ಆರ್‌ಸಿಬಿ ಬಗ್ಗೆ ಮಾತನಾಡದಿದ್ರೆ ತಿಂದಿದ್ದು ಕರಗಲ್ವಾ?; ಟ್ರೋಫಿ ಗೆದ್ದಿದ್ದು ಅದೃಷ್ಟ ಎಂದ ಅಶ್ವಿನ್‌ಗೆ ನೆಟ್ಟಿಗರ ಕ್ಲಾಸ್‌

R.Ashwin: ಬೇರೆಯವರ ಬಗ್ಗೆ ತಿಂದಿದ್ದು ಕರಗಲ್ಲ ಎನ್ನುವ ಮಾತಿನಂತೆ ಆರ್‌.ಅಶ್ವಿನ್ ಹಾಗಾಗ ಆರ್‌ಸಿಬಿ ಬಗ್ಗೆ ಒಂದಲ್ಲ ಒಂದು ಹೇಳಿಕೆ ನೀಡಿ ನೆಟ್ಟಿಗರ ಕೆಂಗಣಿಗೆ ಗುರಿಯುತ್ತಲಿತ್ತಾರೆ. ಹಾಗೆಯೇ ಇದೀಗ ಮತ್ತೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಚೊಚ್ಚಲ ಐಪಿಎಲ್‌ ಟ್ರೋಫಿ ಎತ್ತಿದ ಕುರಿತು ಮಾತನಾಡಿ ಸುದ್ದಿಯಲ್ಲಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಜಯಗಳಿಸಿ ತನ್ನ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆದರೆ, ಈ ಪಂದ್ಯದ ಕುರಿತು ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಒಂದು ಮಹತ್ವದ ಹೇಳಿಕೆ ನೀಡಿದ್ದಾರೆ.

R Ashwin Sparks Debate Over RCB Indian Premier League 2025 Title Win Fans React Strongly Viral

ಆರ್‌.ಅಶ್ವಿನ್ ಹೇಳಿದ್ದೇನು?

"ಪಂಜಾಬ್ ಕಿಂಗ್ಸ್ ತಂಡದ ಯುವ ಬ್ಯಾಟರ್ ಪ್ರಿಯಾಂಶ್ ಆರ್ಯ ಆ ಸೀಸನ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದರು. ಫೈನಲ್ ಪಂದ್ಯದಲ್ಲಿ ಅವರು ಕ್ರೀಸ್‌ನಲ್ಲಿ ಉಳಿದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು," ಎಂದು ರವಿಚಂದ್ರನ್ ಅಶ್ವಿನ್ ಅವರು ಹೇಳಿದ್ಧಾರೆ.

'ಫಿಲ್‌ ಸಾಲ್ಸ್‌ ಕ್ಯಾಚ್ ಬಿಡಬೇಕಿತ್ತು'

ಆರ್‌ಸಿಬಿಯ ಫಿಲ್ ಸಾಲ್ಟ್ ಹಿಡಿದ ಆ ಅದ್ಭುತ ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಿಸಿತು. ಪ್ರಿಯಾಂಶ್ ಆರ್ಯ 24 ರನ್ ಗಳಿಸಿದ್ದಾಗ ಔಟ್ ಆಗದಿದ್ದರೆ, ಅವರು ಪಂದ್ಯವನ್ನು ಆರ್‌ಸಿಬಿಯಿಂದ ಕಿತ್ತುಕೊಳ್ಳುತ್ತಿದ್ದರು. ಆರ್‌ಸಿಬಿ ಈ ಪಂದ್ಯವನ್ನು ಕೇವಲ 6 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ಪ್ರಿಯಾಂಶ್ ಅವರಂತಹ ಸ್ಫೋಟಕ ಬ್ಯಾಟರ್‌ ಕ್ರೀಸ್‌ನಲ್ಲಿದ್ದಿದ್ದರೆ ಈ ಗುರಿಯನ್ನು ಬೆನ್ನಟ್ಟುವುದು ಪಂಜಾಬ್‌ಗೆ ಕಷ್ಟವಾಗುತ್ತಿರಲಿಲ್ಲ," ಎಂದು ಹೇಳಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ತನ್ನ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿದೆ. ಕುತೂಹಲ ಕೆರಳಿಸಿದ್ದ ಈ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆಯಿತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ಬ್ಯಾಟರ್‌ಗಳ ಸಮಯೋಚಿತ ಆಟದಿಂದ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿತು.

ಈ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು ಒಂದು ಹಂತದಲ್ಲಿ ಪ್ರಿಯಾಂಶ್ ಆರ್ಯ ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಗೆಲುವಿನ ಹತ್ತಿರ ಬಂದಿತ್ತು. ಆದರೆ, ಆರ್‌ಸಿಬಿ ಬೌಲರ್‌ಗಳು ಮತ್ತು ಫೀಲ್ಡರ್‌ಗಳ ಅದ್ಭುತ ಚಾಕಚಕ್ಯತೆಯಿಂದ ಪಂದ್ಯವು ಬೆಂಗಳೂರಿನ ಪರವಾಗಿ ತಿರುಗಿತು. ವಿಶೇಷವಾಗಿ ಫಿಲ್ ಸಾಲ್ಟ್ ಹಿಡಿದ ನಿರ್ಣಾಯಕ ಕ್ಯಾಚ್ ಮತ್ತು ಅಂತಿಮ ಓವರ್‌ಗಳಲ್ಲಿ ಬೌಲರ್‌ಗಳು ತೋರಿದ ಸಂಯಮ ಗೆಲುವಿಗೆ ಪ್ರಮುಖ ಕಾರಣವಾಯಿತು.

ಆರ್‌.ಅಶ್ವಿನ್‌ಗೆ ನೆಟ್ಟಿಗರ ಕ್ಲಾಸ್

ಈ ಮೂಲಕ ಕೊನೆಗೂ 'ಈ ಸಲ ಕಪ್ ನಮ್ದೇ' ಎನ್ನುತ್ತಿದ್ದ ಅಭಿಮಾನಿಗಳ ಘೋಷಣೆ ಕೊನೆಗೂ 'ಈ ಸಲ ಕಪ್ ನಮ್ದಾಯ್ತು' ಎಂದು ಬದಲಾಯಿತು. ಆರ್‌ಸಿಬಿ ಟ್ರೋಫಿ ಗೆಲುವಿನ ಸಂಭ್ರಮವನ್ನು ಬರೀ ಕರ್ನಾಟಕ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ ಮಾಡಿದರು. ಇದೀಗ ಆರ್‌ಸಿಬಿ ಟ್ರೋಫಿ ಗೆದ್ದ ಬಗ್ಗೆ ಅಶ್ವಿನ್ ಮಾತನಾಡಿ ನೆಟ್ಟಿಗರನ್ನು ಕೆರಳಿಸಿದ್ದಾರೆ. 'ನಿಮಗೆ ಆರ್‌ಸಿಬಿ ಬಗ್ಗೆ ಮತನಾಡದಿದ್ದರೆ ತಿಂದಿದ್ದು ಕರಗಲ್ವಾ," ಎಂದು ನೆಟ್ಟಿಗರು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಈ ಗೆಲುವು ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಬದಲಾಗಿ ಇಡೀ ತಂಡದ ಶ್ರಮವಾಗಿತ್ತು. ವಿರಾಟ್ ಕೊಹ್ಲಿಯವರ ಮಾರ್ಗದರ್ಶನ, ಯುವ ಆಟಗಾರರ ಮಿಂಚಿನ ಪ್ರದರ್ಶನ ಮತ್ತು ಆಡಳಿತ ಮಂಡಳಿಯ ಸರಿಯಾದ ತಂತ್ರಗಾರಿಕೆ ಈ ಯಶಸ್ಸಿಗೆ ಭದ್ರ ಬುನಾದಿ ಹಾಕಿತು. ಹದಿನೆಂಟು ಸೀಸನ್‌ಗಳ ಸೋಲು-ಗೆಲುವಿನ ಹಾದಿಯಲ್ಲಿ ಆರ್‌ಸಿಬಿ ಅಭಿಮಾನಿಗಳು ನೀಡಿದ ಬೆಂಬಲಕ್ಕೆ ಈ ಟ್ರೋಫಿ ಅರ್ಹ ಗೌರವ ಸಲ್ಲಿಸಿದೆ. ಒಟ್ಟಾರೆಯಾಗಿ, 2025ರ ಐಪಿಎಲ್ ಫೈನಲ್ ಆರ್‌ಸಿಬಿ ಪಾಲಿಗೆ ಬಂಗಾರದ ಅಕ್ಷರಗಳಲ್ಲಿ ಬರೆದಿಡುವಂತಹ ಮೈಲಿಗಲ್ಲಾಗಿದೆ.

ಒಟ್ಟಿನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿದ್ದರೂ, ಪ್ರಿಯಾಂಶ್ ಆರ್ಯ ಅವರ ವಿಕೆಟ್ ಪಡೆಯದಿದ್ದರೆ ಆರ್‌ಸಿಬಿಯ 18 ವರ್ಷಗಳ ಕಾಯುವಿಕೆ ಇನ್ನೂ ಮುಂದುವರಿಯುತ್ತಿತ್ತು. ಅದೃಷ್ಟದಿಂದ ಗೆದ್ದಿದೆ ಎನ್ನುವ ರೀತಿಯಲ್ಲೇ ರವಿಚಂದ್ರನ್ ಅಶ್ವಿನ್ ಅವರು ಹೇಳಿಕೆ ನೀಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+