RCB VS CSK: ಕಾಂತಾರ ರಿಷಬ್ ಶೆಟ್ಟಿ & ಕ್ರಿಸ್ ಗೇಲ್‌ಗೆ ಸಿರಾಜ್ ಸಲ್ಯೂಟ್!

ಕಾಂತಾರ ಸಿನಿಮಾ ಮೂಲಕ ಹವಾ ಎಬ್ಬಿಸಿರುವ ರಿಷಬ್ ಶೆಟ್ಟಿ ನಿನ್ನೆ ನಮ್ಮ ಬೆಂಗಳೂರು ಕ್ರೀಡಾಂಗಣ ಚಿನ್ನಸ್ವಾಮಿ ಪಿಚ್‌ನಲ್ಲಿ ಕೂಡ ಸೌಂಡ್ ಮಾಡಿದ್ರು. ಕ್ರಿಸ್ ಗೇಲ್ ಜೊತೆಯಲ್ಲಿ ಕೂತು ಆರ್‌ಸಿಬಿ VS ಸಿಎಸ್‌ಕೆ ಮ್ಯಾಚ್ ನೋಡಿದ ರಿಷಬ್ ಶೆಟ್ಟಿ ಅವರು, ಕೊನೆಗೆ ಸಿರಾಜ್ ಕಡೆಯಿಂದ ಒಂದು ಸಲ್ಯೂಟ್ ಕೂಡ ಪಡೆದರು! ಅದು ಹೇಗೆ ಗೊತ್ತಾ? ವಿಡಿಯೋ ನೋಡಲು ಮುಂದೆ ಓದಿ.

ಆರ್‌ಸಿಬಿ ಬೆಂಗಳೂರು ತಂಡ ಭರ್ಜರಿಯಾಗಿ ಪ್ಲೇಆಫ್ ತಲುಪಿದ್ದು, ಈ ಮೂಲಕ ಐಪಿಎಲ್ ಕಪ್ ಗೆಲ್ಲಲು ಹತ್ತಿರವಾಗಿದೆ. ನಿನ್ನೆ ಚೆನ್ನೈ ವಿರುದ್ಧ ನಡೆದ ಮ್ಯಾಚ್‌ನಲ್ಲಿ ಆರ್‌ಸಿಬಿ ಭರ್ಜರಿ ಸೌಂಡ್ ಮಾಡಿದೆ. ಆರ್‌ಸಿಬಿ ನೀಡಿದ್ದ 219 ರನ್‌ಗಳ ಗುರಿ ಬೆನ್ನುಹತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಟೀಂ ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡು ಪರದಾಡ್ತು. CSK ತಂಡದ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಸೊನ್ನೆ ಸುತ್ತಿ ಡಕ್ ಔಟ್ ಆದರು. ನಂತರ ಬಂದ ಡೇರಿಲ್ ಮಿಚೆಲ್ ಕೂಡ ಜಾಸ್ತಿ ಹೊತ್ತು ನಿಲ್ಲಲೇ ಇಲ್ಲ.

RCB Player Mohammed Siraj Salutes Rishabh Shetty amp amp Chris Gayle

ಹೀಗೆ ನೋಡ ನೋಡುತ್ತಲೇ ಚೆನ್ನೈ ತಂಡ ಕುಸಿಯುತ್ತಾ ಹೋಗಿ, ಕೊನೆಗೆ 191 ರನ್‌ಗೆ ತನ್ನ ಆಟ ಮುಗಿಸಿತು. ಇದೇ ಸಮಯದಲ್ಲಿ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಅವರು ಸಖತ್ ಗಮನ ಸೆಳೆದರು. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಇದೀಗ ರಿಷಬ್ ಶೆಟ್ಟಿ ಫೋಟೋ ವೈರಲ್ ಆಗುತ್ತಿದೆ. ಅಷ್ಟಕ್ಕೂ ಮ್ಯಾಚ್ ಮುಗಿದ ನಂತರ ಆಗಿದ್ದೇನು? ಮುಂದೆ ಓದಿ.

ಕ್ರಿಸ್ ಜೊತೆ ರಿಷಬ್ ಪಂದ್ಯ ವೀಕ್ಷಣೆ!

ಗ್ಯಾಲರಿಯಲ್ಲಿ ಕೂತು ಮ್ಯಾಚ್ ನೋಡಿದ ರಿಷಬ್ ಶೆಟ್ಟಿ & ಕ್ರಿಸ್ ಗೇಲ್ ಸಖತ್ ಎಂಜಾಯ್ ಮಾಡಿದ್ರು. ಹೀಗಿದ್ದಾಗ, ಮೊಹಮ್ಮದ್ ಸಿರಾಜ್ ಮ್ಯಾಚ್ ಮುಗಿದ ನಂತರ ಬಂದು ಒಂದು ಸಲ್ಯೂಟ್ ಹಾಕಿದ್ರು. ಕ್ರಿಸ್ ಗೇಲ್ ಹಾಗೂ ರಿಷಬ್ ಶೆಟ್ಟಿ ಅವರನ್ನ ಮಾತನಾಡಿಸಿದರು. ಈ ವಿಡಿಯೋ ಈಗ ಫುಲ್ ವೈರಲ್ ಆಗುತ್ತಿದೆ. ಇದರ ಜೊತೆಗೆ ರಿಷಬ್ ಶೆಟ್ಟಿ ಕೂಡ ಕೈಯಲ್ಲಿ ಆರ್‌ಸಿಬಿ ಬಾವುಟ ಹಿಡಿದು ಕ್ರಿಸ್ ಗೇಲ್ ಅವರ ಜೊತೆಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ಈ ಮೂಲಕ ಕಾಂತಾರ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ಹಲ್‌ಚಲ್ ಎಬ್ಬಿಸಿದ್ದಾರೆ.

ವಿಜಯ್ ಮಲ್ಯ ಸ್ಪೆಷಲ್ ಸಂದೇಶ!

ಆರ್‌ಸಿಬಿ ತಂಡಕ್ಕೆ ಶುಭಾಶಯ ಹೇಳಿರುವ ವಿಜಯ್ ಮಲ್ಯ, 'ಅಗ್ರ ನಾಲ್ಕರಲ್ಲಿ ಅರ್ಹತೆಯ ಗಿಟ್ಟಿಸಿ, ಐಪಿಎಲ್ ಪ್ಲೇಆಫ್ ತಲುಪಿದ್ದಕ್ಕೆ ಆರ್‌ಸಿಬಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನಿರಾಶಾದಾಯಕ ಆರಂಭದ ನಂತರ ಕೂಡ ಉತ್ತಮ ನಿರ್ಣಯ ಮತ್ತು ಕೌಶಲ್ಯವು ಈ ಗೆಲುವಿನ ಅದ್ಭುತ ಸನ್ನಿವೇಶ ಸೃಷ್ಟಿಸಿದೆ. ಟ್ರೋಫಿ ಗೆಲ್ಲಲು ಮುನ್ನುಗ್ಗಿ, ಮತ್ತಷ್ಟು ಮೇಲಕ್ಕೆ ಮುನ್ನುಗ್ಗಿ.' ಎಂದು ಆರ್‌ಸಿಬಿ ತಂಡದ ಆಟಗಾರರಿಗೆ ಮದ್ಯದ ದೊರೆ ಎನ್ನಿಸಿಕೊಂಡಿದ್ದ, RCB ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ವಿಶ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+