RCB Fans: ವಿರಾಟ್‌ ಕೊಹ್ಲಿಗೆ ಬಿಗ್‌ ಸರ್ಪ್ರೈಸ್‌ ಕೊಡಲು ಆರ್‌ಸಿಬಿ ಅಭಿಮಾನಿಗಳು ಸಜ್ಜು

RCB Fans: ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಇತ್ತೀಚೆಗಷ್ಟೇ ವಿದಾಯ ಘೋಷಣೆ ಮಾಡಿದ್ದಾರೆ. ಅದು ವಿದಾಯ ಪಂದ್ಯವಿಲ್ಲದೆ. ನಿವೃತ್ತಿ ಕುರಿತು ಅವರು ಸಾಮಾಜಿಕ ಜಾಲತಾಣ ಭಾಗವಾದ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಅಚ್ಚರಿ ಮೂಡಿಸಿದ್ದರು. ಈ ಹಿನ್ನೆಲೆ ಆರ್‌ಸಿಬಿ ಅಭಿಮಾನಿಗಳು ಮೇ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ ಅವರಿಗೆ ಸರ್ಪ್ರೈಸ್‌ವೊಂದನ್ನು ಕೊಡುವುದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅದೇನು ಎಂದು ಇಲ್ಲಿ ತಿಳಿಯಿರಿ,

ವಿರಾಟ್‌ ಕೊಹ್ಲಿ ಅವರು ವಿದಾಯ ಪಂದ್ಯವಿಲ್ಲದೆ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿ ಅಚ್ಚರಿ ಹುಟ್ಟುಕಾಹಿದ್ದರು. ಆದ್ದರಿಂದ ಮೇ 17ರಂದು ಆರ್‌ಸಿಬಿ ಹಾಗೂ ಕೆಕೆಆರ್‌ ಪಂದ್ಯದ ವೇಳೆ ಕೊಹ್ಲಿ ಅವರಿಗೆ ದೊಡ್ಡ ಗಿಫ್ಟ್‌ವೊಂದನ್ನು ನೀಡಲು ಆರ್‌ಸಿಬಿ ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

RCB Fans Ready to Give Big Surprise to Virat Kohli at M Chinnaswamy Stadium

ಕೊಹ್ಲಿ ಅವರು ಇದೀಗ ಸದ್ಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಟ ಆಡುತ್ತಿದ್ದಾರೆ. ಈ ವೇಳೆಯೇ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಇದರಿಂದ ಬೇಸರಗೊಂಡ ಅಭಿಮಾನಿಗಳು ಇದೀಗ ಮೇ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್‌ ಕೊಹ್ಲಿ ಅವರಿಗೆ ಮರೆಯಲಾಗದ ನೆನಪೊಂದನ್ನು ನೀಡಲು ಮುಂದಾಗಿದ್ದಾರೆ.

ಭಾರತ-ಪಾಕಿಸ್ತಾನದ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆ ಆಟಗಾರರು, ಅಭಿಮಾನಿಗಳು ಹಿತದೃಷ್ಟಿಯಿಂದ ಐಪಿಎಲ್‌ 2025 ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಿ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಮತ್ತೆ ಮೇ 17ರಿಂದ ಐಪಿಎಲ್‌ ಉಳಿದ ಪಂದ್ಯಗಳನ್ನು ಮುಂದುವರೆಸಲಿದ್ದಾರೆ.

ಮೊದಲ ಪಂದ್ಯ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ನಡೆಯಲಿದೆ. ಈ ಪಂದ್ಯ ವೀಕ್ಷಣೆ ಮಾಡಲು ಬರುವ ಎಲ್ಲಾ ಅಭಿಮಾನಿಗಳು ಬಿಳಿ ಬಣ್ಣದ ಟಿ ಶರ್ಟ್ ಧರಿಸಿ ಆಗಮಿಸಬೇಕು ಎಂದು ಇದೀಗ ಆರ್​ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣವಾದಲ್ಲಿ ಸಂದೇಶ ರವಾನಿಸುತ್ತಿದ್ದಾರೆ. ಇದೀಗ ಇದು ಸಖತ್ ಸದ್ದು ಮಾಡುತ್ತಿದೆ. ಹಾಗಾದ್ರೆ ಅಂದು ಪಂದ್ಯ ಸೋತ್ರೂ ಗೆದ್ದರೂ ಆರ್‌ಸಿಬಿ ಅಭಿಮಾನಿಗಳು ಕೊಹ್ಲಿ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಜವಾಬ್ದಾರಿ ಎಂದು ಹೇಳುತ್ತಿದ್ದಾರೆ.

ಈ ವೇಳೆ ಎಲ್ಲಾ ಆರ್‌ಸಿಬಿ ಅಭಿಮಾನಿಗಳು ಅಂದಿನ ದಿನ ಕೆಂಪು ಹಾಗೂ ಕಪ್ಪು ಜೆರ್ಸಿ ಬದಲಿಗೆ ಬಿಳಿ ಬಣ್ಣದ ಜೆರ್ಸಿ ಅಥವಾ ಟಿ ಶರ್ಟ್​ ಧರಿಸಬೇಕು ಎಂದು ಮನವಿ ಮಾಡಿದ್ದಾರೆ. ವಿದಾಯ ಪಂದ್ಯವಿಲ್ಲದೆ, ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ನೀವೃತ್ತಿ ಘೋಷಣೆ ಮಾಡಿರುವುದರಿಂದ ಅವರಿಗೆ ಗೌರವ ಸಲ್ಲಿಸಲು ಅಭಿಮಾನಿಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ಮುಂದೆ ವಿರಾಟ್‌ ಕೊಹ್ಲಿ ಅವರು ಬಿಳಿ ಜೆರ್ಸಿಯಲ್ಲಿ ಕ್ರಿಕೆಟ್‌ ಆಡುವುದನ್ನು ನೋಡಲು ಸಾಧ್ಯವಿಲ್ಲ. ಅಲ್ಲದೆ, ಬಿಳಿ ಜೆರ್ಸಿಯಲ್ಲಿ ಅವರನ್ನು ಕಾಣಲು ಆಗುವುದಿಲ್ಲ. ಆದ್ದರಿಂದ ಅವರು ಟೆಸ್ಟ್‌ ಕ್ರಿಕೆಟ್‌ ಅನ್ನು ಎಷ್ಟರ ಮಟ್ಟಿಗೆ ಇಷ್ಟಪಟ್ಟು ಆಡುತ್ತಿದ್ದರು ಎನ್ನುವುದನ್ನು ಬ್ಯಾಟ್‌ ಹಿಡಿದು ಆಡದಿದ್ದರೂ, ನಾವೆಲ್ಲರೂ ಬಿಳಿ ಜೆರ್ಸಿ ತೊಟ್ಟು ಅವರ ಟೆಸ್ಟ್‌ ದಿನಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆನಪಿಸೋಣ ಎಂದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಹೇಳುವ ಮಾತಾಗಿದೆ.

ಆದ್ದರಿಂದ ಮೇ 17ರಂದು ಪ್ರತಿಯೊಬ್ಬರು ಬಿಳಿ ಜೆರ್ಸಿ ತೊಟ್ಟು ಆರ್​ಸಿಬಿ ಹಾಗೂ ಕೆಕೆಆರ್ ಪಂದ್ಯ ವೀಕ್ಷಣೆ ಮಾಡಲು ಆಗಮಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಮನನಿ ಮಾಡುಕೊಂಡಿದ್ದಾರೆ. ಹಾಗಾದ್ರೆ ಅಂದು ಇಡೀ ಚಿನ್ನಸಾಸ್ವಾಮಿ ಕ್ರೀಡಾಂಗಣವೇ ವಿರಾಟ್‌ ಕೊಹ್ಲಿ ಜೆರ್ಸಿ ನಂಬರ್ ಜೊತೆ ಶ್ವೇತವರ್ಣ ರಾರಾಜಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+