RCB: ಸೋಫಿ ಡಿವೈನ್, ಕೇಟ್ ಕ್ರಾಸ್‌ಗೆ ಬದಲೀ ಆಟಗಾರರ ಹೆಸರು ಘೋಷಿಸಿದ ಆರ್‌ಸಿಬಿ

ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅನಿವಾರ್ಯವಾಗಿ ಎರಡು ಬದಲಾವನೆ ಮಾಡಲಾಗಿದೆ. ಸೋಫಿ ಡಿವೈನ್ ಮತ್ತು ಕೇಟ್ ಕ್ರಾಸ್ ಅಲಭ್ಯರಾಗಿರುವ ಕಾರಣ ಆರ್ ಸಿಬಿ ಬದಲೀ ಆಟಗಾರರನ್ನು ಘೋಷಣೆ ಮಾಡಿದೆ.

ಆರ್‍ ಸಿಬಿ ತಂಡದ ಸ್ಟಾರ್ ಆಲ್‌ರೌಂಡರ್, ನ್ಯೂಜಿಲೆಂಡ್‌ನ ಆಟಗಾರ್ತಿ ಸೋಫಿ ಡಿವೈನ್‌ ಕ್ರಿಕೆಟ್‌ನಿಂದ ಬ್ರೇಕ್‌ ತೆಗೆದುಕೊಂಡಿದ್ದು ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್‌ನ ಕೇಟ್‌ ಕ್ರಾಸ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ ತಪ್ಪಿಸಿಕೊಳ್ಳಲಿದ್ದಾರೆ.

rcb draft in heather graham kim garth for sophie devine and kate cross wpl 2025

ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಬ್ಬರೂ ಆಟಗಾರ್ತಿಯರಿಗೆ ಬದಲೀ ಆಟಗಾರರ ಹೆಸರನ್ನು ಘೋಷಣೆ ಮಾಡಿದೆ. ಆಲ್‌ರೌಂಡರ್ ಹೀಥರ್ ಗ್ರಹಾಂ ಮತ್ತು ಕಿಮ್ ಗಾರ್ತ್ ಅವರು ಆರ್ ಸಿಬಿ ಸೇರ್ಪಡೆಯಾಗಿದ್ದಾರೆ. ಇಬ್ಬರೂ ಆಲ್‌ರೌಂಡರ್ ಆಗಿದ್ದು ತಂಡದ ಬ್ಯಾಲೆನ್ಸ್ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಆರ್ ಸಿಬಿ ಸೇರಿದ ಮಂದಾನ

ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನೂ ಕೆಲವೇ ದಿನಗಳಿದ್ದು ಈಗಾಗಲೇ ಆಟಗಾರರು ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಆರ್ ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಕೂಡ ಸೋಮವಾರ ಬೆಂಗಳೂರಿಗೆ ಆಗಮಿಸಿದ್ದು ತಂಡವನ್ನು ಸೇರಿಕೊಂಡಿದ್ದಾರೆ. ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್, ಏಕ್ತಾ ಬಿಷ್ತ್, ರಾಘ್ವಿ ಬಿಷ್ತ್, ಸಬ್ಬಿನೇನಿ ಮೇಘನಾ ಸೇರಿದಂತೆ ಇತರ ಆಟಗಾರರು ಈಗಾಗಲೇ ತಂಡವನ್ನು ಸೇರಿಕೊಂಡಿದ್ದು ಅಭ್ಯಾಸ ಆರಂಭಿಸಿದ್ದಾರೆ.

ಫೆಬ್ರವರಿ 14ರಂದು ಮಹಿಳಾ ಪ್ರೀಮಿಯರ್ ಲೀಗ್‌ಗೆ ಅದ್ದೂರಿ ಚಾಲನೆ ಸಿಗಲಿದ್ದು ಮೊದಲ ಪಂದ್ಯದಲ್ಲಿ ಆರ್ ಸಿಬಿ ಗುಜರಾತ್ ಜೈಂಟ್ಸ್ ವಿರುದ್ಧ ಸೆಣೆಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

2024ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಫೀನಿಕ್ಸ್‌ನಂತೆ ಎದ್ದು ಬಂದಿದ್ದ ಆರ್ ಸಿಬಿ ಸತತ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿತ್ತು. ತಂಡ ಬಲಿಷ್ಠ ಆಟಗಾರರನ್ನು ಹೊಂದಿದ್ದು ಈ ಬಾರಿ ಕೂಡ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+