Rishabh Pant: ರಿಷಭ್ ಪಂತ್ ಕಮ್‌ಬ್ಯಾಕ್‌ಗೆ ರವಿ ಶಾಸ್ತ್ರಿ ಮಹತ್ವದ ಸಲಹೆ

Ravi Shastri: ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಕ್ರಿಕೆಟ್ ಪಯಣದಲ್ಲಿ ಏರಿಳಿತಗಳು ಕಂಡುಬರುತ್ತಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಭಾರತ ತಂಡದ ಮೊದಲ ಆದ್ಯತೆಯಾಗಿದೆ. ಆದರೂ ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಅವರ ಸ್ಥಾನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಮಾಜಿ ಹೆಡ್‌ ಕೋಚ್ ರವಿ ಶಾಸ್ತ್ರಿ ಅವರು ಪ್ರತಿಕ್ರಿಯಿಸಿ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

ಮುಂಬರುವ ಏಕದಿನ ವಿಶ್ವಕಪ್‌ಗೆ ಟೀಮ್ ಇಂಡಿಯಾವನ್ನು ಸಿದ್ಧಪಡಿಸುವ ಯೋಜನೆಯಲ್ಲಿ ಪಂತ್ ಅವರ ಹೆಸರು ಹಿನ್ನಡೆಯಲ್ಲಿದೆ. ಈ ಕುರಿತು ಮಾತನಾಡಿರುವ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರು, 'ಪಂತ್ ತಮ್ಮ ಆಟವನ್ನು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ, ಬದಲಿಗೆ ಪರಿಸ್ಥಿತಿಗೆ ತಕ್ಕಂತೆ ಬುದ್ಧಿವಂತಿಕೆಯಿಂದ ಆಡಬೇಕು,' ಎಂದು ಸಲಹೆ ನೀಡಿದ್ದಾರೆ.

Ravi Shastri Advice to Rishabh Pant Amid Questions Over His India Comeback Know Complete details

ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ರವಿ ಶಾಸ್ತ್ರಿ ಅವರು ಪಂತ್‌ಗೆ ತಾವು ನೀಡುತ್ತಿದ್ದ ನಿರಂತರ ಸಲಹೆಯನ್ನು ನೆನಪಿಸಿಕೊಂಡಿದ್ದಾರೆ. 'ನಾನು ರಿಷಭ್ ಪಂತ್‌ಗೆ ಹಿಂದಿನಿಂದಲೂ ಒಂದೇ ಮಾತನ್ನು ಹೇಳುತ್ತಾ ಬಂದಿದ್ದೇನೆ. ಬುದ್ಧಿವಂತಿಕೆಯಿಂದ ಆಟವಾಡು ಎಂದು. ಅವರಲ್ಲಿ ಅದ್ಭುತ ಸಾಮರ್ಥ್ಯವಿದ್ದು, ತಮ್ಮ ಆಕ್ರಮಣಕಾರಿ ಆಟವನ್ನು ಎಂದಿಗೂ ಬದಲಾಯಿಸಿಕೊಳ್ಳಬಾರದು. ಆದರೆ ಮೈದಾನದಲ್ಲಿ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಆಡುವುದು ತುಂಬಾ ಮುಖ್ಯ,' ಎಂದು ಹೇಳಿದ್ದಾರೆ.

ಪಂತ್ ಗ್ರಾಫ್ ಕುಸಿಯಲು ಪ್ರಮುಖ ಕಾರಣಗಳು

ಟೆಸ್ಟ್ ಕ್ರಿಕೆಟ್‌ನಲ್ಲಿ ರಿಷಭ್ ಪಂತ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದೆ. ಆದರೆ ಟಿ20, ಎಕದಿನ ಕ್ರಿಕೆಟ್‌ನಲ್ಲಿ ಜವಾಬ್ದಾರಿಯುತವಾಗಿ ಆಡದೆ, ಅನಗತ್ಯ ರಿಸ್ಕ್ ತೆಗೆದುಕೊಂಡು ವಿಕೆಟ್ ಒಪ್ಪಿಸುವುದು ಅವರಿಗೆ ಹಿನ್ನಡೆಯಾಗಿದೆ.

ತಂಡದಲ್ಲಿ ತೀವ್ರ ಸ್ಪರ್ಧೆ

ಭಾರತೀಯ ಸಿಮಿತ ಓವರ್‌ಗಳ ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಸ್ಥಾನಕ್ಕಾಗಿ ತೀವ್ರ ಸ್ಪರ್ಧೆಯಿದೆ. ಕೆ.ಎಲ್. ರಾಹುಲ್, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಆಟಗಾರರು ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮ್ಯಾನೇಜ್‌ಮೆಂಟ್ ಇಟ್ಟ ಭರವಸೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ.

ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳದಿರುವುದು

ಸಣ್ಣ ಮಾದರಿಯ ಕ್ರಿಕೆಟ್‌ನಲ್ಲಿ ಪರಿಸ್ಥಿತಿಗೆ ತಕ್ಕಂತೆ ಎಚ್ಚರಿಕೆ ಮತ್ತು ಆಕ್ರಮಣಕಾರಿ ಶೈಲಿನ ಸಮತೋಲನಗೊಳಿಸುವುದು ಮುಖ್ಯ. ಪಂತ್ ಈ ವಿಷಯದಲ್ಲಿ ವೈಫಲ್ಯ ಕಾಣುತ್ತಿರುವುದರಿಂದ ವೈಟ್-ಬಾಲ್ ಕ್ರಿಕೆಟ್‌ನಿಂದ ದೂರವಾಗುವಂತಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಪಂತ್ ಅವರ ಆಟವನ್ನು ಬದಲಾಯಿಸದೆ, ಪಂದ್ಯದ ಗತಿಯನ್ನು ಅರ್ಥೈಸಿಕೊಂಡು ಆಡುವ ಕೌಶಲ ಬೆಳೆಸಿಕೊಂಡರೆ ಮಾತ್ರ ಅವರು ನಿಯಮಿತ ಓವರ್‌ಗಳ ಭಾರತೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಸಾಧ್ಯ ಎಂದು ರವಿ ಶಾಸ್ತ್ರಿ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+