ವಿರೋಧಿಗಳ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ- 100ನೇ ಅರ್ಧಶತಕ ಬಾರಿಸಿದ ಕಿಂಗ್ ಕೊಹ್ಲಿ! Virat Kohli
ವಿರಾಟ್ ಕೊಹ್ಲಿ ಮನಸ್ಸು ಮಾಡಿದರೆ ಎಂತಹ ಎದುರಾಳಿ ತಂಡವೇ ಇರಲಿ ಧೂಳಿಪಠ ಮಾಡಿ ಹಾಕುತ್ತಾರೆ ಅನ್ನೋದು ಅಭಿಮಾನಿಗಳ ಮಾತು. ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನಕ್ಕೆ ಬಂದರೆ ಎದುರಾಳಿ ತಂಡಗಳಿಗೆ ನಡುಕ ಗ್ಯಾರಂಟಿ. ಇಷ್ಟೆಲ್ಲಾ ಇದ್ದರೂ ಕಿಂಗ್ ವಿರಾಟ್ ಕೊಹ್ಲಿ ಬಗ್ಗೆ ಬಾಯಿಗೆ ಬಂದ ರೀತಿ ಮಾತನಾಡುವ ಜನರೇ ಹೆಚ್ಚಾಗಿದ್ದಾರೆ. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಅಭಿಮಾನಿಗಳು ಕೂಡ ವಿರೋಧಿಗಳಿಗೆ ವಾರ್ನಿಂಗ್ ಕೊಡುತ್ತಲೇ ಬಂದಿದ್ದಾರೆ. ಇದೀಗ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಮೂಲಕ ಮತ್ತೆ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಅವರಿಗೆ ದೊಡ್ಡ ಸ್ಥಾನಮಾನ ಇದ್ದು, ಅದರಲ್ಲೂ ಐಪಿಎಲ್ ಅಖಾಡದಲ್ಲಿ ವಿರಾಟ್ ಕೊಹ್ಲಿ ಹೆಸರು ಕೇಳಿದರೆ ಸಾಕು ಬಾಕಿ ತಂಡ & ಆಟಗಾರರ ಎದೆಯಲ್ಲಿ ನಡುಕ ಗ್ಯಾರಂಟಿ. ಯಾಕಂದ್ರೆ ವಿರಾಟ್ ಕೊಹ್ಲಿ ಒಂದು ಬಾರಿ, ತನ್ನ ಬ್ಯಾಟ್ ಝಳಪಿಸಲು ಆರಂಭ ಮಾಡಿದರೆ ಎದುರಾಳಿ ತಂಡಗಳು ಧೂಳಿಪಠ ಗ್ಯಾರಂಟಿ. ಅದೇ ರೀತಿ ಇಂದು ಕೂಡ ಕಿಂಗ್ ವಿರಾಟ್ ಕೊಹ್ಲಿ ಅಬ್ಬರಿಸಿದ್ದು, ಭರ್ಜರಿ ಅರ್ಧ ಶತಕದ ಕೊಡುಗೆ ನೀಡಿದ್ದಾರೆ ಆರ್‌ಸಿಬಿ ಆಟಗಾರ.

ಕೊಹ್ಲಿ.. ಕೊಹ್ಲಿ.. ಕೊಹ್ಲಿ..!
ವಿರಾಟ್ ಕೊಹ್ಲಿ ಅವರು ಸಾಲು ಸಾಲು ಹಿನ್ನಡೆ ಅನುಭವಿಸುತ್ತಿದ್ದರೂ, ಅವರ ಆಟದಲ್ಲಿ ಮಾತ್ರ ಯಾವುದೇ ರೀತಿ ಬದಲಾವಣೆ ಆಗಿಲ್ಲ. ವಿರಾಟ್ ಕೊಹ್ಲಿ ಒಮ್ಮೆ ಹಿನ್ನಡೆ ಅನುಭವಿಸಿ ಪರದಾಡಿದರೆ ಅದರ ಮುಂದಿನ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ಗ್ಯಾರಂಟಿ. ಐಪಿಎಲ್ ಇರಲಿ ಅಥವಾ ಇನ್ನೂ ಯಾವುದೇ ರೀತಿಯ ಟೂರ್ನಿಯಲ್ಲೂ ವಿರಾಟ್ ಕೊಹ್ಲಿ ಆರ್ಭಟಿಸಲು ನಿಂತರೆ ಎದುರಾಳಿ ತಂಡಗಳ ಪರಿಸ್ಥಿತಿ ಮುಗಿದು ಹೋಗುತ್ತದೆ. ಅದೇ ರೀತಿ ಇವತ್ತು ರಾಜಸ್ಥಾನಕ್ಕೂ ಪಾಠ ಕಲಿಸಿದ್ದಾರೆ ಕಿಂಗ್ ವಿರಾಟ್ ಕೊಹ್ಲಿ!
ನಮ್ಮ ಆರ್‌ಸಿಬಿ ತಂಡಕ್ಕೆ ಭರ್ಜರಿ ಗೆಲುವು!
ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ ರಾಯಲ್ಸ್ ತಂಡ, ಭರ್ಜರಿ 173 ರನ್ ಗಳಿಸಿತ್ತು. ಈ ಮೂಲಕ 174 ರನ್‌ಗಳ ಗುರಿ ಬೆನ್ನುಹತ್ತಿದ ನಮ್ಮ ಆರ್‌ಸಿಬಿ ತಂಡವು ಉತ್ತಮ ಆರಂಭ ಪಡೆಯಿತು. ಫಿಲ್ ಸಾಲ್ಟ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ, ರಾಜಸ್ಥಾನದ ಬೌಲಿಂಗ್ ಪಡೆಯನ್ನು ಚಚ್ಚಿ ಬಿಸಾಡಿದರು. ಈ ಮೂಲಕ ವಿರಾಟ್ ಕೊಹ್ಲಿ ಭರ್ಜರಿಯಾಗಿ 45 ಬಾಲ್ ಆಡಿ 62 ರನ್ ಸಿಡಿಸಿದರು.
ಹಾಗೇ 33 ಬಾಲ್ ಆಡಿದ ಫಿಲ್ ಸಾಲ್ಟ್ 65 ರನ್ ಕೊಡುಗೆ ನೀಡಿದರು. ಈ ಮೂಲಕ ಆರ್‌ಸಿಬಿ ತಂಡ ಅರ್ಧ ಗೆಲುವಿನ ದಡ ಮುಟ್ಟಿದ್ದಾಗಲೇ ಫಿಲ್ ಸಾಲ್ಟ್ ಔಟ್ ಆದರು. ನಂತರ ಬಂದ ದೇವದತ್ ಪಡಿಕ್ಕಲ್, ಬರೋಬ್ಬರಿ 40 ರನ್ ಸಿಡಿಸಿ ಕೊಹ್ಲಿ ಅವರಿಗೆ ಸಾಥ್ ನೀಡಿ ಆರ್‌ಸಿಬಿ ಗೆಲುವಿನಲ್ಲಿ ಪಾತ್ರ ವಹಿಸಿದರು. ಈ ಮೂಲಕ ಆರ್‌ಸಿಬಿ ಬೆಂಗಳೂರು ತಂಡ ಭರ್ಜರಿಯಾಗಿ ಮ್ಯಾಚ್ ಗೆದ್ದಿದೆ.












Click it and Unblock the Notifications