ಕೊಹ್ಲಿ ಜೊತೆ ಕಿರಿಕ್ ಮಾಡಿದ ಶ್ರೇಯಸ್ ಅಯ್ಯರ್‌ಗೆ ಮಾರಿಹಬ್ಬ ಗ್ಯಾರಂಟಿ! Virat Kohli
ಕ್ರಿಕೆಟ್ ಅಂದಮೇಲೆ ಕಿರಿಕ್ ಇದ್ದೇ ಇರುತ್ತೆ, ಅದರಲ್ಲೂ ಮೈದಾನದಲ್ಲಿ ಹೊಡಿ & ಬಡಿ ಅಂತಾ ಫೈಟಿಂಗ್ ಕೂಡ ಮಾಡಿದ್ದಾರೆ. 2008ರ ಐಪಿಎಲ್ ಟೂರ್ನಿಯಲ್ಲಿ ಹರ್ಭಜನ್ ಸಿಂಗ್ ಅವರು ಶ್ರೀಶಾಂತ್ ಕಪಾಳಕ್ಕೆ ಹೊಡೆದಿದ್ದು ಸಂಚಲನ ಸೃಷ್ಟಿ ಮಾಡಿತ್ತು. ಇದೀಗ ನಮ್ಮ ಬೆಂಗಳೂರು ತಂಡ ಆರ್‌ಸಿಬಿ & ಪಂಜಾಬ್ ಕಿಂಗ್ಸ್ ನಡುವೆ ಮ್ಯಾಚ್ ನಡೆಯುವಾಗಲೂ ಸಿಕ್ಕಾಪಟ್ಟೆ ಕಿರಿಕ್ ಆಗಿ ಫೈಟಿಂಗ್ ನಡೆದಿದ್ದು, ಕೊಹ್ಲಿ ಜೊತೆ ಕಿರಿಕ್ ಮಾಡಿದ ಶ್ರೇಯಸ್ ಅಯ್ಯರ್‌ಗೆ ಮಾರಿಹಬ್ಬ ಗ್ಯಾರಂಟಿ ಆಗಿದೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಕೆಣಕಿ ಉಳಿದವರಿಲ್ಲ.. ಅಂದಹಾಗೆ ಈ ರೀತಿ ಎಲ್ಲರೂ ಆರ್‌ಸಿಬಿ ತಂಡದ ಬಗ್ಗೆ ಮಾತನಾಡುತ್ತಾರೆ. ಅದರಲ್ಲೂ ವಿರಾಟ್ ಕೊಹ್ಲಿ ಕೋಪ ಯಾರಿಗೂ ತಡೆಯಲು ಆಗಲ್ಲ, ಒಂದು ಬಾರಿ ವಿರಾಟ್ ಕೊಹ್ಲಿ ಅವರನ್ನು ಯಾರಾದರೂ ಕೆಣಕಿದರೆ ಅವರಿಗೆ ತಿರುಗಿಸಿ ಸರಿಯಾಗಿ ಕೊಡುವ ತನಕ ಕೂಡ ವಿರಾಟ್ ಕೊಹ್ಲಿ ನಿದ್ದೆಯನ್ನೇ ಮಾಡಲ್ಲ. ಅದೇ ರೀತಿ ಈಗಲೂ ಮೈದಾನದಲ್ಲೇ ಫೈಟಿಂಗ್ ನಡೆದು ಹೋಗಿದೆ!

ಮೈದಾನದಲ್ಲೇ ಕಿತ್ತಾಡಿದ ಕೊಹ್ಲಿ & ಅಯ್ಯರ್...
ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ... ಇದು ಕನ್ನಡಿಗರ ಹೃದಯದ ಬಡಿತ ಆಗಿ ಹೋಗಿದೆ. ಬೆಂಗಳೂರು ತಂಡ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಅಂತಾ ಡಿಸೈಡ್ ಆಗಿದ್ದಾರೆ ಅಭಿಮಾನಿಗಳು. ಹೀಗಿದ್ದಾಗ ಸಾಲು ಸಾಲು ಸೋಲು ಕಾಣುತ್ತಿದ್ದ ಆರ್‌ಸಿಬಿ ತಂಡ ಭಾನುವಾರವೇ ಪಂಜಾಬ್ ತಂಡದ ಹೆಡೆಮುರಿ ಕಟ್ಟಿ ಭರ್ಜರಿ ಗೆಲುವು ಕಂಡು ವಿಜಯ ಪತಾಕೆ ಹಾರಿಸಿದೆ. ಹೀಗಿದ್ದಾಗಲೇ, ಕೊಹ್ಲಿ ಜೊತೆ ಕಿರಿಕ್ ಮಾಡಿದ ಶ್ರೇಯಸ್ ಅಯ್ಯರ್‌ಗೆ ಮಾರಿಹಬ್ಬ ಗ್ಯಾರಂಟಿ...
ಶ್ರೇಯಸ್ ವಿರುದ್ಧ ರೊಚ್ಚಿಗೆದ್ದ ಅಭಿಮಾನಿಗಳು!
ಹೌದು, ಬೆಂಗಳೂರಿಗೆ ಬಂದು ಮ್ಯಾಚ್ ಆಡಿ ಗೆದ್ದಿದ್ದ ಪಂಜಾಬ್ ತಂಡ ಆ ನಂತರ ನಮ್ಮ ಆರ್‌ಸಿಬಿ ಅಭಿಮಾನಿಗಳಿಗೆ ಠಕ್ಕರ್ ಕೊಟ್ಟಿತ್ತು ಎಂಬ ಆರೋಪ ಇತ್ತು. ಈ ಆರೋಪ ಕೇಳಿ ಬಂದ ನಂತರ ವಿರಾಟ್ ಕೊಹ್ಲಿ ಕೂಡ ಪಂಜಾಬ್ ನೆಲದಲ್ಲಿ ನಿಂತು ಶ್ರೇಯಸ್ ಅಯ್ಯರ್‌ಗೆ ಸೇರಿದಂತೆ ಪಂಜಾಬ್ ಆಟಗಾರರ ವಿರುದ್ಧ ಗುಡುಗಿದ್ದರು. ಹೀಗಿದ್ದಾಗಲೇ, ಶ್ರೇಯಸ್ ಅಯ್ಯರ್ ವಿರುದ್ಧ ರಾಯಲ್ ಫ್ಯಾನ್ಸ್ ಕೂಡ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಅಲ್ಲದೆ ಮುಂದೆ ಯಾವ ಮ್ಯಾಚ್ ನಡೆದರೂ ನಮ್ಮ ಕೆಪಾಸಿಟಿ ತೋರಿಸುತ್ತೇವೆ ಅಂತಾ ಇದೀಗ ಶ್ರೇಯಸ್ ಅಯ್ಯರ್ ಸೇರಿದಂತೆ ಪಂಜಾಬ್ ಆಟಗಾರರಿಗೆ ಚಾಲೆಂಜ್ ಹಾಕಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ದೊಡ್ಡ ತಿಕ್ಕಾಟ ಕೂಡ ಆರಂಭವಾಗಿದೆ.












Click it and Unblock the Notifications