RCB: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಅಬ್ಬರಿಸಿದ ಜೇಕಬ್ ಬೆಥೆಲ್
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಆಲ್‌ರೌಂಡರ್ ವಿಲ್ ಜ್ಯಾಕ್ಸ್‌ರನ್ನು ಕೈಬಿಟ್ಟಿದ್ದು ಅಭಿಮಾನಿಗಳಿಗೆ ಆಘಾತ ತಂದಿತ್ತು. 2024ರ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ವಿಲ್ ಜ್ಯಾಕ್ಸ್‌ರನ್ನು ಆರ್ ಸಿಬಿ ರಿಟೇನ್ ಮಾಡಿಕೊಳ್ಳುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ಮುಂಬೈ ಇಂಡಿಯನ್ಸ್ ವಿಲ್ ಜ್ಯಾಕ್ಸ್‌ರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು. ವಿಲ್ ಜ್ಯಾಕ್ಸ್‌ರನ್ನು ಕೈಬಿಟ್ಟ ಆರ್ ಸಿಬಿ ಇಂಗ್ಲೆಂಡ್‌ನ ಮತ್ತೊಬ್ಬ ಆಲ್‌ರೌಂಡರ್ ಜೇಕಬ್ ಬೆಥೆಲ್‌ರನ್ನು 2.6 ಕೋಟಿ ರೂಪಾಯಿಗೆ ಖರೀದಿ ಮಾಡಿತು.
ವಿಲ್ ಜ್ಯಾಕ್ಸ್ ಕೈಬಿಟ್ಟು ಬೆಥೆಲ್‌ರನ್ನು ಖರೀದಿಸಿದ್ಯಾಕೆ ಎಂದು ನೋಡಿದ ಅಭಿಮಾನಿಗಳಿಗೆ ಸಮಾಧಾನವಾಗಿತ್ತು. ಜೇಕಬ್ ಬೆಥೆಲ್ ಕೂಡ ವಿಲ್‌ಜ್ಯಾಕ್ಸ್ ರೀತಿಯ ಸ್ಫೋಟಕ ಬ್ಯಾಟರ್. ವ್ಯತ್ಯಾಸವೆಂದರೆ ವಿಲ್ ಜ್ಯಾಕ್ಸ್ ಬಲಗೈ ಬ್ಯಾಟರ್ ಆಗಿದ್ದರೆ ಬೆಥೆಲ್ ಎಡಗೈ ಬ್ಯಾಟರ್ ಆಗಿದ್ದರು. 21 ವರ್ಷದ ಆಟಗಾರ ಈಗ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿದೆ.

ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಕೌಂಟಿ ಕ್ರಿಕೆಟ್ ಆಡದೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಸಾಧನೆ ಮಾಡಿದ್ದಾರೆ ಜಾಕೋಬ್ ಬೆಥೆಲ್, ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಮಿಂಚಿದ್ದು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
ಆಲ್‌ರೌಂಡರ್ ಪ್ರದರ್ಶನ
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಮೂರು ಟೆಸ್ಟ್‌ಗಳಲ್ಲಿ ಜೇಕಬ್ ಬೆಥೆಲ್ 260 ರನ್ ಗಳಿಸಿದ್ದು ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇದರಲ್ಲಿ ಮೂರು ಅರ್ಧಶತಕ ಬಾರಿಸುವ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಆಟಗಾರನಾಗಿದ್ದಾರೆ. ಅತಿ ಹೆಚ್ಚು ಬೌಂಡರಿ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ ಬೌಲಿಂಗ್‌ನಲ್ಲಿ ಕೂಡ ಬೆಥೆಲ್ ಮಿಂಚಿದ್ದಾರೆ. ಕೊನೆಯ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿದ ಅವರು ಮೂರು ವಿಕೆಟ್ ಪಡೆಯುವ ಮೂಲಕ ಉತ್ತಮ ಬೌಲಿಂಗ್ ಕೂಡ ಮಾಡಬಲ್ಲೆ ಎನ್ನುವುದನ್ನು ತೋರಿಸಿದ್ದಾರೆ.
ಹೆಚ್ಚಾದ ಆರ್‌ಸಿಬಿ ಅಭಿಮಾನಿಗಳ ನಿರೀಕ್ಷೆ
ಜೇಕಬ್ ಬೆಥೆಲ್‌ರ ಪ್ರದರ್ಶನ ನೋಡಿರುವ ಆರ್ ಸಿಬಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಬ್ಬರಿಸಲು ಕಾಯುತ್ತಿದ್ದು, ನ್ಯೂಜಿಲೆಂಡ್‌ನಲ್ಲೂ ಆರ್ ಸಿಬಿ ಅಭಿಮಾನಿಗಳು ಜೇಕಬ್ ಬೆಥೆಲ್‌ರನ್ನು ಅಭಿನಂದಿಸಿದ್ದಾರೆ.
ಜೇಕಬ್ ಬೆಥೆಲ್ ಯಾವ ಕ್ರಮಾಂಕದಲ್ಲಿ ಬೇಕಾದರೂ ಆಡುವ ಸಾಮರ್ಥ್ಯ ಹೊಂದಿದ್ದಾರೆ. 21 ವರ್ಷದ ಆಟಗಾರನ ಮೇಲೆ ನಂಬಿಕೆ ಇಟ್ಟರೆ ಮುಂದಿನ ದಿನಗಳಲ್ಲಿ ಆರ್ ಸಿಬಿ ತಂಡದ ಪ್ರಮುಖ ಆಟಗಾರನಾಗಲಿದ್ದಾರೆ. ಬೌಲಿಂಗ್ ಕೂಡ ಮಾಡುವ ಸಾಮರ್ಥ್ಯ ಹೊಂದಿರುವುದು ತಂಡಕ್ಕೆ ಮತ್ತೊಂದು ಪ್ಲಸ್ ಆಗಲಿದೆ.












Click it and Unblock the Notifications