‘ಸೆಡೆ ಥರ ಇದ್ದ, ಬೆಂಗಳೂರು ಎದುರು 118 ರನ್ ಬಾರಿಸಿಬಿಟ್ಟ’ ಅಂತಾ... RCB

ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳು ನಿನ್ನೆ ರಾತ್ರಿಯಿಂದ ನಿದ್ದೆಯನ್ನೇ ಮಾಡಿಲ್ಲ, ಯಾಕಂದ್ರೆ ಲಖನೌ ತಂಡದ ಎದುರು ನಿನ್ನೆ ಆರ್‌ಸಿಬಿ ಆಡಿದ ರೀತಿಗೆ ಕೋಟಿ, ಕೋಟಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಂಟರ್‌ನೆಟ್ ಪೂರ್ತಿ ಬೆಂಗಳೂರು ತಂಡ ಆರ್‌ಸಿಬಿ ವಿಡಿಯೋಗಳಿಂದ ತುಂಬಿ ಹೋಗಿದೆ. ಹೀಗಿದ್ದಾಗಲೇ, 'ಸೆಡೆ ಥರ ಇದ್ದ, ಬೆಂಗಳೂರು ಎದುರು 118 ರನ್ ಬಾರಿಸಿಬಿಟ್ಟ' ಅಂತಾ...

ಆರ್‌ಸಿಬಿ ತಂಡವನ್ನ ಯಾರು ಕೂಡ ಎದುರು ಹಾಕಿಕೊಳ್ಳುವ ಸಾಹಸ ಮಾಡೋದಿಲ್ಲ, ಈ ಮಾತು ಯಾಕಪ್ಪಾ ಅಂದ್ರೆ ನಮ್ಮ ಆರ್‌ಸಿಬಿ ತಂಡಕ್ಕೆ ಸಮುದ್ರ & ಸಾಗರದ ರೀತಿಯೇ ದೊಡ್ಡ ಅಭಿಮಾನಿಗಳ ಬಳಗವೇ ಬೆಂಬಲಕ್ಕೆ ಇದೆ. ಹೀಗಾಗಿ ಎದುರಾಳಿ ತಂಡಗಳು ಕೂಡ ಆರ್‌ಸಿಬಿ ಆಟಗಾರರನ್ನ ಕಂಡರೆ ಸೈಲೆಂಟ್ ಆಗಿ ಬಾಯಿ ಮುಚ್ಚಿಕೊಂಡು ಆಟ ಆಡಿ ಹೋಗುತ್ತಾರೆ, ಅಕಸ್ಮಾತ್ ಕೆಣಕಿದರೆ ಅವರ ಕ್ರಿಕೆಟ್ ಜೀವನವೇ ಮುಗಿದು ಹೋಯ್ತು ಅಂತಾ ಲೆಕ್ಕ. ಹೀಗೆ ಇದ್ದರೂ ನಿನ್ನೆ ಲಖನೌ ಪಂದ್ಯದ ವೇಳೆ ಆರ್‌ಸಿಬಿ ತಂಡವನ್ನ ಕೆಣಕುವ ಕೆಲಸ ಆಗಿತ್ತು!

RCB Fans Are Saying This About Rishabh Pant Now

'ಸೆಡೆ ಥರ ಇದ್ದ, ಬೆಂಗಳೂರು ಎದುರು 118 ರನ್...'

ಹೌದು, ಲಖನೌ ವಿರುದ್ಧ ಆರ್‌ಸಿಬಿ ತಂಡ ಕಂಡಿರುವ ಗೆಲುವು ಸಾಮಾನ್ಯ ಮ್ಯಾಚ್ ಅಲ್ಲ. ತುಂಬಾ ಕಷ್ಟಪಟ್ಟು & ಬೆವರು ಹರಿಸಿ ಪಡೆದ ಗೆಲುವು ಇದು. ಹೀಗಾಗಿಯೇ ಆರ್‌ಸಿಬಿ ತಂಡದ ಕೋಟಿ ಕೋಟಿ ಅಭಿಮಾನಿಗಳು ನಡು ರಾತ್ರಿಯೇ ಸಂಭ್ರಮ ವ್ಯಕ್ತಪಡಿಸಿದರು. ಹೀಗಿದ್ದಾಗಲೇ, 'ಸೆಡೆ ಥರ ಇದ್ದ, ಬೆಂಗಳೂರು ಎದುರು 118 ರನ್ ಬಾರಿಸಿಬಿಟ್ಟ' ಅಂತಾ...

ಪಂತ್ ಬಗ್ಗೆ ಶುರುವಾಯ್ತು ಚರ್ಚೆ!

ಅಷ್ಟಕ್ಕೂ 2025ರ ಇಡೀ ಐಪಿಎಲ್ ಟೂರ್ನಿ ಪೂರ್ತಿ ಮಕಾಡೆ ಮಲಗಿದ ರಿಷಬ್ ಪಂತ್ ಸಮೇತ ಇಡೀ ಲಖನೌ ತಂಡ ಬೆಂಗಳೂರು ವಿರುದ್ಧ ಭರ್ಜರಿ ಆಟ ಶುರು ಮಾಡ್ತು. ಹೀಗೆ ಆರ್‌ಸಿಬಿ ಟೀಂ ನೋಡ ನೋಡುತ್ತಲೇ 20 ಓವರ್ ಆಡಿ ಲಖನೌ ತಂಡ 227 ರನ್ ಚಚ್ಚಿತ್ತು. ಈ ಸ್ಕೋರ್ ಚೇಸ್ ಮಾಡುವುದು ಕನಸಿನ ಮಾತು ಅಂತಾ ಹೇಳುವಾಗಲೇ ಆರ್‌ಸಿಬಿ ತಂಡ ಸರಿಯಾಗಿ ಬಾರಿಸಿತ್ತು. ಆದರೆ ವಿಚಾರ ಅದಲ್ಲ, ಆರ್‌ಸಿಬಿ ಅಭಿಮಾನಿಗಳು ಈಗ ರಿಷಬ್ ಪಂತ್ ವಿರುದ್ಧ ರೊಚ್ಚಿಗೆದ್ದು, ಫುಲ್ ಟ್ರೋಲ್ ಮಾಡುತ್ತಾ ಕೂತಿದ್ದಾರೆ!

ಯೆಸ್, ಹೀಗೆ ಕೋಪ ಮಾಡಿಕೊಳ್ಳಲು ಕಾರಣ ರಿಷಬ್ ಪಂತ್ ಇಡೀ ಐಪಿಎಲ್ ಟೂರ್ನಿ ಆಡದೇ ಇದ್ರೂ ಆರ್‌ಸಿಬಿ ವಿರುದ್ಧ ಆಟ ಆಡಿದ್ದು ಇದೀಗ ಆಕ್ರೋಶ ತರಿಸಿದೆ. ಇದೇ ಕಾರಣಕ್ಕೆ 'ಸೆಡೆ ಥರ ಇದ್ದ, ಬೆಂಗಳೂರು ಎದುರು 118 ರನ್ ಬಾರಿಸಿಬಿಟ್ಟ' ಅಂತಾ ಟ್ರೋಲ್ ಮಾಡುತ್ತಿದ್ದಾರೆ ಆರ್‌ಸಿಬಿ ಅಭಿಮಾನಿಗಳು. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಇದೀಗ ರಿಷಬ್ ಪಂತ್ ಆಟದ ಬಗ್ಗೆ ಚರ್ಚೆ ಜೋರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+