ರಾಹುಲ್ ದ್ರಾವಿಡ್ ಕ್ರಿಕೆಟ್ ದಾಖಲೆಗಳ ‘ಚಿನ್ನ’: ಇವರು ನಿರ್ಮಿಸಿದ ದಾಖಲೆ ಟಚ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ!
ರಾಹುಲ್ ದ್ರಾವಿಡ್.. ಬಹುಶಃ 1990ರ ಆಸುಪಾಸಿನಲ್ಲಿ ಹುಟ್ಟಿದ ಮಕ್ಕಳಿಗೆ ಈ ಹೆಸರನ್ನು ಕೇಳದ ದಿನವೇ ಇಲ್ಲ ಅಂತಾ ಕಾಣುತ್ತೆ. ಯಾಕಂದ್ರೆ 90ರ ದಶಕ ಹಾಗೂ 2000ರ ಆರಂಭದ ದಿನಗಳಲ್ಲಿ ರಾಹುಲ್ ದ್ರಾವಿಡ್ ಮಾಡಿದ್ದೇ ರೂಲ್ಸ್, ಚಚ್ಚಿದ್ದೇ ಶಾಟ್. ಹೀಗೆ ಕ್ರಿಕೆಟ್ ಜಗತ್ತು ರಾಹುಲ್ ದ್ರಾವಿಡ್ ಅವರ ಆಟ ನೋಡಿ ಬಾಯಿ ಮೇಲೆ ಬೆರಳು ಇಟ್ಟುಕೊಂಡು ನಿಂತಿತ್ತು ಎನ್ನಬಹುದು. ಆದರೆ ಈ ಆಟಗಾರ ದಿಢೀರ್ ನಿವೃತ್ತಿ ಘೋಷಿಸಿಬಿಟ್ಟರು!
ಈಗ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್, ಜಗತ್ತಿನಲ್ಲೇ ಅತ್ಯಂತ ಪ್ರಭಾವಿ ಕ್ರಿಕೆಟರ್ ಎನ್ನಬಹುದು. ಬೌಲರ್‌ಗಳಿಗೆ ಬೌಂಡರಿ ಬಾರಿಸದೆ ಬುದ್ದಿಯನ್ನ ಕಲಿಸುವುದು ಹೇಗೆ? ಅನ್ನೋದು ರಾಹುಲ್ ದ್ರಾವಿಡ್ ಅವರಿಗೆ ಚೆನ್ನಾಗಿ ಗೊತ್ತಿತ್ತು. ಇದೇ, ಇದೇ ಕಾರಣಕ್ಕೆ ರಾಹುಲ್ ದ್ರಾವಿಡ್ ಅವರನ್ನು ಕಂಡರೆ ಬೌಲರ್‌ಗಳಿಗೆ ಭಯವೋ ಭಯ. ಇಂತಿಪ್ಪ ರಾಹುಲ್ ದ್ರಾವಿಡ್ ಅವರು ನೂರಾರು ದಾಖಲೆ ನಿರ್ಮಾಣ ಮಾಡಿದ್ದಾರೆ. ಹೀಗೆ ದ್ರಾವಿಡ್ ನಿರ್ಮಾಣ ಮಾಡಿರುವ ಪ್ರಮುಖ ದಾಖಲೆಗಳ ಪಟ್ಟಿ ಇಲ್ಲಿದೆ ಮುಂದೆ ಓದಿ.

ರಾಹುಲ್ ದ್ರಾವಿಡ್ ದಾಖಲೆಗಳು ಇಲ್ಲಿವೆ
* 164 ಟೆಸ್ಟ್ ಪಂದ್ಯಗಳನ್ನ ಆಡಿದ್ದ ದಿ ವಾಲ್ ರಾಹುಲ್ ದ್ರಾವಿಡ್, 52.31 ಸರಾಸರಿಯಲ್ಲಿ 13 ಸಾವಿರದ 288 ರನ್ ಗಳಿಸಿದ್ದಾರೆ. ಈ ಪೈಕಿ 36 ಶತಕ & 63 ಅರ್ಧ ಶತಕ ಕೂಡ ಸೇರಿವೆ.
* 344 ಏಕದಿನ ಪಂದ್ಯಗಳಲ್ಲಿ 12 ಶತಕ ಮತ್ತು 83 ಅರ್ಧ ಶತಕ ಗಳಿಸಿ ಮಿಂಚಿದ್ದ ರಾಹುಲ್ ದ್ರಾವಿಡ್ ಅವರು 39.16 ರ ಸರಾಸರಿಯಲ್ಲಿ 10 ಸಾವಿರದ 889 ರನ್ ಗಳಿಸಿದ್ದರು.
* ಬ್ಯಾಟಿಂಗ್ ರೀತಿಯೇ ಕೀಪಿಂಗ್‌ನಲ್ಲೂ 'ಗೋಡೆ' ರೀತಿ ಇದ್ದ ರಾಹುಲ್ ದ್ರಾವಿಡ್ ಅವರು, ಒಟ್ಟು 406 ಕ್ಯಾಚ್ ಪಡೆದು ಟೆಸ್ಟ್ & ಏಕದಿನ ಮಾದರಿಯಲ್ಲಿ ಸ್ಟಂಪಿಂಗ್ ವಿಚಾರದಲ್ಲಿ ಕೂಡ ಯಾರೂ ಮುರಿಯಲು ಆಗದ ದಾಖಲೆ ನಿರ್ಮಿಸಿದ್ದಾರೆ.
* ದ್ರಾವಿಡ್ ಟೆಸ್ಟ್ ವೃತ್ತಿಜೀವನದಲ್ಲಿ 44 ಸಾವಿರದ 152 ನಿಮಿಷ ಅಂದ್ರೆ ಒಟ್ಟು 735 ಗಂಟೆಗಳ 52 ನಿಮಿಷಗಳನ್ನು ಕ್ರೀಸ್‌ನಲ್ಲಿ ಕಳೆದಿದ್ದಾರೆ. ಅಂದ್ರೆ ಸುಮಾರು 735 ಗಂಟೆಗಳ ಕಾಲ ಬ್ಯಾಟ್ ಮಾಡಿದ ದಾಖಲೆ ಬರೆದಿದ್ದಾರೆ.
* ಸಾಮಾನ್ಯವಾಗಿ ಒಬ್ಬ ಕ್ರಿಕೆಟರ್ ತನ್ನ ವೃತ್ತಿ ಜೀವನದಲ್ಲಿ ಎಷ್ಟು ಬಾಲ್ ಎದುರಿಸಬಹುದು ಹೇಳಿ? ಒಂದಲ್ಲ, ಎರಡಲ್ಲ ಬರೋಬ್ಬರಿ 30,000ಕ್ಕೂ ಹೆಚ್ಚು ಎಸೆತ ಎದುರಿಸಿರುವ ಜಗತ್ತಿನ ಏಕೈಕ ಬ್ಯಾಟ್ಸ್‌ಮನ್ ದ್ರಾವಿಡ್ ಆಗಿದ್ದಾರೆ. 31 ಸಾವಿರದ 258 ಎಸೆತಗಳನ್ನು ಆಡಿದ್ದಾರೆ.
* ವಿಕೆಟ್ ಕೀಪರ್ ಹೊರತುಪಡಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಮೊದಲ ಆಟಗಾರ ದ್ರಾವಿಡ್. ಅವರು ವೃತ್ತಿ ಜೀವನದಲ್ಲಿ ಒಟ್ಟು 210 ಕ್ಯಾಚ್ ಪಡೆದಿದ್ದರು. ಈ ರೀತಿ ಅಪರೂಪದ ಸಾಧನೆ ಮಾಡಿದ ಮತ್ತೊಬ್ಬ ಆಟಗಾರ ಇಲ್ಲ.
* ರಾಹುಲ್ ದ್ರಾವಿಡ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ 286 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಗೋಲ್ಡನ್ ಡಕ್ ಆಗದ ದಾಖಲೆ ಬರೆದಿದ್ದಾರೆ. ಈ ಮೂಲಕ ಬೌಲರ್‌ಗಳಿಗೆ ರಾಹುಲ್ ದ್ರಾವಿಡ್ ಸಿಕ್ಕಾಪಟ್ಟೆ ಕಾಡಿದ್ದರು.

ಒಟ್ನಲ್ಲಿ ಇದಿಷ್ಟೆ ಅಲ್ಲ ಇನ್ನೂ ಅನೇಕ ದಾಖಲೆಗಳು ರಾಹುಲ್ ದ್ರಾವಿಡ್ ಅವರ ಹೆಸರಲ್ಲಿ ಇವೆ. ಅದರಲ್ಲೂ ರಾಹುಲ್ ದ್ರಾವಿಡ್ ಬ್ಯಾಟ್ ಹಿಡಿದು ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟರು ಅಂತಾ ಇಟ್ಟುಕೊಳ್ಳಿ, ಬೌಲರ್‌ಗಳಿಗೆ ನಡುಕ ಶುರುವಾಗುವ ಸಮಯ ಕೂಡ ಇತ್ತು. ಪಾಕ್ ಅಂದರೆ, ಪಾಕಿಸ್ತಾನದ ಆಟಗಾರರು ರಾಹುಲ್ ದ್ರಾವಿಡ್ ಅವರನ್ನು ನೋಡಿದರೆ ಹೆದರುವ ಪರಿಸ್ಥಿತಿ ಇತ್ತು. ಯಾಕಂದ್ರೆ ಹತ್ತಾರು ಅಡಿ ದೂರದಿಂದ ಓಡಿ ಬಂದು ಬೌಲ್ ಮಾಡುತ್ತಿದ್ದ ಬೌಲರ್‌ಗಳ ಶ್ರಮವನ್ನು, ಕೇವಲ ಒಂದೇ ಟಚ್‌ನಲ್ಲಿ ದ್ರಾವಿಡ್ ಹಾಳು ಮಾಡುವ ಶಕ್ತಿಯನ್ನ ಮತ್ತು ಶ್ರದ್ಧೆಯನ್ನ ಹೊಂದಿದ್ದರು.
ಈ ಮೂಲಕ ಭಾರತಕ್ಕೆ ಹೀರೋ ಆಗಿ, ಪಾಕಿಸ್ತಾನ ಸೇರಿದಂತೆ ಹತ್ತಾರು ಎದುರಾಳಿ ಟೀಂಗೆ ಕಾಟ ಕೊಟ್ಟಿದ್ದರು ದ್ರಾವಿಡ್. ಹೀಗೆ ರಾಹುಲ್ ದ್ರಾವಿಡ್ ಅವರಿಗೆ ದ್ರಾವಿಡ್ ಅವರೇ ಸಾಟಿ ಎನ್ನಬಹುದು. ಹಾಗೇ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ಜಗತ್ತಿಗೆ ಹಾಕಿಕೊಟ್ಟ ಹೊಸ ಅಡಿಪಾಯ ಎಂದೆಂದಿಗೂ ಮಾದರಿ ಎನ್ನಬಹುದು.












Click it and Unblock the Notifications