RCB vs DC IPL 2026: ಆರ್‌ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದ ಡೆಲ್ಲಿ ಕ್ಯಾಲಿಟಲ್ಸ್
RCB Vs DC IPL 2026: ಬೆಂಗಳೂರು ಎಂ.ಚಿನ್ನಸ್ವಾಮಿಯಲ್ಲಿ ಶನಿವಾರ (ಏಪ್ರಿಲ್ 18) ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 175 ರನ್ ಗಳಿಸಲಷ್ಟೇ ಶಕ್ತವಾಗಿದೆ. ಹಾಗಾದ್ರೆ ಯಾರು ಎಷ್ಟು ರನ್‌ಗಳನ್ನ ಕಲೆಹಾಕಿದರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ ಕೇವಲ 175 ರನ್ ಗಳಿಸಿ, 176 ರನ್‌ಗಳ ಗುರಿ ನೀಡಿತು.

ಸ್ಫೋಟಕ ಬ್ಯಾಟಿಂಗ್ ಮಾಡಿದ ಫಿಲ್ ಸಾಲ್ಟ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ಇಂಗ್ಲೆಂಡ್‌ನ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಅವರು ಕೇವಲ 38 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸ್‌ರ್‌ನೊಂದಿಗೆ 63 ರನ್ ಸಿಡಿಸುವ ಮೂಲಕ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಸಾಲ್ಟ್ ಉತ್ತಮ ಆರಂಭ ನೀಡಿದರೂ, ಆರ್‌ಸಿಬಿಯ ಇತರ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಇದು ತಂಡದ ರನ್ ವೇಗಕ್ಕೆ ಬ್ರೇಕ್ ಹಾಕಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ಲುಂಗಿ ಎನ್ಗಿಡಿ ತಲಾ 2 ವಿಕೆಟ್ ಪಡೆಯುವ ಮೂಲಕ ಆರ್‌ಸಿಬಿ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.
ಫಿಲ್ ಸಾಲ್ಟ್ ಕೇವಲ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಸಹಿತ 63 ರನ್ ಸಿಡಿಸಿದರು. ಇವರು ಔಟಾಗುವವರೆಗೂ ಆರ್‌ಸಿಬಿ 200 ರನ್ ದಾಟುವ ಭರವಸೆಯಲ್ಲಿತ್ತು. ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲದ ಕೊಹ್ಲಿ, 13 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಒಂದು ಹಂತದಲ್ಲಿ 9 ಓವರ್‌ಗಳಲ್ಲಿ 90 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಬೆಂಗಳೂರು ತಂಡಕ್ಕೆ ಡೆಲ್ಲಿ ಬೌಲರ್‌ಗಳು ಕಡಿವಾಣ ಹಾಕಿದರು. ಪಡಿಕ್ಕಲ್ 13 ಎಸೆತಗಳಲ್ಲಿ 18 ರನ್ ಗಳಿಸಿ ಭರವಸೆ ಮೂಡಿಸಿದರೂ ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾದರು.
ರಜತ್ ಪಾಟಿದಾರ್ ಕೇವಲ 4 ಎಸೆತಗಳಲ್ಲಿ 8 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ನಡೆದರು. ಕೊನೆಯಲ್ಲಿ ಅಬ್ಬರಿಸುವ ನಿರೀಕ್ಷೆಯಲ್ಲಿದ್ದ ಡೇವಿಡ್ 17 ಎಸೆತಗಳಲ್ಲಿ 26 ರನ್ ಗಳಿಸಿ ಔಟಾದರು. ಬಳಿಕ ರನ್ ಗಳಿಸಲು ಪರದಾಡಿದ ಜಿತೇಶ್ 20 ಎಸೆತಗಳಲ್ಲಿ ಕೇವಲ 14 ರನ್ ಗಳಿಸಲಷ್ಟೇ ಶಕ್ತರಾದರು.
ಡಿಸಿ ಬೌಲರ್‌ಗಳ ಮಾರಕ ದಾಳಿ
ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಸ್ಪಿನ್ ಮೋಡಿ ಮಾಡಿ ಪ್ರಮುಖ ವಿಕೆಟ್‌ಗಳನ್ನು ಪಡೆದರೆ, ಲುಂಗಿ ಎನ್ಗಿಡಿ ಕೂಡ ಎರಡು ವಿಕೆಟ್ ಪಡೆದು ಆರ್‌ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಆರ್‌ಸಿಬಿ ಸ್ಕೋರ್ ಕಾರ್ಡ್
* ಫಿಲ್ ಸಾಲ್ಟ್: 63 (38)
* ಟಿಮ್ ಡೇವಿಡ್: 26 (17)
* ವಿರಾಟ್ ಕೊಹ್ಲಿ: 19 (13)
* ದೇವದತ್ ಪಡಿಕ್ಕಲ್: 18 (13)
ಒಟ್ಟಿನಲ್ಲಿ ಪವರ್‌ಪ್ಲೇ ನಂತರ ಆರ್‌ಸಿಬಿ ತಂಡವು ಸತತವಾಗಿ ವಿಕೆಟ್ ಕಳೆದುಕೊಂಡಿದ್ದು ಮತ್ತು ಡೆಲ್ಲಿಯ ಸ್ಪಿನ್ನರ್‌ಗಳ ವಿರುದ್ಧ ರನ್ ಗಳಿಸಲು ಪರದಾಡಿದ್ದು ತಂಡಕ್ಕೆ ಮುಳುವಾಯಿತು. ಆರಂಭಿಕ 10 ಓವರ್‌ಗಳಲ್ಲಿ 90ಕ್ಕೂ ಹೆಚ್ಚು ರನ್ ಗಳಿಸಿದ್ದ ತಂಡ, ಅಂತಿಮ 10 ಓವರ್‌ಗಳಲ್ಲಿ ಅಷ್ಟೇ ವೇಗವನ್ನು ಕಾಯ್ದುಕೊಳ್ಳಲು ವಿಫಲವಾಯಿತು.












Click it and Unblock the Notifications