IPL 2026 RCB: ಹ್ಯಾಜಲ್‌ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್‌ಸಿಬಿ ಮುಂದಿರುವ 'ಪ್ಲಾನ್ ಬಿ' ಏನು?
IPL 2026 RCB: ಐಪಿಎಲ್ 2026ರ ಸೀಸನ್ ಆರಂಭಕ್ಕೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೌಲಿಂಗ್ ವಿಭಾಗದಲ್ಲಿ ದೊಡ್ಡ ತಲೆನೋವು ಶುರುವಾಗಿದೆ. ತಂಡದ ಪ್ರಮುಖ ವೇಗಿಗಳಾದ ಜೋಶ್ ಹ್ಯಾಜಲ್‌ವುಡ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರೆ, ಯಶ್ ದಯಾಳ್ ಸಂಪೂರ್ಣ ಟೂರ್ನಿಯಲ್ಲಿ ಲಭ್ಯತೆಯ ಬಗ್ಗೆ ಅನುಮಾನಗಳು ಮೂಡಿವೆ. ಹಾಗಾದ್ರೆ, ಆರ್‌ಸಿಬಿ ಮುಂದಿರುವ ಆಯ್ಕೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಎಂ.ಚಿನ್ನಸ್ವಾಮಿಯಲ್ಲಿ ಮಾರ್ಚ್ 28ರಂದು ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮುಂಖಾಮುಖಿಯಾಗಲಿವೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆಯೇ ಮತ್ತೊಂದೆಡೆ ಹ್ಯಾಜಲ್‌ವುಡ್, ದಯಾಶ್ ಹೊರಗುಳಿದರೆ ಅವರ ಸ್ಥಾನಕ್ಕೆ ಯಾರು ಸೂಕ್ತ ಎನ್ನುವ ಪ್ರಶ್ನೆಗಳು ಎದ್ದಿವೆ.
ಜೋಶ್ ಹ್ಯಾಜಲ್‌ವುಡ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಅವರು ಇನ್ನೂ ಫಿಟ್ ಆಗಿಲ್ಲ. ಐಪಿಎಲ್‌ನ ಆರಂಭಿಕ ಕೆಲವು ಪಂದ್ಯಗಳನ್ನು ಅವರು ತಪ್ಪಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಮತ್ತೊಂದೆಡೆ, ಯಶ್ ದಯಾಳ್ ಕೆಲವು ಕಾನೂನು ಪ್ರಕ್ರಿಯೆಗಳ ಕಾರಣದಿಂದಾಗಿ ತಂಡವನ್ನು ಇನ್ನೂ ಸೇರಿಕೊಂಡಿಲ್ಲ. ಈ ಸೀಸನ್‌ನಿಂದ ಅವರು ಹೊರಬೀಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಆರ್‌ಸಿಬಿ ಮುಂದಿರುವ ಬದಲಿ ಆಯ್ಕೆಗಳು
* ಭುನೇಶ್ವರ್ ಕುಮಾರ್: ಹ್ಯಾಜಲ್‌ವುಡ್ ಅನುಪಸ್ಥಿತಿಯಲ್ಲಿ ಭುವನೇಶ್ವರ್ ಕುಮಾರ್ ತಂಡದ ಬೌಲಿಂಗ್ ವಿಭಾಗ ಜವಾಬ್ದಾರಿ ಹೊರಲಿದ್ದಾರೆ. ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ರನ್ ನಿಯಂತ್ರಿಸುವ ಜವಾಬ್ದಾರಿ ಇವರ ಮೇಲಿರುತ್ತದೆ.
* ನುವಾನ್ ತುಷಾರ: ಶ್ರೀಲಂಕಾದ ಈ ವೇಗಿ ಲಸಿತ್ ಮಾಲಿಂಗ ಶೈಲಿಯ ಬೌಲಿಂಗ್‌ಗೆ ಹೆಸರಾಗಿದ್ದಾರೆ. ಇವರು ಹ್ಯಾಜಲ್‌ವುಡ್ ಬದಲಿಗೆ ವಿದೇಶಿ ವೇಗಿಯಾಗಿ ಕಣಕ್ಕಿಳಿಯಬಹುದು.
* ಜಾಕೋಬ್ ಡಫಿ: ನ್ಯೂಜಿಲೆಂಡ್‌ನ ಈ ವೇಗಿ ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು, ಹ್ಯಾಜಲ್‌ವುಡ್ ಸ್ಥಾನಕ್ಕೆ ಮತ್ತೊಂದು ಆಯ್ಕೆಯಾಗಿದ್ದಾರೆ.
* ರಸಿಖ್ ಸಲಾಂ ದಾರ್: ಯಶ್ ದಯಾಳ್ ಅಲಭ್ಯರಾದರೆ, ದೇಶೀಯ ವೇಗಿಯಾಗಿ ರಸಿಖ್ ಅವರಿಗೆ ಹೆಚ್ಚಿನ ಅವಕಾಶ ಸಿಗಬಹುದು. ಇವರು ಡೆತ್ ಓವರ್‌ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
* ಮಂಗೇಶ್ ಯಾದವ್: ಹರಾಜಿನಲ್ಲಿ 5.2 ಕೋಟಿ ರೂಪಾಯಿ ನೀಡಿ ಖರೀದಿಸಲಾದ ಈ ಎಡಗೈ ವೇಗಿ, ಯಶ್ ದಯಾಳ್ ಅವರ ಸ್ಥಾನಕ್ಕೆ ಮತ್ತೊಂದು ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಆರ್‌ಸಿಬಿ ಬಳಿ ಬೌಲಿಂಗ್‌ನಲ್ಲಿ ಸಾಕಷ್ಟು ಆಯ್ಕೆಗಳಿದ್ದರೂ, ಹ್ಯಾಜಲ್‌ವುಡ್ ಅವರಂತಹ ಅನುಭವಿ ಆಟಗಾರನ ಕೊರತೆ ತಂಡಕ್ಕೆ ಕಾಡಬಹುದು. ಇಂತಹ ಸಮಯದಲ್ಲಿ ಭುವನೇಶ್ವರ್ ಕುಮಾರ್ ಅವರ ಅನುಭವವೇ ತಂಡಕ್ಕೆ ದೊಡ್ಡ ಬಲ ಅಂತಲೇ ಹೇಳಹುದು.
ರಜತ್ ಪಾಟಿದಾರ್ ನಾಯಕತ್ವದ ವಿವರ
ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಅವರಂತಹ ದಿಗ್ಗಜರ ನಂತರ, ತಂಡವು ಈಗ ಒಬ್ಬ ಪ್ರತಿಭಾವಂತ ಭಾರತೀಯ ಬ್ಯಾಟರ್ ಮೇಲೆ ನಂಬಿಕೆ ಇಟ್ಟು ನಾಯಕತ್ವದ ಜವಾಬ್ದಾರಿ ನೀಡಿದೆ. ಕಳೆದ ಕೆಲವು ಸೀಸನ್‌ಗಳಲ್ಲಿ ರಜತ್ ಪಾಟಿದಾರ್ ಆರ್‌ಸಿಬಿ ತಂಡದ ಅತ್ಯಂತ ನಂಬಿಕಸ್ತ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಒತ್ತಡದ ಸಮಯದಲ್ಲಿ ಅವರ ಆಕ್ರಮಣಕಾರಿ ಆಟದ ಶೈಲಿ ಮ್ಯಾನೇಜ್‌ಮೆಂಟ್ ಗಮನ ಸೆಳೆದಿದೆ. ಸ್ಪಿನ್ನರ್ ಮತ್ತು ವೇಗಿಗಳಿಬ್ಬರನ್ನೂ ಎದುರಿಸುವ ಸಾಮರ್ಥ್ಯ ಇವರಿಗಿದೆ. ಇದು ಚಿನ್ನಸ್ವಾಮಿ ಕ್ರೀಡಾಂಗಣದಂತಹ ಸಣ್ಣ ಮೈದಾನದಲ್ಲಿ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಡು ಪ್ಲೆಸಿಸ್ ನಂತರ ತಂಡಕ್ಕೆ ಒಬ್ಬ ದೀರ್ಘಕಾಲದ ನಾಯಕನ ಅಗತ್ಯವಿತ್ತು. ಆಗ ತಂಡ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಹ್ಯಾಜಲ್‌ವುಡ್ ಮತ್ತು ಯಶ್ ದಯಾಳ್ ಅಲಭ್ಯತೆಯ ಸುದ್ದಿ ಹರಿದಾಡುತ್ತಿದ್ದ, ಲಭ್ಯವಿರುವ ಬೌಲರ್‌ಗಳನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್ ಅವರಂತಹ ಹಿರಿಯ ಆಟಗಾರರ ಸಲಹೆ ಪಡೆದು ತಂಡವನ್ನು ಮುನ್ನಡೆಸುವ ಸವಾಲು ಇವರ ಮೇಲಿದೆ.












Click it and Unblock the Notifications