀಸನ್‌ಗಳಿಂದಲೂ ಆರ್‌ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದ ಇತಿಹಾಸವಿಲ್ಲ. ಆದ್ದರಿಂದ ನಾಳಿನ ಪಂದ್ಯದಲ್ಲಾದರೂ ಗೆಲುವು ಸಾಧಿಸಿ ಇತಿಹಾಸ ನಿರ್ಮಾಣ ಮಾಡಲು ಪ್ಲಾನ್‌ವೊಂದನ್ನು ಮಾಡಿಕೊಂಡಿದೆ.
ಆರ್‌ಸಿಬಿ ತಂಡವು ಈ ಆವೃತ್ತಿಯ ಎರಡನೇ ಪಂದ್ಯವನ್ನು ಸಿಎಸ್‌ಕೆ ವಿರುದ್ಧ ಆಡಲು ಸಿದ್ಧತೆ ನಡೆಸಿದೆ. ಈ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದು, ಈ ಮೈದಾನದಲ್ಲಿ ಕಳೆದ 17 ಸೀಸನ್‌ಗಳಿಂದಲೂ ಆರ್‌ಸಿಬಿ ಸಿಎಸ್‌ಕೆ ತಂಡವನ್ನು ಸೋಲಿಸಲು ಆಗಿಲ್ಲ. ಆದ್ದರಿಂದ ನಾಳಿನ ಪಂದ್ಯ ನಾಯಕ ರಜತ್ ಪಾಟಿದಾರ್‌ಗೆ ದೊಡ್ಡ ಸವಾಲಾಗಿದೆ.

ಈ ಆವೃತ್ತಿಯ ಬಗ್ಗೆ ಹೇಳುವುದಾದರೆ, ಆರ್‌ಸಿಬಿಯು ಉದ್ಘಾಟನಾ ಪಂದ್ಯದಲ್ಲಿ ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಇನ್ನೂ ಮಾರ್ಚ್ 18ರಂದು ಸಿಎಸ್‌ಕೆ ವಿರುದ್ಧ ಎರಡನೇ ಪಂದ್ಯ ಆಡಲಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಆರ್‌ಬಿಯು ಎರಡನೇ ಪಂದ್ಯದಲ್ಲೂ ಗೆಲ್ಲಲ್ಲೇಬೇಕೆನ್ನುವ ಹಠತೊಟ್ಟು ನಿಂತಿದೆ.
ಮತ್ತೊಂದೆಡೆ ಸಿಎಸ್‌ಕೆ ಈ ಆವೃತ್ತಿಯ ಮೊದಲ ಪಂದ್ಯವನ್ನು ಮುಂಬೈ ವಿರುದ್ಧ ಗೆಲುವಿನ ಶುಭಾರಂಭ ಮಾಡಿದೆ. ಈ ಪಂದ್ಯ ಕೂಡ ಚೆನ್ನೈನಲ್ಲಿ ನಡೆದಿತ್ತು. ಇದೀಗ ನಾಳಿನ ಪಂದ್ಯ ಕೂಡ ಚೆನ್ನೈನಲ್ಲೇ ನಡೆಯಲಿದ್ದು, ಆರ್‌ಸಿಬಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ತೋರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮೊದಲ ಪಂದ್ಯದಲ್ಲಿ ಗಾಯಗೊಂಡ ಕಾರಣ ಆರ್‌ಸಿಬಿ ಪರ ವೇಗಿ ಭುವನೇಶ್ವರ್ ಕುಮಾರ್ ಆಡಲು ಸಾಧ್ಯವಾಗಿರಲಿಲ್ಲ. ರಸಿಕ್ ಸಲಾಂ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಯಿತು. ಆದರೆ ನಾಳೆ ನಡೆಯುವ ಸಿಎಸ್‌ಕೆ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ. ಮತ್ತೊಂದೆಡೆ ಈ ಮೈದಾನಕ್ಕೆ ಅನುಗುಣವಾಗಿ ಹೆಚ್ಚು ಮಂದಿ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಈ ಮೈದಾನವು ಸ್ಪಿನ್ನರ್‌ಗಳಿಗೆ ಹೇಳಿ ಮಾಡಿಸಿದ ಮೈದಾನವಾಗಿದೆ. ಆದ್ದರಿಂದ ಆರ್‌ಸಿಬಿಯು ಸಿಎಸ್‌ಕೆ ವಿರುದ್ಧ ಆಡುವ 11ರ ಬಳಗದಲ್ಲಿ ಯಶ್ ದಯಾಳ್ ಬದಲಿಗೆ ಸ್ಪಿನ್ನರ್ ಮೋಹಿತ್ ರಾಥಿಗೆ ಅವಕಾಶ ನೀಡಲು ಮುಂದಾಗಿದೆ. ಮೋಹಿತ್ ತಂಡಕ್ಕೆ ಸೇರ್ಪಡೆಯಾದರೆ, ಸುಯಾಶ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ಅವರಿಗೆ ಸಾಥ್ ನೀಡಲಿದ್ದಾರೆ.
ಲಿಯಾನ್ ಲಿವಿಂಗ್‌ಸ್ಟೋನ್ ಕೂಡ ಸ್ಪಿನ್ ಬೌಲಿಂಗ್ ಮಾಡುತ್ತಾರೆ. ಈ ಪಂದ್ಯದಲ್ಲಿ ಆರ್‌ಸಿಬಿ ತನ್ನ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ. ಆದರೂ, ದೇವದತ್ ಪಡಿಕ್ಕಲ್ ಅವರು ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ್ ತೋರದ ಕಾರಣ ಅವರ ಬದಲಿಗೆ ಬೇರೆಯವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ ಅಂತಲೂ ಹೇಳಬಹುದು.
ಆರ್‌ಸಿಬಿ ಸಾಂಭವ್ಯ ತಂಡ: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾನ್ ಲಿವಿಂಗ್‌ಸ್ಟೋನ್, ಟೀಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ, ಮೋಹಿತ್ ರಾಥಿ.












Click it and Unblock the Notifications