Jacob Bethell: ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಬಾರಿಸಿದ ಆರ್‌ಸಿಬಿ ಸ್ಫೋಟಕ ಬ್ಯಾಟರ್

ಆರ್ ಸಿಬಿ ಸ್ಪೋಟಕ ಬ್ಯಾಟರ್, ಇಂಗ್ಲೆಂಡ್‌ನ ಜೇಕಬ್ ಬೆಥೆಲ್‌ ಟೆಸ್ಟ್ ಕ್ರಿಕೆಟ್ ನಲ್ಲಿ ಅಬ್ಬರಿಸುವ ಮೂಲಕ ಗಮನ ಸೆಳೆದಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವೇಗದ ಅರ್ಧಶತಕ ಗಳಿಸಿದ ಜೇಕಬ್ ಬೆಥೆಲ್ ಇಂಗ್ಲೆಂಡ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 8 ವಿಕೆಟ್‌ಗಳ ಗೆಲುವು ಸಾಧಿಸಿದ್ದು 1-0 ಅಂತರದಲ್ಲಿ ಸರಣಿ ಮುನ್ನಡೆ ಪಡೆದುಕೊಂಡಿದೆ.

ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಿದ ಜೇಕಬ್ ಬೆಥೆಲ್ ದಾಖಲೆ ಬರೆದರು. ಮೊದಲ ಇನ್ನಿಂಗ್ಸ್‌ನಲ್ಲಿ 10 ರನ್ ಗಳಿಸಿದ್ದ ಅವರು, ಎರಡನೇ ಇನ್ನಿಂಗ್ಸ್‌ನಲ್ಲಿ 37 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 50 ರನ್ ಗಳಿಸಿದರು. ಇದು ಪದಾರ್ಪಣ ಪಂದ್ಯದಲ್ಲಿ ಬ್ಯಾಟರ್ ಗಳಿಸಿದ ವೇಗದ ಅರ್ಧಶತಕವಾಗಿದೆ. ಟಿಮ್ ಸೌಥಿ ಈ ಮೊದಲು ಈ ಸಾಧನೆ ಮಾಡಿದ ಆಟಗಾರನಾಗಿದ್ದಾರೆ.

rcb Jaocb bethell fastest fifty in test help engand win

21 ವರ್ಷದ ಜೇಕಬ್ ಬೆಥೆಲ್‌ ಈಗಾಗಲೇ ವಿಶ್ವ ಕ್ರಿಕೆಟ್‌ನಲ್ಲಿ ದಿಗ್ಗಜರ ಗಮನ ಸೆಳೆಯುತ್ತಿದ್ದಾರೆ. ಬ್ರಿಯಾನ್ ಲಾರಾ ಕೂಡ ಬೆಥೆಲ್‌ರ ಬ್ಯಾಟಿಂಗ್‌ ಮೆಚ್ಚಿಕೊಂಡಿದ್ದು, ಆತನ ಆಟ ನೋಡುವುದು ನನಗಿಷ್ಟ ಎಂದಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಕೂಡ ಜೇಕಬ್ ಬೆಥೆಲ್ ಪ್ರತಿಭಾವಂತ ಆಟಗಾರ ಎಂದು ಹೇಳಿದ್ದಾರೆ.

ಐಪಿಎಲ್‌ನಲ್ಲಿ ನೋಡಲು ಕಾತರ

ಐಪಿಎಲ್ ಮೆಗಾ ಹರಾಜಿನಲ್ಲಿ ಗಮನ ಸೆಳೆದ ವಿದೇಶಿ ಯುವ ಆಟಗಾರರಲ್ಲಿ ಜೇಕಬ್ ಬೆಥೆಲ್ ಕೂಡ ಒಬ್ಬರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಲ್‌ ಜ್ಯಾಕ್ಸ್‌ರನ್ನು ಖರೀದಿ ಮಾಡದೆ ಈ ಯುವ ಆಟಗಾರನನ್ನು ಖರೀದಿ ಮಾಡಲು ಹೆಚ್ಚಿನ ಆಸಕ್ತಿ ತೋರಿಸಿತ್ತು. ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್‌ ಕಿಂಗ್ಸ್ ಕೂಡ ಜೇಕಬ್ ಬೆಥೆಲ್‌ರನ್ನು ಖರೀದಿ ಮಾಡಲು ಆಸಕ್ತಿ ತೋರಿಸಿದವು. ಆದರೆ ಬರೋಬ್ಬರಿ 2.60 ಕೋಟಿ ರೂಪಾಯಿ ನೀಡಿ ಆರ್ ಸಿಬಿ ಅವರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ.

ಈಗಾಗಲೇ ಜೇಕಬ್ ಬೆಥೆಲ್‌ರನ್ನು ನೋಡಲು ಆರ್ ಸಿಬಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಎಡಗೈ ಬ್ಯಾಟರ್ ಆಗಿರುವ ಬೆಥೆಲ್‌ ಬೌಲರ್ ಕೂಡ ಆಗಿದ್ದಾರೆ. ಆರ್ ಸಿಬಿ ಕೋಚ್ ಆಂಡಿ ಫ್ಲವರ್ ಬೆಥೆಲ್‌ರನ್ನು ಆರ್ ಸಿಬಿ ತಂಡದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+