IPL vs PSL: ರೋಹಿತ್ ಶರ್ಮಾಗೆ ಅವಮಾನ ಮಾಡಿದ ಪಿಎಸ್‌ಎಲ್ ಫ್ರಾಂಚೈಸ್; ವ್ಯಾಪಕ ಆಕ್ರೋಶ

ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆರಂಭಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಶನಿವಾರದಿಂದ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆರ್ ಸಿಬಿ ಮತ್ತು ಕೆಕೆಆರ್ ಮುಖಾಮುಖಿಯಾಗಲಿವೆ. ಈ ಬಾರಿ ಐಪಿಎಲ್‌ಗೆ ಪಾಕಿಸ್ತಾನ ಸೂಪರ್ ಲೀಗ್‌ ಸವಾಲೊಡ್ಡಲು ಸಜ್ಜಾಗಿದೆ. ಐಪಿಎಲ್‌ ಜಗತ್ತಿನ ಶ್ರೀಮಂತ ಲೀಗ್‌, ಐಪಿಎಲ್ ಇದ್ದಾಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ಕೂಡ ಕಡಿಮೆ ನಡೆಯುತ್ತವೆ.

ಇದೀಗ ಐಪಿಎಲ್‌ಗೆ ಟಕ್ಕರ್ ಕೊಡಲು ಪಾಕಿಸ್ತಾನ ಮುಂದಾಗಿದ್ದು, ಯಾವ ಮಟ್ಟಿಗೆ ಯಶಸ್ಸು ಕಾಣಲಿದೆ ಎನ್ನುವುದನ್ನು ನೋಡಬೇಕಿದೆ. ಆದರೆ ಪಾಕಿಸ್ತಾನ ಸೂಪರ್ ಲೀಗ್‌ನ ಫ್ರಾಂಚೈಸಿಯೊಂದು ಇದೀಗ ರೋಹಿತ್ ಶರ್ಮಾಗೆ ಅವಮಾನ ಮಾಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Psl pakistan t20 franchise controversy rohit sharma video

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಪಾಕಿಸ್ತಾನಿ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಅವರ ಇಂಗ್ಲಿಷ್ ಭಾಷೆಯನ್ನು ಅವಮಾನಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಗೊಂಡ ಕೆಲವೇ ದಿನಗಳಲ್ಲಿ, ಮತ್ತೊಂದು ವಿಡಿಯೋ ಅಭಿಮಾನಿಗಳಿಗೆ ಸಿಟ್ಟು ಬರುವಂತೆ ಮಾಡಿದೆ.

ರೋಹಿತ್ ಶರ್ಮಾಗೆ ಅವಮಾನ

ಪಾಕಿಸ್ತಾನ ಸೂಪರ್ ಲೀಗ್ ಫ್ರಾಂಚೈಸಿ ಮುಲ್ತಾನ್ ಸುಲ್ತಾನ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಭಾರತದ ನಾಯಕ ರೋಹಿತ್ ಶರ್ಮಾ ಅವರ ಪತ್ರಿಕಾಗೋಷ್ಠಿಯ ವಾಯ್ಸ್‌ಓವರ್ ಅನ್ನು ಬಳಕೆ ಮಾಡಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಚಾಂಪಿಯನ್ಸ್ ಟ್ರೋಫಿ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮಾ ಅವರ ಧ್ವನಿಯನ್ನು ಬಳಕೆ ಮಾಡಿಕೊಂಡಿದ್ದು ಪಿಎಸ್‌ಎಲ್ 2025 ಟ್ರೋಫಿಯನ್ನು ಪರಿಚಯಿಸಲಾಗಿದೆ. ಇದಕ್ಕೆ ಗೊಂಬೆಯನ್ನು ಬಳಸಿಕೊಂಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ದಪ್ಪಗಿರುವ ಗೊಂಬೆಯಾಕೃತಿಯನ್ನು ಬಳಕೆ ಮಾಡುವ ಮೂಲಕ ಬಾಡಿ ಶೇಮಿಂಗ್ ಮಾಡಲಾಗಿದೆ ಎಂದು ಅಭಿಮಾನಿಗಳು ಸಿಟ್ಟಾಗಿದ್ದಾರೆ.

ಏಪ್ರಿಲ್ 11ರಿಂದ ಪಿಎಸ್‌ಎಲ್‌

ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ಸೀಸನ್ 10 ಏಪ್ರಿಲ್ 11 ರಿಂದ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಸ್ಲಾಮಾಬಾದ್ ಯುನೈಟೆಡ್ ಎರಡು ಬಾರಿಯ ಚಾಂಪಿಯನ್ ಲಾಹೋರ್ ಖಲಂದರ್ಸ್‌ ವಿರುದ್ಧ ಸೆಣೆಸಲಿದೆ. ಆರು ತಂಡಗಳನ್ನೊಲಗೊಂಡ ಪಮದ್ಯಾವಳಿ ಏಪ್ರಿಲ್ 11 ರಿಂದ ಮೇ 18 ರವರೆಗೆ ನಡೆಯಲಿದೆ. ಒಟ್ಟು 34 ಪಂದ್ಯಗಳು ನಡೆಯಲಿದ್ದು, ಲಾಹೋರ್‌ನ ಗಡಾಫಿ ಕ್ರೀಡಾಂಗಣವು ಎರಡು ಎಲಿಮಿನೇಟರ್‌ಗಳು ಮತ್ತು ಮೇ 18 ರಂದು ಫೈನಲ್ ಸೇರಿದಂತೆ 13 ಪಂದ್ಯಗಳನ್ನು ಆಯೋಜಿಸಲಿದೆ.

ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿ ಕೈಸುಟ್ಟುಕೊಂಡಿರುವ ಪಾಕಿಸ್ತಾನ, ಇದೀಗ ಐಪಿಎಲ್‌ ನಡೆಯುವಾಗಲೇ ಪಿಎಸ್‌ಎಲ್ ಆಯೋಜನೆ ಮಾಡುವ ಸಾಹಸಕ್ಕೆ ಮುಂದಾಗಿದ್ದು, ಯಶಸ್ಸು ಪಡೆಯುವುದು ಅನುಮಾನ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+