IPL 2024: ಈ ಆಟಗಾರರ ಮೇಲೆ ಆರ್‌ಸಿಬಿ ಭರವಸೆ ಇಡಲೇ ಇಲ್ಲ: ಬೇರೆ ತಂಡಗಳಿಗೆ ವರವಾದ ಸ್ಟಾರ್ಸ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ ಅತಿ ಹೆಚ್ಚು ಫ್ಯಾನ್ಸ್‌ ಹೊಂದಿರುವ ತಂಡ ಎಂದರೆ ಅದುವೇ ಆರ್‌ಸಿಬಿ. ಈ ತಂಡ 17ನೇ ಆವೃತ್ತಿ ಆಡಲು ಕಣಕ್ಕೆ ಇಳಿದರೂ ಸಹ ಒಮ್ಮೆಯೂ ಪ್ರಶಸ್ತಿ ಗೆಲ್ಲದೆ ನಿರಾಸೆಯನ್ನು ಅನುಭವಿಸಿದೆ. ಆರ್‌ಸಿಬಿ ತಂಡದಲ್ಲಿ ವಿಶ್ವದ ಶ್ರೇಷ್ಠ ಆಟಗಾರರು ಇದ್ದರೂ ಸಹ ಒಮ್ಮೆಯೂ ಕಪ್‌ ಗೆಲ್ಲದೇ ಇರುವುದು ನಿಜಕ್ಕೂ ಬೇಸರದ ಸಂಗತಿ.

ಸ್ಟಾರ್‌ಗಳನ್ನೇ ತನ್ನ ಒಡಲಿನಲ್ಲಿ ಹಾಕಿಕೊಂಡು ಪೋಷಿಸಿದ್ದ ತಂಡದ ಮುಕುಟಕ್ಕೆ ಒಂದೇ ಒಂದು ಟ್ರೋಫಿಯ ಗರಿ ಇಲ್ಲದಿರುವುದು ತಂಡದ ಪ್ರದರ್ಶನಕ್ಕೆ ಹಿಡಿದ ಕೈಗನ್ನಡಿ. ಬೆಂಗಳೂರು ತಂಡವನ್ನು ಆಯಾ ಕಾಲದ ಸೂಪರ್ ಸ್ಟಾರ್‌ ಆಟಗಾರರು ಪ್ರತಿನಿಧಿಸಿದ್ದರು. ಬ್ರೆಂಡನ್‌ ಮೆಕಲಮ್ ನಿಂದ ಹಿಡಿದು ಯುನಿವರ್ಸಲ್ ಬಾಸ್‌ ಕ್ರಿಸ್‌ ಗೇಲ್‌ ವರೆಗೂ ಆರ್‌ಸಿಬಿ ಪರ ಕಣಕ್ಕೆ ಇಳಿದರೂ ಸಹ ಕಪ್‌ ಗೆಲ್ಲದೇ ಇರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ ಅಂಬಟಿ ರಾಯುಡು ಹೇಳಿದ್ದ ಹೇಳಿಕೆ ನಿಜ ಎಂದಾಗುತ್ತದೆ. ಅದಕ್ಕೆ ಉದಾಹರಣೆ ಇಲ್ಲಿದೆ.

ಆರಂಭದಲ್ಲಿ ಆರ್‌ಸಿಬಿ ಹಲವು ಯುವ ಪ್ರತಿಭೆಗಳನ್ನು ತಂಡಕ್ಕೆ ಸೇರಿಸಕೊಂಡಿತು. ಅಲ್ಲದೆ ಅವರಿಗೆ ಅವಕಾಶಗಳನ್ನು ನೀಡಿತು. ಆಟಗಾರರನ್ನು ಜನರು ಗುರಿತಿಸುವ ಮಟ್ಟಿಗೆ ಬೇಳೆದ ಮೇಲೆ ಅವರನ್ನು ತಂಡದಲ್ಲಿ ಇಟ್ಟುಕೊಳ್ಳದೇ ಕೈ ಬಿಟ್ಟಿತು. ಆರ್‌ಸಿಬಿ ಪರ ಆಡಿ ಬೇರೆ ತಂಡಗಳ ಮಿಂಚಿದ ಐವರು ಆಟಗಾರರ ಪಟ್ಟಿ ಇಲ್ಲಿದೆ.

RCB has never trusted on these players stars who are a Shining in other teams

ಯುಜುವೇಂದ್ರ ಚಹಾಲ್

ಈ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರು ಸ್ಪಿನ್ ಬೌಲರ್‌ ಯುಜುವೇಂದ್ರ ಚಹಾಲ್‌. 8 ವರ್ಷಗಳ ಕಾಲ RCB ಪರ ಆಡಿದ ಚಹಾಲ್‌ರನ್ನು ಆರ್‌ಸಿಬಿ 2021 ರಲ್ಲಿ ಬಿಡುಗಡೆ ಮಾಡಿತು. ಇದರಿಂದ ಚಹಾಲ್‌ಗೂ ಆಘಾತ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವಾಗ 139 ವಿಕೆಟ್‌ಗಳನ್ನು ಪಡೆದಿದ್ದರು. ತಂಡದಿಂದ ಕೈಬಿಟ್ಟ ನಂತರ, ರಾಜಸ್ಥಾನ್ ರಾಯಲ್ಸ್‌ನಲ್ಲಿ ಅವರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿತು. ಅಲ್ಲದೆ 2022 ರಲ್ಲಿ ರಾಯಲ್ಸ್‌ ಪರಗಿ ಆಡುವಾಗ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದರು. ಅವರು ಇಡೀ ಋತುವಿನಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದರು. 2023ರಲ್ಲೂ ಇವರು 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

RCB has never trusted on these players stars who are a Shining in other teams

ಕೆಎಲ್ ರಾಹುಲ್

ಕರ್ನಾಟಕದ ಸ್ಟಾರ್ ಬ್ಯಾಟರ್‌ ಅವರ ಪ್ರತಿಭೆಯನ್ನು ಗುರುತಿಸುವಲ್ಲಿ ಆರ್‌ಸಿಬಿ ಪಾತ್ರ ಬಹಳ ಮುಖ್ಯ. ಆದರೆ ಪೋಷಿಸುವಲ್ಲಿ ಎಡವಿದೆ. ಕೆಎಲ್ ರಾಹುಲ್ 2013 ರಲ್ಲಿ ಮೊದಲ ಬಾರಿಗೆ RCB ಪರ ಆಡಿದ್ದರು. ನಂತರ SRH ಗಾಗಿ 2 ಋತುಗಳಲ್ಲಿ ಆಡಿದ ನಂತರ, ಅವರು ಮತ್ತೊಮ್ಮೆ 2016 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳಿದರು. 2016 ರಲ್ಲಿ ರಾಹುಲ್ RCB ಪರ 14 ಪಂದ್ಯಗಳಲ್ಲಿ 397 ರನ್ ಗಳಿಸಿದರು. ಇಲ್ಲಿಂದ ರಾಹುಲ್‌ ಆಟದ ಗುಣಮಟ್ಟ ಏರುತ್ತಲೇ ಸಾಗಿತು. ರಾಹುಲ್ ಪಂಜಾಬ್ ಕಿಂಗ್ಸ್‌ ಪರ ನಾಲ್ಕು ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಪಂಜಾಬ್ ಪರ 55 ಪಂದ್ಯಗಳನ್ನು ಆಡಿದ್ದು, 2,548 ರನ್ ಗಳಿಸಿದ್ದಾರೆ. 2022 ರಲ್ಲಿ, ಲಕ್ನೋ ಸೂಪರ್ ಜೈಂಟ್ಸ್‌ನ ನಾಯಕತ್ವವನ್ನು ಪಡೆದರು. ಇವರನ್ನು ಇಟ್ಟುಕೊಳ್ಳುವಲ್ಲಿ ಆರ್‌ಸಿಬಿ ಎಡವಿದೆ.

ಶೇನ್ ವ್ಯಾಟ್ಸನ್

ವಿಶ್ವದ ಸ್ಟಾರ್ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಶೇನ್ ವ್ಯಾಟ್ಸನ್‌ ಸಹ ಆರ್‌ಸಿಬಿ ಪರ ಆಡಿದ್ದಾರೆ. ಇವರು ಆರ್‌ಸಿಬಿ ಪರ ಎರಡು ಋತುವಿನಲ್ಲಿ 250 ರನ್ ಗಳಿಸಲು ಸಾಧ್ಯವಾಯಿತು. ವ್ಯಾಟ್ಸನ್ 2018 ರಿಂದ 2020 ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. RCB ತೊರೆದ ಅವರ ಲಕ್‌ ಬದಲಾಯಿತು. CSK ಪರ ವ್ಯಾಟ್ಸ್‌ನ್‌ 15 ಪಂದ್ಯಗಳಲ್ಲಿ 555 ರನ್ ಗಳಿಸಿದ್ದರು. ಇವರ ಆಟದ ಸಹಾಯದಿಂದ ಸಿಎಸ್‌ಕೆ ಚಾಂಪಿಯನ್‌ ಪಟ್ಟ ಅಲಂಕರಿಸಲು ಸಾಧ್ಯವಾಯಿತು. ಇವರು ಚೆನ್ನೈ ಪರ ಮೂರು ಆವೃತ್ತಿಗಳನ್ನು ಆಡಿದ್ದು, 30ಕ್ಕೂ ಹೆಚ್ಚಿನ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ.

RCB has never trusted on these players stars who are a Shining in other teams

ಮೊಯಿನ್ ಅಲಿ

ಮೊಯಿನ್ ಅಲಿ 2018-2020ರ ಅವಧಿಯಲ್ಲಿ ಆರ್‌ಸಿಬಿ ಪರ ಇವರಿಗೆ ಕೇವಲ 19 ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿತು. 3 ಸೀಸನ್‌ಗಳ ಈ ಪಯಣದಲ್ಲಿ ಬೌಲಿಂಗ್‌ನಲ್ಲೂ ಇವರು ವಿಶೇಷ ಸಾಧನೆ ತೋರಿಸಲಿಲ್ಲ. 2021ರಲ್ಲಿ ಚೆನ್ನೈ ತಂಡ ಸೇರುತ್ತಿದ್ದಂತೆ ಅಲಿ ಅದೃಷ್ಟ ಖುಲಾಯಿಸಿತು. ಇವರಿಗೆ ಬ್ಯಾಟಿಂಗ್‌ನಲ್ಲಿ ಬಡ್ತಿ ನೀಡಿ ಅವಕಾಶ ನೀಡಿತು. ಸಿಎಸ್‌ಕೆಗೆ ಪರ ಅಲಿ 40 ಪಂದ್ಯಗಳಲ್ಲಿ 725 ರನ್ ಗಳಿಸಿದ್ದಾರೆ ಮತ್ತು 23 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಶಿವಂ ದುಬೆ

ಶಿವಂ ದುಬೆ 2019 ರಲ್ಲಿ RCB ಗೆ ಸೇರುವ ಮೂಲಕ ತಮ್ಮ IPL ವೃತ್ತಿಜೀವನವನ್ನು ಪ್ರಾರಂಭಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾಗ ಅವರು 2 ಋತುಗಳಲ್ಲಿ ಕೇವಲ 169 ರನ್ ಮತ್ತು ಕೇವಲ 4 ವಿಕೆಟ್‌ಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. 2021 ರಲ್ಲಿ, ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟಿಂಗ್‌ನಲ್ಲಿ ದುಬೆ ಉತ್ತಮ ಪ್ರದರ್ಶನ ನೀಡಿದರು, ಆದರೆ CSK ಗೆ ಬಂದ ನಂತರ, ದುಬೆ ವಿಶ್ವ ದರ್ಜೆಯ ಆಲ್‌ರೌಂಡರ್ ಆಗಿ ಗುರುತಿಸಿಕೊಳ್ಳುವಂತೆ ಅಡಿದರು. ಶಿವಂ ದುಬೆ 2023ರ ಆವೃತ್ತಿಯಲ್ಲಿ 38 ರ ಅತ್ಯುತ್ತಮ ಸರಾಸರಿಯಲ್ಲಿ CSK ಪರ 418 ರನ್ ಗಳಿಸಿದ್ದರು. ಪ್ರಸಕ್ತ ಋತುವಿನಲ್ಲೂ ಅವರು 51ಕ್ಕೂ ಹೆಚ್ಚು ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+