RCB vs RR: ‘ಮುಂದಿನ ಸಲ ಕಪ್ ನಮ್ದೇ’ ಅಂತಿದ್ದಾರೆ ಫ್ಯಾನ್ಸ್!
ಆರ್‌ಸಿಬಿ ಅಭಿಮಾನಿಗಳು ಮತ್ತೊಮ್ಮೆ ನೊಂದು, ಬೆಂದು ಹೋಗಿದ್ದಾರೆ. ಕಳೆದ 16 ವರ್ಷ 'ಈ ಸಲ ಕಪ್ ನಮ್ದೇ' ಅಂತಾ ಹೇಳುತ್ತಿದ್ದ ಆರ್‌ಸಿಬಿ ಫ್ಯಾನ್ಸ್ ಈ ಬಾರಿ ನಮ್ಮ ತಂಡ ಕಪ್ ಗೆದ್ದೇ ಗೆಲ್ಲುತ್ತೆ ಅಂತಾ ನಂಬಿಕೆ ಇಟ್ಟುಕೊಂಡಿದ್ದರು. ಆದರೆ ಈ ನಂಬಿಕೆ ಸುಳ್ಳಾಗಿದೆ ಮತ್ತು ಆರ್‌ಸಿಬಿ ಅಭಿಮಾನಿಗಳು ಹೊಸ ಅಭಿಯಾನ ಶುರು ಮಾಡಿದ್ದಾರೆ.
ನಿನ್ನೆ ಆರ್‌ಸಿಬಿ ಅಭಿಮಾನಿಗಳು ದೊಡ್ಡ ನಂಬಿಕೆ ಇಟ್ಟುಕೊಂಡು ಕಾಯುತ್ತಿದ್ದರು. ಈ ಬಾರಿ ಕಪ್ ನಾವೇ ಗೆಲ್ಲೋದು ಅಂತಾ ತೀರ್ಮಾನ ಮಾಡಿಕೊಂಡಿದ್ದರು. ಆದ್ರೂ ಆಗಿದ್ದೆಲ್ಲ ಉಲ್ಟಾ, ಅದೇನು ಅಂದ್ರೆ ಆರ್‌ಸಿಬಿ ತಂಡ ನಿನ್ನೆ ಎಲಿಮಿನೇಷನ್ ಪಂದ್ಯದಲ್ಲಿ ಸೋತು ಸುಣ್ಣವಾಗಿ ಹೋಗಿದೆ. ಈ ಸೋಲು ಆರ್‌ಸಿಬಿ ಅಭಿಮಾನಿಗಳ ಹೃದಯ ಬಿರಿಯುವಂತೆ ಮಾಡಿದೆ. ಹಾಗೇ ಮತ್ತೊಮ್ಮೆ ನೋವಿನಲ್ಲೇ ಆರ್‌ಸಿಬಿ ಬೆಂಗಳೂರು ತಂಡದ ಅಭಿಮಾನಿಗಳು 2024ರ ಐಪಿಎಲ್ ಟೂರ್ನಿಗೆ ವಿದಾಯ ಹೇಳಿದ್ದಾರೆ. ಇದರ ಜೊತೆಗೆ ಮತ್ತೊಂದು ಘೋಷಣೆ ಕೂಡ ಮೊಳಗಿದೆ!

'ಮುಂದಿನ ಸಲ ಕಪ್ ನಮ್ದೇ'
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಂಗೋ ಹಿಂಗೋ ತಿಣುಕಾಡಿ ಕೊನೆಗೆ 172 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 33 ರನ್, ರಜತ್ ಪಾಟೀದಾರ್ 34 ರನ್, ಮಹಿಪಾಲ್ 32 ರನ್ ಗಳಿಸಿದ್ದು ಬಿಟ್ಟರೆ ಆರ್‌ಸಿಬಿ ತಂಡದ ಯಾವುದೇ ಆಟಗಾರ ಕೂಡ 30 ರನ್ ಗಡಿ ದಾಟಲೇ ಇಲ್ಲ. ಆದರೆ ವಿರಾಟ್ ಕೊಹ್ಲಿ ಮತ್ತೊಮ್ಮೆ RCB ತಂಡಕ್ಕೆ ನೆರವಾದರು. ಈ ಮೂಲಕ ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿ ಅಭಿಮಾನಿ ಬಳಗ, ಆರ್‌ಸಿಬಿ ತಂಡ ಸೋತು ಹೊರಬಿದ್ದಿದ್ದರೂ 'ಮುಂದಿನ ಸಲ ಕಪ್ ನಮ್ದೇ' ಅಂತಾ ಹೇಳುತ್ತಾ ಬೆಂಬಲ ನೀಡಿದೆ.
ಆರ್‌ಸಿಬಿ ಹವಾ ಜೋರು!
ಬೆಂಗಳೂರು ಪ್ರತಿನಿಧಿಸುವ ಐಪಿಎಲ್ ತಂಡ ಆರ್‌ಸಿಬಿ ಹವಾ ಭಾರತದಲ್ಲಿ ಮಾತ್ರ ಅಲ್ಲದೆ, ಇಡೀ ಜಗತ್ತಿನಾದ್ಯಂತ ಮೊಳಗಿದೆ. ಅದರಲ್ಲೂ ಆರ್‌ಸಿಬಿ ತಂಡ ಅಭಿಮಾನಿಗಳ ಬೆಂಬಲ & ಪ್ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈಗ ಕೂಡ ಅಷ್ಟೇ ಆರ್‌ಸಿಬಿ ತಂಡ ಸೋತರೂ ಅಭಿಮಾನಿಗಳು ಮಾತ್ರ ಬೆಂಗಳೂರು ತಂಡವನ್ನು ಬಿಟ್ಟುಕೊಡಲ್ಲ ಅಂತಿದ್ದಾರೆ. ಆದರೆ ಈ ವಿಚಾರದಲ್ಲಿ ಫ್ಯಾನ್ಸ್ ಮತ್ತೊಂದು ಬೇಡಿಕೆ ಇಟ್ಟಿದ್ದು, ಮುಂದಿನ ವರ್ಷ ಸರಿಯಾದ ಟೀಂ ಆಯ್ಕೆ ಮಾಡಿ ಅಂತಿದ್ದಾರೆ.
ಮುಂದಿನ ವರ್ಷ ಆರ್‌ಸಿಬಿ ತಂಡ ಆಯ್ಕೆ ಮಾಡುವಾಗ ಜ್ಞಾನ ಇಟ್ಟುಕೊಳ್ಳಿ ಅಂತಾ ಈಗ, ಆರ್‌ಸಿಬಿ ಮ್ಯಾನೇಜ್‌ಮೆಂಟ್ ಅಧಿಕಾರಿಗಳಿಗೆ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ಎಲ್ಲಾ ಕಾರಣಕ್ಕೆ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಹವಾ ಬಲು ಜೋರಾಗಿದ್ದು, ಟ್ರೆಂಡ್ ಕ್ರಿಯೇಟ್ ಮಾಡಿದೆ. ಹಾಗೇ ಕೋಟಿ ಕೋಟಿ ಫ್ಯಾನ್ಸ್ ಕೂಡ ನಾವು ಈಗಲೂ ಆರ್‌ಸಿಬಿ ಪರ ಅಂತಿದ್ದಾರೆ.












Click it and Unblock the Notifications