RCB: ಆರ್‌ಸಿಬಿ ತಂಡದಿಂದ ಸ್ಟಾರ್ ಪ್ಲೇಯರ್ ಔಟ್!

2025ರ ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೆಲವೇ ದಿನಗಳು ಇರುವಾಗ ಆರ್ ಸಿಬಿ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ತಂಡದ ಪ್ರಮುಖ ಆಲ್‌ರೌಂಡರ್ ಸೋಫಿ ಡಿವೈನ್ ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕಣಕ್ಕಿಳಿಯಲ್ಲ ಎಂದು ವರದಿಯಾಗಿದೆ. ಹಾಲಿ ಚಾಂಪಿಯನ್ ಆರ್ ಸಿಬಿಗೆ ಇದು ದೊಡ್ಡ ಹಿನ್ನಡೆಯಾಗಿದೆ.

ಸೋಫಿ ಡಿವೈನ್‌ ವಿಶ್ರಾಮತಿ ತೆಗೆದುಕೊಳ್ಳಲು ನಿರ್ಧರಿಸಿರುವುದರಿಂದ ಅವರು ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದಿಲ್ಲ. ಈ ಸುದ್ದಿಯನ್ನು ನ್ಯೂಜಿಲೆಂಡ್ ಕ್ರಿಕೆಟ್ ದೃಢಪಡಿಸಿದ್ದು ಆದರೆ ಸೋಫಿ ಡಿವೈನ್ ಯಾಕೆ ಆಡುತ್ತಿಲ್ಲ ಎನ್ನುವ ಬಗ್ಗೆ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ.

Rcb star all rounder sophie devine not playing in wpl 2025 for this reason

"ಆಟಗಾರರ ಯೋಗಕ್ಷೇಮ ನಮಗೆ ಮೊದಲ ಆದ್ಯತೆ, ಅದಕ್ಕೆ ನಾವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು" ಎಂದು ಮಹಿಳಾ ಕ್ರಿಕೆಟ್ ಪ್ರದರ್ಶನ ಅಭಿವೃದ್ಧಿ ಮುಖ್ಯಸ್ಥೆ ಲಿಜ್ ಗ್ರೀನ್ ತಿಳಿಸಿದ್ದಾರೆ. ಸೋಫಿ ಡಿವೈನ್ಗೆ ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರರ ಸಂಘ ಮತ್ತು ನಮ್ಮ ಘಟಕದ ಸಿಬ್ಬಂದಿಯಿಂದ ಉತ್ತಮ ಬೆಂಬಲವಿದೆ. ಅವರಿಗೆ ಈಗ ವಿಶ್ರಾಂತಿಯ ಅಗತ್ಯವಿದೆ. ಫಿಟ್‌ನೆಸ್‌ ಮೇಲೆ ಅವರು ಕೆಲಸ ಮಾಡಲಿದ್ದಾರೆ" ಎಂದು ಹೇಳಿದ್ದಾರೆ.

ಡಿವೈನ್ ಯಾವಾಗ ಕಣಕ್ಕಿಳಿಯುತ್ತಾರೆ ಎನ್ನುವ ಬಗ್ಗೆ ಸರಿಯಾದ ಸಮಯದಲ್ಲಿ ನಿರ್ಧಾರವನ್ನು ಘೋಷಣೆ ಮಾಡಲಾಗುವುದು, ಅವರು ನ್ಯೂಜಿಲೆಂಡ್‌ನ ಶ್ರೇಷ್ಠ ಕ್ರಿಕೆಟರ್ ಎಂದು ತಿಳಿಸಿದ್ದಾರೆ. ಸೋಫಿ ಡಿವೈನ್ ನ್ಯೂಜಿಲೆಂಡ್‌ನ ದಿಗ್ಗಜ ಕ್ರಿಕೆಟರ್ ಆಗಿದ್ದು, 152 ಏಕದಿನ ಪಂದ್ಯಗಳನ್ನು ಆಡಿದ್ದು 31 ಸರಾಸರಿಯಲ್ಲಿ 3990 ರನ್ ಗಳಿಸಿದ್ದಾರೆ. 107 ವಿಕೆಟ್ ಪಡೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ ಅವರು ಉತ್ತಮ ಪ್ರದರ್ಶನ ನೀಡಿದ್ದು, 3391 ರನ್ ಗಳಿಸಿದ್ದು 117 ವಿಕೆಟ್ ಪಡೆದಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ 18 ಪಂದ್ಯಗಳನ್ನು ಆಡಿರುವ ಸೋಫಿ ಡಿವೈನ್ 23ರ ಸರಾಸರಿಯಲ್ಲಿ 402 ರನ್ ಗಳಿಸಿದ್ದು 9 ವಿಕೆಟ್ ಪಡೆದಿದ್ದಾರೆ. 2024ರ ಐಪಿಎಲ್‌ನಲ್ಲಿ ಆರ್ ಸಿಬಿ ಮೊದಲ ಕಪ್ ಗೆಲ್ಲುವಲ್ಲಿ ಸೋಫಿ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಸೋಫಿ ಡಿವೈನ್ ಅಲಭ್ಯವಾಗಿದ್ದು ಅವರ ಬದಲಾಗಿ ಬೇರೆ ಆಟಗಾರ್ತಿಯನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದ್ದು ಈ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ.

ಫೆಬ್ರವರಿ 14 ರಿಂದ ಮಹಿಳಾ ಪ್ರೀಮಿಯರ್ ಲೀಗ್ 2025ನೇ ಆವೃತ್ತಿ ಆರಂಭವಾಗಲಿದೆ. ಬೆಂಗಳೂರು, ಲಕ್ನೋ, ವಡೋದರಾ ಮತ್ತು ಮುಂಬೈನಲ್ಲಿ ಈ ಬಾರಿ ಪಂದ್ಯಗಳು ನಡೆಯಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+