Rcb: ವಿರಾಟ್‌ ಕೊಹ್ಲಿ & ಕನ್ನಡದ ಬಗ್ಗೆ ಕನ್ನಡಿಗ ಕೆ.ಎಲ್‌ ರಾಹುಲ್‌ ಅಚ್ಚರಿಯ ಹೇಳಿಕೆ!

ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಈ ಬಾರಿಯ ಐಪಿಎಲ್ ಸೀಸನ್‌ಗೆ ಭರ್ಜರಿಯಾಗಿ ಸಿದ್ಧವಾಗ್ತಿದೆ. 2025ನೇ ಸಾಲಿನ ಐಪಿಎಲ್‌ನಲ್ಲಿ ಕಪ್‌ಗೆಲ್ಲಲೇಬೇಕು ಎಂದು ಮ್ಯಾನೇಜ್ಮೆಂಟ್‌ ಸಹ ಪಣ ತೊಟ್ಟಂತೆ ಇದೆ. ಈ ಬಾರಿ ಆರ್‌ಸಿಬಿ ತಂಡದ ಆಟಗಾರರ ಆಯ್ಕೆಯಲ್ಲೂ ಮ್ಯಾನೇಜ್ಮೆಂಟ್‌ ಜಾಣ್ಮೆ ತೋರಿಸುತ್ತಿದೆ. ಈ ನಡುವೆ ಕನ್ನಡಿಗ ಕೆ.ಎಲ್‌ ರಾಹುಲ್‌ ಅವರು ಆರ್‌ಸಿಬಿ ತಂಡವನ್ನು ಸೇರಿಕೊಳ್ಳುವ ಬಗ್ಗೆ ಹಾಗೂ ಆರ್‌ಸಿಬಿಯ ಮಾಜಿ ನಾಯಕ ಹಾಗೂ ಆಟಗಾರ ವಿರಾಟ್‌ ಕೊಹ್ಲಿಯ ಬಗ್ಗೆ ಅಚ್ಚರಿಯ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.

ಆರ್‌ಸಿಬಿ ಕಪ್‌ ತಂದಿಲ್ಲ (ಪುರುಷರ ತಂಡ) ಎಂದಾದರೂ ಆ ತಂಡದ ಮೇಲಿನ ಅಭಿಮಾನ ಕನ್ನಡಿಗರಲ್ಲಿ ಎಳ್ಳಷ್ಟೂ ಕಡಿಮೆಯಾಗಿಲ್ಲ. ಅದಕ್ಕೆ ಕಾರಣ ಆರ್‌ಸಿಬಿ ತಂಡದ ಆಟಗಾರರು ಕನ್ನಡಿಗರೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧ. ಅಷ್ಟೇ ಅಲ್ಲ ಆರ್‌ಸಿಬಿ ತಂಡದಲ್ಲಿ ಒಂದೇ ಒಂದು ಸಲವಾದರೂ ಆಟವಾಡಬೇಕು ಎಂದು ಹಲವು ಐಪಿಎಲ್‌ ಆಟಗಾರರು ಹೇಳಿರುವುದು ಇದೆ.

Rcb Kannadigas KL Rahul s surprising statement about Virat Kohli amp amp Kannada

ಇದಕ್ಕೆ ಕಾರಣ ಆರ್‌ಸಿಬಿ ತಂಡಕ್ಕೆ ಇರುವ ಕ್ರೇಜ್‌ ಅಂತಹದ್ದು. ಆರ್‌ಸಿಬಿ ಹಾಗೂ ಯಾವುದೇ ತಂಡದ ಮ್ಯಾಚ್‌ ನಡೆದರೂ ಅಲ್ಲಿ ಕೇಳಿಸುವುದು ಬರೀ ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ ಎನ್ನುವ ಘೋಷಾವಾಕ್ಯ ಮಾತ್ರ ಎಂದು ಹಲವು ಹಿರಿಯ ಕ್ರಿಕೆಟಿಗರು ಹೇಳಿರುವುದು ಇದೆ.

ಈಗ ವಿಷಯ ಇರುವುದು ವಿರಾಟ್‌ ಕೊಹ್ಲಿಯ ಬಗ್ಗೆ. ವಿರಾಟ್‌ ಕೊಹ್ಲಿ ಕರ್ನಾಟಕದ ದತ್ತು ಪುತ್ರ ಅಂತಲೇ ಫೇಮಸ್‌. ಐಪಿಎಲ್ ಪ್ರಾರಂಭದಿಂದಲೂ ಅವರು ಆರ್‌ಸಿಬಿ ಹೊರತುಪಡಿಸಿ ಇನ್ನೊಂದು ತಂಡದಲ್ಲಿ ಆಟವಾಡಿಲ್ಲ. ಆ ರೀತಿ ಲಾಯಲ್‌ (ಬದ್ಧತೆ) ಉಳಿಸಿಕೊಂಡು ಬಂದಿದ್ದಾರೆ. ಕನ್ನಡಿಗರ ಮೇಲೆ ಅವರಿಗೆ ಇರುವ ಗೌರವ ಹಾಗೂ ಪ್ರೀತಿ ಹಲವು ಬಾರಿ ಸಾಬೀತಾಗಿದೆ.

ಕಳೆದ ಬಾರಿ ನಡೆದ ಐಪಿಎಲ್‌ ಸೀಸನ್‌ನಲ್ಲಿ ಅವರು ಇದು ಆರ್‌ಸಿಬಿಯ ಹೊಸ ಅಧ್ಯಯ ಎಂದು ಹೇಳಿದ್ದು ಸಾಕಷ್ಟು ವೈರಲ್‌ ಆಗಿತ್ತು. ಏನ್‌ ಸಮಾಚಾರಾ ಎನ್ನುವುದು ಸೇರಿದಂತೆ ಕನ್ನಡ ಹಲವು ಡೈಲಾಗ್‌ಗಳನ್ನು ಅವರು ಹೇಳಿ ಕನ್ನಡಿಗರನ್ನು ರಂಜಿಸಿದ್ದೂ ಇದೆ.

ವಿರಾಟ್‌ಗೆ ಕನ್ನಡ ಅರ್ಥ ಆಗುತ್ತೆ..

ಇದೀಗ ವಿರಾಟ್‌ ಕೊಹ್ಲಿಗೆ ಕನ್ನಡ ಭಾಷೆ ಹಾಗೂ ಕನ್ನಡಿಗರೊಂದಿಗೆ ಇರುವ ಮತ್ತೊಂದು ನಂಟು ಹಾಗೂ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಕೆ.ಎಲ್‌ ರಾಹುಲ್‌ ಅವರು ಮಾತನಾಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್‌ ಸಂದರ್ಶನದಲ್ಲಿ ಕೆ.ಎಲ್‌ ರಾಹುಲ್‌ ಅವರು ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಈ ಹಿಂದೆ ಆರ್‌ಸಿಬಿಯಲ್ಲಿ ಆಟವಾಡಿದ್ದು, ಬೆಂಗಳೂರು ಹಾಗೂ ಕನ್ನಡದ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಕೆ.ಎಲ್‌ ರಾಹುಲ್‌ ಅಭ್ಯಾಸ ಪದ್ಯದ ಬಗ್ಗೆ ಸಂದರ್ಶಕರು ಕೇಳಿದ್ದಾರೆ. ಆಗ ಮಾತನಾಡುತ್ತಾ ಕೆ.ಎಲ್‌ ರಾಹುಲ್‌ ಅವರು, ವಿರಾಟ್‌ ಕೊಹ್ಲಿಗೆ ಕನ್ನಡ ಚೆನ್ನಾಗಿ ಅರ್ಥವಾಗುತ್ತದೆ ಎಂದಿದ್ದಾರೆ. ವಿರಾಟ್‌ ಕೊಹ್ಲಿಗೆ ಇಲ್ಲಿನ ಜನರ ಭಾವನೆ ಹಾಗೂ ಭಾಷೆ ಎರಡೂ ಚೆನ್ನಾಗಿ ಅರ್ಥವಾಗುತ್ತೆ. (Virat Kohli understands Kannada very well) ಮಾಡಿಕೊಂಡಿದ್ದಾರೆ ಅವರಿಗೆ ಕನ್ನಡ ಚೆನ್ನಾಗಿ ಅರ್ಥವಾಗುತ್ತದೆ ಎಂದು ಕೆ.ಎಲ್‌ ರಾಹುಲ್‌ ಹೇಳಿದ್ದಾರೆ.

ಅಲ್ಲದೇ ಆರ್‌ಸಿಬಿಗೆ ಮರಳುವ ಬಗ್ಗೆಯೂ ಅವರು ಮನಬಿಚ್ಚಿ ಮಾತನಾಡಿದ್ದಾರೆ. ನಾನು ಆರ್‌ಸಿಬಿಗೆ ಮರಳಲು ಇಷ್ಟಪಡುತ್ತೇನೆ. ಆದರೆ, ಐಪಿಎಲ್ ಹರಾಜು ಪ್ರಕ್ರಿಯೆ ಭಿನ್ನವಾಗಿದೆ ಎಂದಿದ್ದಾರೆ. ನಾನು ಆರ್‌ಸಿಬಿಯಲ್ಲಿ ಆಡುವುದನ್ನು ಎಂಜಾಯ್‌ ಮಾಡಿದ್ದೇನೆ. ಇದು ನಮ್ಮ ಮನೆ. ನೀವು ಮನೆಯಲ್ಲಿ (ಬೆಂಗಳೂರು, ಕರ್ನಾಟಕ) ಕಳೆಯುವ ಸಮಯ ಸಂತೋಷವನ್ನು ಉಂಟು ಮಾಡುತ್ತೆ.

ನನಗೆ ಚಿನ್ನಸ್ವಾಮಿ ಸ್ಟೇಡಿಯಂ ಚೆನ್ನಾಗಿ ಗೊತ್ತು. ನಾನು ಇಲ್ಲೇ ಆಡುತ್ತಾ ಬೆಳೆದಿದ್ದೇನೆ. ಹೌದು, ನಾನು RCB ನಲ್ಲಿ ಆಡುವುದನ್ನು ನಿಜವಾಗಿಯೂ ಆನಂದಿಸಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+