ಕನ್ನಡಿಗ ರಾಹುಲ್ ದ್ರಾವಿಡ್ ಮಗನಿಗೆ ಕೊನೆಗೂ ಸಿಕ್ಕೇ ಬಿಡ್ತು ನಾಯಕನ ಸ್ಥಾನ... Rahul Dravid
0, 0, 0, 0, 0, 0... ಇದು ಯಾರದ್ದೋ ಮಾರ್ಕ್ಸ್ ಕಾರ್ಡ್ ಅಲ್ಲ, ರಾಹುಲ್ ದ್ರಾವಿಡ್ ಎದುರಿಗೆ ಬೌಲಿಂಗ್ ಮಾಡಲು ಬರುತ್ತಿದ್ದ ಬೌಲರ್‌ಗಳ ಸ್ಕೋರ್ ಕಾರ್ಡ್. ಹೌದು, ರಾಹುಲ್ ದ್ರಾವಿಡ್ ಅಂದ್ರೆ ಕ್ರಿಕೆಟ್ ಲೋಕದಲ್ಲಿ ಒಂದು ಭಯ ಇತ್ತು. ಎಲ್ಲರೂ ಯರ್ರಾಬಿರ್ರಿ ಬಾರಿಸಿ ರನ್ ಗಳಿಸಿ ಕ್ರಿಕೆಟ್ ಬೌಲರ್ ಎದೆಯಲ್ಲಿ ಭಯ ಹುಟ್ಟಿಸುತ್ತಿದ್ದರೆ, ಕನ್ನಡಿಗ ರಾಹುಲ್ ದ್ರಾವಿಡ್ ಮಾತ್ರ ರನ್ ಬಾರಿಸದೆ ಭಯವನ್ನ ಹುಟ್ಟು ಹಾಕುತ್ತಿದ್ದರು. ರಾಹುಲ್ ದ್ರಾವಿಡ್ ಅವರು ಎಂತಹದ್ದೇ ಬಾಲ್ ಬಂದರೂ ಅದನ್ನ ಮೂಲೆಗೆ ತಳ್ಳಿ ಕೂರಿಸುತ್ತಿದ್ದರು. ಇದೇ ಕಾರಣಕ್ಕೆ ರಾಹುಲ್ ದ್ರಾವಿಡ್ ಅವರ ಹೆಸರು ಕೇಳಿದರೆ ಹೆದರಿ ಕಣ್ಣೀರು ಹಾಕುತ್ತಿದ್ದರು ಬೌಲರ್ಸ್!
ಭಾರತ ತಂಡದ ಪರವಾಗಿ 344 ಏಕದಿನ, 164 ಟೆಸ್ಟ್ & 1 ಟಿ20 ಮ್ಯಾಚ್ ಸೇರಿದಂತೆ ಬರೋಬ್ಬರಿ 509 ಪಂದ್ಯಗಳನ್ನು ಆಡಿದ್ದರು ರಾಹುಲ್ ದ್ರಾವಿಡ್. ಕನ್ನಡಿಗನ ಈ ಸಾಧನೆಗೆ ಇಡೀ ಕ್ರಿಕೆಟ್ ಜಗತ್ತು ಭಾರಿ ಔದಾರ್ಯ ತೋರುವ ಜೊತೆಗೆ, ಸಲಾಂ ಹೊಡೆದಿತ್ತು. ನೂರಾರು ದಾಖಲೆಗಳನ್ನು ಹುಟ್ಟು ಹಾಕಿದ್ದರು ರಾಹುಲ್ ದ್ರಾವಿಡ್ ಅವರು. ಹೀಗಿದ್ದಾಗ ರಾಹುಲ್ ದ್ರಾವಿಡ್ ಮಗನ ಮೇಲೆ ಕೂಡ ಸಾಕಷ್ಟು ನಿರೀಕ್ಷೆ ಇತ್ತು. ಆರಂಭದಲ್ಲಿ ರಾಹುಲ್ ದ್ರಾವಿಡ್ ಮಗನ ಮೇಲಿನ ನಿರೀಕ್ಷೆಗಳೆಲ್ಲಾ ಹುಸಿಯಾಗಿದ್ದರೂ, ಈಗ ಭಾರಿ ದೊಡ್ಡ ಸಾಧನೆ ಮಾಡಿದ್ದಾರೆ!

ರಾಹುಲ್ ದ್ರಾವಿಡ್ ಮಗ ಈಗ ಕ್ಯಾಪ್ಟನ್!
ಹೌದು, ರಾಹುಲ್ ದ್ರಾವಿಡ್ ಅವರ ಮಗ ಬಹುದೊಡ್ಡ ಸಾಧನೆ ಮಾಡಿದ್ದಾರೆ. ಅಪ್ಪನಂತೆ ಮಗನೂ ಇತಿಹಾಸ ನಿರ್ಮಿಸಲು ಮುಂದೆ ನುಗ್ಗಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಇದೀಗ ರಾಹುಲ್ ದ್ರಾವಿಡ್ ಸಾಧನೆ ಮೀರಿಸಲು ಅವರ ಮಗ ಸುಮಿತ್ ದ್ರಾವಿಡ್ ಮುಂದೆ ನುಗ್ಗಿದ್ದಾರೆ. ನೋಡ ನೋಡುತ್ತಲೇ ಕ್ರಿಕೆಟ್‌ನ ಅಖಾಡದಲ್ಲಿ ಅಪ್ಪನ ನೆನಪು ಮಾಡಿಸುವ ಆಟ ಆಡುತ್ತಿರುವ ಸುಮಿತ್ ದ್ರಾವಿಡ್ ಇದೀಗ ನಾಯಕನ ಪಟ್ಟ ಅಂದ್ರೆ ಕ್ಯಾಪ್ಟನ್ ಕ್ಯಾಪ್ ಹಾಕಲು ಸಿದ್ಧರಾಗಿದ್ದಾರೆ.
ಕನ್ನಡ ನಾಡಿನ ತಂಡಕ್ಕೆ ಕ್ಯಾಪ್ಟನ್!
ಅಂದಹಾಗೆ ಇದೀಗ ಮುಂಬರುವ ವಿನೂ ಮಂಕಡ್ ಟ್ರೋಫಿಯಲ್ಲಿ ಕರ್ನಾಟಕ ತಂಡ ಕೂಡ ಅಬ್ಬರಿಸಲು ಸಜ್ಜಾಗಿದೆ. ಕರ್ನಾಟಕ ಅಂಡರ್-19 ತಂಡದ ಕ್ಯಾಪ್ಟನ್ ಆಗಿ, ಇದೀಗ ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ & ಪ್ರಧಾನ ಕೋಚ್ ಕೂಡ ಆಗಿದ್ದ ರಾಹುಲ್ ದ್ರಾವಿಡ್ ಅವರ ಮಗ ಅನ್ವಯ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಕನ್ನಡಿಗ ರಾಹುಲ್ ದ್ರಾವಿಡ್ ಕರ್ನಾಟಕ ತಂಡಕ್ಕೆ ಕೂಡ ಹಲವಾರು ವರ್ಷ ಕಾಲ ಆಟ ಆಡಿ ಸೇವೆ ಸಲ್ಲಿಸಿದ್ದರು. ಹೀಗಾಗಿ ಇದೀಗ ಅವರ ಪುತ್ರನಿಗೂ ದೊಡ್ಡ ಅವಕಾಶ ಸಿಕ್ಕಿದೆ, ಇದು ರಾಹುಲ್ ದ್ರಾವಿಡ್ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ನೀಡಿದೆ. ಅಲ್ಲದೆ ಭವಿಷ್ಯದಲ್ಲಿ ರಾಹುಲ್ ದ್ರಾವಿಡ್ ಅವರ ಮಗ ಅನ್ವಯ್ ದ್ರಾವಿಡ್ ಭಾರತ ತಂಡದ ಕೋಚ್ ಕೂಡ ಆಗಲಿ ಅಂತಾನೇ ಫ್ಯಾನ್ಸ್ ಈಗ ಹಾರೈಸುತ್ತಿದ್ದಾರೆ.












Click it and Unblock the Notifications