ರವೀಂದ್ರ ಜಡೇಜಾ ಹೆಂಡತಿ ಪರ ನಿಂತು, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅರ್ಪಿಸಿದ್ದು ಯಾರಿಗೆ?
ಭಾರತ ಕ್ರಿಕೆಟ್ ತಂಡದ ಪಾಲಿಗೆ ರವೀಂದ್ರ ಜಡೇಜಾ, ಒಂದು ರೀತಿ ಆಪತ್ಪಾಂಧವ ಅಂತಾ ಹೇಳಬಹುದು. ಈ ಆಟಗಾರ ಕಳೆದ ಹಲವು ವರ್ಷಗಳಿಂದ ಭಾರತ ಕ್ರಿಕೆಟ್ ತಂಡ ಕಷ್ಟದ ಪರಿಸ್ಥಿತಿ ಎದುರಿಸುವಾಗ, ಹೀರೋ ರೀತಿ ಎಂಟ್ರಿ ಕೊಟ್ಟು ಮಿಂಚಿದ್ದಾರೆ. ಇದೇ ಆಟಗಾರನ ಜೀವನ ಈಗ ದೊಡ್ಡ ಸಮಸ್ಯೆಗೆ ಸಿಲುಕಿದೆ. ಹೀಗಿದ್ದಾಗಲೇ ತಮ್ಮ ಇಡೀ ಕುಟುಂಬ ಎದುರು ಹಾಕಿಕೊಂಡು ತಮ್ಮ ಹೆಂಡತಿ ಪರ ನಿಂತಿದ್ದಾರೆ ರವೀಂದ್ರ ಜಡೇಜಾ.
ಹೌದು, ಟೀಮ್ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾರ ತಂದೆ ತಮ್ಮ ಕುಟುಂಬದಲ್ಲಿ ಎದ್ದಿರುವ ಬಿರುಗಾಳಿ ಬಗ್ಗೆ ನೇರವಾಗಿ ಮಾತನಾಡಿದ್ದರು. ಹಾಗೇ ತಮ್ಮ ಸಂಸಾರದ ಎಲ್ಲಾ ಕಿತ್ತಾಟಕ್ಕೂ ತಮ್ಮ ಸೊಸೆ, ಅಂದ್ರೆ ರವೀಂದ್ರ ಜಡೇಜಾ ಅವರ ಹೆಂಡತಿ ರಿವಾಬಾ ಜಡೇಜಾ ಕಡೆ ಬೆರಳು ತೋರಿಸಿದ್ದರು. ಇದನ್ನ ಇದೀಗ ಸ್ವತಃ ಕ್ರಿಕೆಟಿಗ ರವೀಂದ್ರ ಜಡೇಜಾ ತಳ್ಳಿಹಾಕಿದ್ದೂ ಅಲ್ಲದೆ, ತಮ್ಮ ಹೆಂಡತಿ ಪರವಾಗಿ ನಿಂತಿದ್ದಾರೆ. ಆಂಗ್ಲರ ವಿರುದ್ಧ ಗೆಲುವಿನ ವೇಳೆ, ಪತ್ನಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಹಾಗಾದರೆ ಏನದು ಉಡುಗೊರೆ ಗೊತ್ತೆ? ಮುಂದೆ ಓದಿ.

ಹೆಂಡತಿಗೆ ಜಡೇಜಾ ಫುಲ್ ಸಪೋರ್ಟ್
ಭಾರತ ಕ್ರಿಕೆಟ್ ತಂಡ ಆಂಗ್ಲರ ವಿರುದ್ಧ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಹೀಗಾಗಿ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಿಕ್ಕಾಪಟ್ಟೆ ಸಂಭ್ರಮದಲ್ಲಿ ಇದ್ದಾರೆ. ರಾಜ್‌ಕೋಟ್‌ನ, ಕ್ರಿಕೆಟ್ ಮೈದಾನದಲ್ಲಿ ಭಾರತ ಕ್ರಿಕೆಟ್ ತಂಡ ಇತಿಹಾಸ ನಿರ್ಮಿಸಿದೆ. ಭಾರತ & ಇಂಗ್ಲೆಂಡ್ ನಡುವಿನ 5 ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 434 ರನ್‌ಗಳ ಗೆಲುವು ಸಾಧಿಸಿದೆ. ಇದೇ ಪಂದ್ಯದಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಭರ್ಜರಿ ಆಟವನ್ನ ಆಡಿ, ಭಾರತ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. ಹೀಗಿದ್ದಾಗಲೇ ತಮ್ಮ ಈ ಗೆಲುವಿಗೆ ತಮ್ಮ ಪತ್ನಿಯನ್ನ ಹೊಗಳಿದ್ದಾರೆ ಜಡೇಜಾ.
100 + 5 ವಿಕೆಟ್ ಪಡೆದ ಸಾಧನೆ!
ಹೌದು ತಮ್ಮ ಸಂಸಾರದ ಕಿತ್ತಾಟಗಳ ನಡುವೆ ರವೀಂದ್ರ ಜಡೇಜಾ ತಮ್ಮ ಹೆಂಡತಿ ಪರವೇ ನಿಂತಿದ್ದಾರೆ. ವಿವಾದ ಭುಗಿಲೆದ್ದ ಕೆಲ ದಿನಗಳ ನಂತರ ರವೀಂದ್ರ ಜಡೇಜಾ, ರಾಜ್‌ಕೋಟ್‌ನಲ್ಲಿ ತನಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ಪತ್ನಿಗೆ ಅರ್ಪಿಸಿದ್ದಾರೆ. ತನಗೆ ಮಾನಸಿಕ ಬೆಂಬಲವನ್ನ, ನೀಡಿದ ಅವಳು ನನ್ನನ್ನು ಪ್ರೇರೇಪಿಸುತ್ತಾಳೆ ಅಂತಾ ಹೇಳಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರ ನಂತರ ಟೆಸ್ಟ್ ಪಂದ್ಯ ಒಂದರಲ್ಲಿ ಶತಕ ಬಾರಿಸಿ 5 ವಿಕೆಟ್ ಪಡೆದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ, ರಾಜ್‌ಕೋಟ್ ಹೀರೋ ರವೀಂದ್ರ ಜಡೇಜಾ ಪಾತ್ರರಾಗಿದ್ದಾರೆ.
ತವರು ಮೈದಾನದಲ್ಲಿ ಹೆಂಡತಿಗೆ ಗಿಫ್ಟ್
ಇದು ನನ್ನ ತವರು ಮೈದಾನ, ಇಲ್ಲಿ ನನಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ವಿಶೇಷವಾಗಿದೆ ಎಂದಿದ್ದಾರೆ ರವೀಂದ್ರ ಜಡೇಜಾ. ಹಾಗೇ ನಾನು ಈ ಪ್ರಶಸ್ತಿಯನ್ನ ನನ್ನ ಹೆಂಡತಿಗೆ ಅರ್ಪಿಸಲು ಬಯಸುತ್ತೇನೆ. ಅವಳು ಮಾನಸಿಕವಾಗಿ ತೆರೆಮರೆಯಲ್ಲಿ ಶ್ರಮಿಸುತ್ತಿದ್ದಾಳೆ. ಆಕೆ ಯಾವಾಗಲೂ ನನಗೆ ಆತ್ಮವಿಶ್ವಾಸ ನೀಡುತ್ತಾರೆ ಅಂತಾ ಇದೀಗ, ಭಾರತದ ಆಲ್‌ರೌಂಡರ್ ಜಡೇಜಾ ಅವರು ಹೇಳಿದ್ದಾರೆ. ಈ ಮೂಲಕ ತಮ್ಮ ಹೆಂಡತಿ ಪರವಾಗಿ ನಿಂತಿದ್ದಾರೆ ಜಡೇಜಾ.

ಅಪ್ಪ ಬೇಕಾ? ಹೆಂಡತಿ ಬೇಕಾ?
ಒಟ್ನಲ್ಲಿ ತಮ್ಮ ಸಂಸಾರದ ಕಷ್ಟಗಳ ನಡುವೆ ಕೂಡ, ತಮ್ಮ ಪತ್ನಿಯ ಪರವಾಗಿ ನಿಂತಿರುವ ಜಡೇಜಾ. ತಮ್ಮ ಸಾಧನೆ ಹಿಂದೆ ತಮ್ಮ ಹೆಂಡತಿ ಇದ್ದಾರೆ ಅನ್ನೋದನ್ನ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ತಂದೆ ಮಾಡಿದ ಆರೋಪಕ್ಕೆ ರವೀಂದ್ರ ಜಡೇಜಾ ಖಡಕ್ ಉತ್ತರ ನೀಡಿ, ಪತ್ನಿ ಪರ ಮಾತನಾಡಿದ್ದರು. ಹಾಗೇ 2016 ರಲ್ಲಿ ರವೀಂದ್ರ ಜಡೇಜಾ, ರಿವಾಬಾ ಅವರನ್ನ ವಿವಾಹವಾಗಿದ್ದರು. ಆದರೆ ಮದುವೆ ಆದ ಕೆಲ ತಿಂಗಳುಗಳಲ್ಲಿ ರವೀಂದ್ರ ಜಡೇಜಾ & ತಮ್ಮ ನಡುವಿನ ಸಂಬಂಧ ಹದಗೆಟ್ಟಿದೆ ಅಂತಾ, ಜಡೇಜಾ ಅವರ ತಂದೆ ಹೇಳಿಕೆ ನೀಡಿದ್ದು ವಿವಾದ ಎಬ್ಬಿಸಿತ್ತು. ಈಗ ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ ಜಡೇಜಾ.












Click it and Unblock the Notifications