RCB: ಆರ್‌ಸಿಬಿ ಗೆಲ್ಲಬೇಕು ಅಂದ್ರೆ....! ಸ್ಟೀವ್ ಸ್ಮಿತ್ ಕೊಟ್ಟ ಸಲಹೆ ಏನು?

ಆರ್‌ಸಿಬಿ ಹೊಸ ಅಧ್ಯಾಯದ ಆರಂಭದಲ್ಲೇ ಖುಷಿಗಿಂತ ಹೆಚ್ಚಾಗಿ ದುಃಖವೇ ಇದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಗೆಲುವಿನ ಹಾದಿಗೆ ಮರಳಲು ಆರ್ ಸಿಬಿ ರಣತಂತ್ರ ರೂಪಿಸುತ್ತಿದೆ. ಆರ್‌ಸಿಬಿ ಗೆಲ್ಲಬೇಕು ಅಂದ್ರೆ ಏನು ಮಾಡಬೇಕು ಎನ್ನುವ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಸಲಹೆ ನೀಡಿದ್ದಾರೆ.

RCB Batsmens Must Support Virat Kohli Under Pressure Steve Smith

ಸದ್ಯ ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಒಬ್ಬರೇ ರನ್ ಗಳಿಸುತ್ತಿದ್ದು, ಅವರಿಗೆ ಉಳಿದ ವ್ಯಾಟರ್ ಬ್ಯಾಟರ್ ಗಳ ಬೆಂಬಲ ನೀಡಬೇಕು ಎಂದು ಸ್ಮಿತ್ ಸಲಹೆ ನೀಡಿದ್ದಾರೆ. ತಂಡದಲ್ಲಿ ಸ್ಪೋಟಕ ಬ್ಯಾಟಿಂಗ್ ಪಡೆ ಇದ್ದರೂ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ ಎಂದಿದ್ದಾರೆ.

ಸ್ಟೀವ್ ಸ್ಮಿತ್ ಹೇಳಿದ್ದೇನು?

ಕೊಹ್ಲಿ ಜೊತೆ ತರ ಪ್ರಮುಖ ಬ್ಯಾಟರ್‌ಗಳು ನಿಲ್ಲುವ ಅಗತ್ಯವಿದೆ. ಒಂದು ವೇಳೆ ಹಾಗೆ ಆದರೆ ಫಲಿತಾಂಶ ವಿಭಿನ್ನವಾಗಿರುತ್ತದೆ. ಬೇರೆ ಬ್ಯಾಟರ್ ಉತ್ತಮ ಪ್ರದರ್ಶನ ನೀಡಿದರೆ, ವಿರಾಟ್ ಕೊಹ್ಲಿ ಮೇಲಿರುವ ಒತ್ತಡ ಕೂಡ ಕಡಿಮೆಯಾಗಲಿದೆ, ಅವರು ಇನ್ನೂ ವೇಗವಾಗಿ ರನ್ ಗಳಿಸಬಹುದು ಎಂದರು.

ಕೊಹ್ಲಿ ಮೇಲೆ ಸದ್ಯ ಹೆಚ್ಚಿನ ಒತ್ತಡ ಇದೆ. ಅಗ್ರ ಕ್ರಮಾಂಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ವಿರಾಟ್ ಕೊಹ್ಲಿಗೆ ಸಹಾಯ ಮಾಡಬೇಕಿದೆ. ಕೊಹ್ಲಿ ಎಲ್ಲಾ ಪಂದ್ಯಗಳಲ್ಲಿ ರನ್ ಗಳಿಸಲು ಆಗುವುದಿಲ್ಲ, ಆರ್‌ಸಿಬಿ ಬ್ಯಾಟರ್‌ಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ರನ್ ಗಳಿಸಿದರೂ ಆರ್‌ಸಿಬಿ ನಾಲ್ಕು ಪಂದ್ಯಗಳಲ್ಲಿ ಮೂರು ಸೋಲುಗಳೊಂದಿಗೆ ತತ್ತರಿಸಿ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಗ್ಲೆನ್ ಮ್ಯಾಕ್ಸ್‌ವೆಲ್, ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಕ್ಯಾಮರೂನ್ ಗ್ರೀನ್ ಅವರು ಇಲ್ಲಿಯವರೆಗೆ ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡುವಲ್ಲಿ ವಿಫಲವಾಗಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್‌ ಅಭಿಯಾನವನ್ನು ಉತ್ತಮವಾಗಿ ಪ್ರಾರಂಭಿಸಿದ್ದಾರೆ ಆದರೆ ಅವರಿಗೆ ಬೆಂಬಲದ ಅಗತ್ಯವಿದೆ. ಅವರು ಪ್ರತಿ ಸಂದರ್ಭದಲ್ಲೂ ರನ್ ಗಳಿಸಲು ಆಗುವುದಿಲ್ಲ ಎಂದು ಹೇಳಿದರು.

ಕೊಹ್ಲಿ ಬಗ್ಗೆ ಟೀಕೆಗೆ ಉತ್ತರ

ವಿರಾಟ್ ಕೊಹ್ಲಿ ಸ್ಟ್ರೈಕ್‌ ರೇಟ್ ಬಗ್ಗೆ ಹಲವರು ಟೀಕಿಸುತ್ತಿರುವ ಬಗ್ಗೆ ಸ್ಮಿತ್ ಪ್ರತಿಕ್ರಿಯೆ ನೀಡಿದ್ದು, ವಿಶ್ವದ ಯಾವುದೇ ಬ್ಯಾಟರ್ ಕೂಡ ವಿರಾಟ್ ಕೊಹ್ಲಿ ರೀತಿ ಸನ್ನಿವೇಶಗಳಿಗೆ ತಕ್ಕಂತೆ ರನ್ ಗಳಿಸಲು ಸಾಧ್ಯವಿಲ್ಲ, ಈ ಬಾರಿ ಐಪಿಎಲ್‌ನಲ್ಲಿ ಅವರು 140ಕ್ಕೂ ಹೆಚ್ಚು ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸುತ್ತಿದ್ದಾರೆ. ಅವರು ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಾರೆ ಎಂದರು.

ಎಲ್ಲಾ ಮೈದಾನಗಳಲ್ಲಿ ನಿಮಗೆ ಗೆಲ್ಲಲು 180 ರನ್ ಬೇಕಾಗುವುದಿಲ್ಲ, ಪಿಚ್ ಕಠಿಣವಾಗಿದ್ದಾಗ 150-160 ರನ್ ಗಳಿಸಿದರೂ ಸಾಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+