IPL 2025: ಅದು ಕೆಟ್ಟ ಫ್ರಾಂಚೈಸಿ! ಕೃಷ್ಣಪ್ಪ ಗೌತಮ್ ಹೇಳಿಕೆಯನ್ನು ಒಪ್ಪಿದ ಆರ್ಸಿಬಿ ಮಾಜಿ ಕ್ರಿಕೆಟ್ ಡೈರೆಕ್ಟರ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಎಲ್ಲಾ ಫ್ರಾಂಚೈಸಿಗಳು ಉತ್ತಮ ತಂಡವನ್ನು ಕಟ್ಟಿದ್ದು, ವಿಶ್ವದ ಶ್ರೀಮಂತ ಟೂರ್ನಿಗೆ ಸಿದ್ಧತೆ ಆರಂಭಿಸಿವೆ. 10 ಫ್ರಾಂಚೈಸಿಗಳು ಕೂಡ ಮೆಗಾ ಹರಾಜಿಗೆ ಮುನ್ನ ಹಲವು ಆಟಗಾರರನ್ನು ಉಳಿಸಿಕೊಂಡು ಮಿಕ್ಕ ಆಟಗಾರರನ್ನು ಬಿಡುಗಡೆ ಮಾಡಿವೆ. ಬಿಡುಗಡೆ ಮಾಡಿದ ಆಟಗಾರರಿಗೆ ಧನ್ಯವಾದ ಕೂಡ ತಿಳಿಸಿವೆ. ಇದೆಲ್ಲದರ ಮಧ್ಯೆ ಕನ್ನಡಿಗ ಕೃಷ್ಣಪ್ಪ ಗೌತಮ್ ನೀಡಿದ್ದ ಹೇಳಿಕೆ ಮತ್ತೆ ಮುನ್ನಲೆಗೆ ಬಂದಿದೆ.
ಕರ್ನಾಟಕದ ಕ್ರಿಕೆಟಿಗ ಕೃಷ್ಣಪ್ಪ ಗೌತಮ್, ಐಪಿಎಲ್‌ನಲ್ಲಿ ಹಲವು ತಂಡಗಳಿಗೆ ಆಡಿದ್ದಾರೆ, ಹಲವು ವರ್ಷ ಪಂಜಾಬ್ ಕಿಂಗ್ಸ್ ತಂಡಕ್ಕಾಗಿ ಕೂಡ ಆಡಿದ್ದಾರೆ. ಮೆಗಾ ಹರಾಜಿಗೆ ಮೊದಲು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ನನಗೆ ಪಂಜಾಬ್ ಕಿಂಗ್ಸ್ ತಂಡಕ್ಕಾಗಿ ಆಡಲು ಇಷ್ಟವಿಲ್ಲ, ಅವರು ನನ್ನನ್ನು ಖರೀದಿಸಿದಿರೆ 100% ಅನ್ನು ಫ್ರಾಂಚೈಸಿಗೆ ನೀಡಲು ಆಗುವುದಿಲ್ಲ ಎಂದು ಹೇಳಿದ್ದರು.

ಇದು ಕ್ರಿಕೆಟ್‌ಗೆ ಮಾತ್ರ ಸಂಬಂಧಿಸಿದ್ದಲ್ಲ ಎಂದು ಹೇಳಿರುವ ಅವರು, ನಾನು ಮತ್ತೊಮ್ಮೆ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಕೃಷ್ಣಪ್ಪ ಗೌತಮ್ ಹೇಳಿಕೆಗೆ ಇದೀಗ ಆರ್ ಸಿಬಿ ಕ್ರಿಕೆಟ್‌ನ ಮಾಜಿ ನಿರ್ದೇಶಕ ಮೈಕ್ ಹೆಸ್ಸನ್ ಸಹಮತ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧ ಟೀಕೆ
ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕರಾಗಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಫ್ರಾಂಚೈಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ನನ್ನನ್ನು ಫ್ರಾಂಚೈಸಿ ಉತ್ತಮವಾಗಿ ನಡೆಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದರು. ಕೃಷ್ಣಪ್ಪ ಗೌತಮ್ ಕೂಡ ತಂಡದ ಸಂಸ್ಕೃತಿ ವಿರುದ್ಧ ಮಾತನಾಡಿದ್ದು ಇದು ಕ್ರಿಕೆಟ್‌ಗೆ ಸಂಬಂಧಿಸಿದ್ದಲ್ಲ, ಅಥವಾ ತಂಡದ ಪ್ರದರ್ಶನಕ್ಕೂ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್‌ನ ಮಾಜಿ ನಿರ್ದೇಶಕ ಮೈಕ್ ಹೆಸ್ಸನ್ ಗೌತಮ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆರ್ ಸಿಬಿ ಜೊತೆಗಿನ ತಮ್ಮ ಅವಧಿಯನ್ನು ನೆನಪಿಸಿಕೊಳ್ಳುವ ಅವರು, 2019ರಲ್ಲಿ ಪಂಜಾಬ್ ಕಿಂಗ್ಸ್‌ನ ಮುಖ್ಯ ತರಬೇತುದಾರರಾಗಿ ಕೆಲಸ ಮಾಡಿದ್ದರು. ಗೌತಮ್ ನಂತರ ಫ್ರಾಂಚೈಸ್‌ಗೆ ಸೇರಿದ್ದರು, ಇಬ್ಬರು ಒಟ್ಟಿಗೆ ಕೆಲಸ ಮಾಡದೇ ಇದ್ದರೂ, ಅವರು ಹೇಳಿದ್ದನ್ನು ಹೆಸ್ಸನ್ ಒಪ್ಪಿಕೊಂಡಿದ್ದಾರೆ.
ಹೆಸ್ಸನ್ ಒಂದೇ ವರ್ಷದ ಬಳಿಕ ಪಂಜಾಬ್ ಕಿಂಗ್ಸ್ ಅನ್ನು ತೊರೆದರು. ಕ್ರಿಕೆಟ್ ಡಾಟ್ ಕಾಮ್‌ನಿಂದ ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ರೀಲ್ ಅನ್ನು ಮೈಕ್ ಹೆಸ್ಸನ್ ಇಷ್ಟಪಟ್ಟಿದ್ದಾರೆ.
2025ರ ಐಪಿಎಲ್‌ಗೆ ಪಂಜಾಬ್ ಕಿಂಗ್ಸ್
ಶಶಾಂಕ್ ಸಿಂಗ್, ಪ್ರಭ್‌ಸಿಮ್ರಾನ್ ಸಿಂಗ್, ಅರ್ಶ್‌ದೀಪ್ ಸಿಂಗ್, ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಾಹಲ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ನೆಹಾಲ್ ವಧೇರಾ, ಹರ್‌ಪ್ರೀತ್ ಬ್ರಾರ್, ವಿಷ್ಣು ವಿನೋದ್, ವಿಜಯ್‌ಕುಮಾರ್ ವೈಶಾಕ್, ಯಶ್ ಠಾಕೂರ್, ಮಾರ್ಕೊ ಜಾನ್ಸೆನ್, ಜೋಶ್ ಇಂಗ್ಲಿಸ್, ಲಾಕಿ ಹರ್ಮತ್, ಲಾಕ್ ಝೆರ್ಗುಲ್ಲಾ, ಲಾಕ್ , ಕುಲದೀಪ್ ಸೇನ್, ಪ್ರಿಯಾಂಶ್ ಆರ್ಯ, ಆರನ್ ಹಾರ್ಡಿ, ಮುಶೀರ್ ಖಾನ್, ಸೂರ್ಯಾಂಶ್ ಶೆಡ್ಜ್, ಕ್ಸೇವಿಯರ್ ಬಾರ್ಟ್ಲೆಟ್, ಪೈಲಾ ಅವಿನಾಶ್, ಪ್ರವೀಣ್ ದುಬೆ.












Click it and Unblock the Notifications