RCB: ಆರ್‌ಸಿಬಿ ಮಾರಾಟದ ಬಗ್ಗೆ ಸ್ಫೋಟಕ ಭವಿಷ್ಯ..

RCB: ಆರ್‌ಸಿಬಿಯು ಐಪಿಎಲ್‌ 2025 ಟ್ರೋಫಿ ಗೆದ್ದ ಹಿನ್ನೆಲೆ ಜೂನ್‌ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಚಿನ್ನಸ್ವಾಮಿ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟಿದ್ದರು. ಇನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿ ಮೃತಪಟ್ಟವರ ಕುಟುಂಬಗಳಿಗೆ ವಿಶೇಷ ಸಂದೇಶದ ಮೂಲಕ ತಲಾ 25,00,000 ರೂಪಾಯಿ ಆರ್ಥಿಕ ನೆರವನ್ನು ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಮತ್ತೆ ಆರ್‌ಸಿಬಿ ಮಾರಾಟದ ಸದ್ದು ಕೇಳಿಬಂದಿದೆ.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿ ಎತ್ತಿರಲಿಲ್ಲ. ಆದರೆ, 18ನೇ ಸೀಸನ್‌ನಲ್ಲಿ ಟ್ರೋಫಿ ಗಲ್ಲುವ ಮೂಲಕ ಕೊರಗನ್ನು ನೀಗಿಸಿತು. ಆರ್‌ಸಿಬಿ ಟ್ರೋಫಿ ಗೆದ್ದ ಹಿನ್ನೆಲೆ ಬೆಂಗಳೂರಿನಲ್ಲಿ ಜೂನ್‌ 4ರಂದು ವಿಜಯೋತ್ಸವ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಚಿನ್ನಸ್ವಾಮಿ ಬಳಿ ಕಾಲ್ತುಳಿತ ಸಂಭವಿಸಿ 11 ಮಂದು ಪ್ರಾಣ ಕಳೆದುಕೊಂಡಿದ್ದು, ಇದು ಆರ್‌ಸಿಬಿ ಪಾಲಿಗೆ ಕಪ್ಪುಚುಕ್ಕೆಯಾಗಿ ಉಳಿದುಬಿಟ್ಟಿತು. ಬಳಿಕ ತುಂಬಾ ಬೆಳವಣಿಗೆಗಳಾದ್ವು.

RCB Sale Rumors Lalit Modi Reveals rcb brand value amid Bengaluru tragedy

ದುರಂತದ ಬಳಿಕ ಆರ್‌ಸಿಬಿಯನ್ನು ಮಾರಾಟ ಮಾಡಲಾಗುತ್ತದೆ ಹಾಗೂ ಬ್ಯಾನ್‌ ಕೂಡ ಆಗಲಿದೆ ಎನ್ನುವ ವದಂತಿಗಳು ಹಬ್ಬಿದ್ದವು. ಆದರೆ, ಪ್ರಾಂಚೈಸಿಯು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ಮಾರಾಟ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿತ್ತು. ಈ ನಡುವೆಯೇ ಇದೀಗ ಒಂದು ವೇಳೆ ಆರ್‌ಸಿಬಿ ಮಾರಾಟ ಆದ್ರೆ, ಏನೆಲ್ಲಾ ಆಗಲಿದೆ ಎಂದು ಐಪಿಎಲ್‌ ಮಾಜಿ ಆಯುಕ್ತ ಲಲಿತ್ ಮೋದಿ ಅವರು ಹೇಳಿದ್ದಾರೆ.

ಆರ್‌ಸಿಬಿ ಇಲ್ಲದಿದ್ರೆ ಐಪಿಎಲ್‌ ಬ್ಯಾನ್‌ ಆಗುವ ಸಾಧ್ಯತೆಯಿದೆ. ಅಷ್ಟರ ಮಟ್ಟಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಅಭಿಮಾನಿಗಳನ್ನು ಗಳಿಸುವುದಷ್ಟೇ ಅಲ್ಲದೆ, ತನ್ನ ಬ್ರ್ಯಾಂಡ್‌ ವ್ಯಾಲ್ಯೂ ಅನ್ನೂ ಸಹ ಹೆಚ್ಚಿಸಿಕೊಂಡಿದೆ. ಇದರಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಹಿಂದಿಕ್ಕುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದೆ. ಇನ್ನು ಇದೀಗ ಲಲಿತ್ ಮೋದಿ ಅವರು ಆರ್‌ಸಿಬಿ ಮಾರಾಟದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.

ಐಪಿಎಲ್ ಮಾಜಿ ಆಯುಕ್ತ ಲಲಿತ್ ಮೋದಿ ಮಾತನಾಡಿ, ಹಾಲಿ ಚಾಂಪಿಯನ್ ಆರ್‌ಸಿಬಿ ಮಾರಾಟದ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಬಿಯಾಂಡ್ 23 ಪಾಡ್‌ಕ್ಯಾಸ್ಟ್‌ನಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅವರೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ಸದ್ಯ ಎರಡು ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ. ಮುಂಬರುವ ವರ್ಷಗಳಲ್ಲಿ ಅದರ ಮೌಲ್ಯ ದುಪ್ಪಾಟ್ಟಾಗಲಿದೆ ಎಂದು ಹೇಳಿದರು.

ಇನ್ನು ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ದುರದೃಷ್ಟಕರ ಘಟನೆ ಎಂದು ಹೇಳಿದರು. ಅಭಿಮಾನಿಗಳನ್ನು ಅನುಸರಿಸಲು ಪ್ರಾರಂಭ ಮಾಡಿದ್ದು, ಇದೀಗ ದೊಡ್ಡ ಮಟ್ಟದ ಬೆಳವಣಿಗೆಯ ಹಾದಿಯತ್ತ ಸಾಗಿದ್ದೇವೆ. ಆದರೆ, ಬೆಂಗಳೂರಿನಲ್ಲಿ ಕಾಲ್ತುಳಿತ ಸಂಭವಿಸಿದ್ದು ದುರದೃಷ್ಟಕರ. ಆದರೆ, ಆರ್‌ಸಿಬಿ ಮುಂದಿನ ದಿನಗಳಲ್ಲಿ ದೇಶ ಅಷ್ಟೇ ಅಲ್ಲದೆ, ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆಯುವುದನ್ನು ನೀವು ಕಾಣುತ್ತೀರಿ ಎಂದು ಭವಿಷ್ಯ ನುಡಿದರು.

ಆರ್‌ಸಿಬಿ ಮಾರಾಟದ ಬಗ್ಗೆ ಹೇಳಿದ್ದೇನು?: ಒಂದು ವೇಳೆ ಆರ್‌ಸಿಬಿಯನ್ನು ಮಾರಾಟ ಮಾಡಲು ಬಯಸಿದರೆ, ಅದನ್ನು 2 ಬಿಲಿಯನ್ ಡಾಲರ್‌ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಮೂರ್ಖತನವಾಗಿದೆ. ಮುಂದಿನ ವರ್ಷ 2.5 ಬಿಲಿಯನ್, ಎರಡು ವರ್ಷಗಳ ಬಳಿಕ 3 ಬಿಲಿಯನ್ ಮತ್ತು ನಾಲ್ಕು ವರ್ಷಗಳ ನಂತರ 4 ಬಿಲಿಯನ್ ಡಾಲರ್ ಆಗಲಿದೆ. ಹೀಗೆ ಆರ್‌ಸಿಬಿ ಮೌಲ್ಯ ಹೆಚ್ಚುತ್ತಲ್ಲೇ ಹೋಗುತ್ತದೆ. ಅಷ್ಟರ ಮಟ್ಟಿಗೆ ಬೆಳೆಯುತ್ತಾ ಹೋಗುತ್ತದೆ. ಬೇಕಿದ್ದರೆ, ನಾನು ಅದನ್ನು ಬರೆದುಕೊಡುತ್ತೇನೆ. ಇದು ವರ್ಷಕ್ಕೆ ಅರ್ಧ ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗುತ್ತದೆ ಅಂತಾ ಹೇಳಿದರು ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+