RCB: ಐಪಿಎಲ್ 2026 ಉದ್ಘಾಟನಾ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ 11: ಈ ಸ್ಥಾನಕ್ಕೆ ಕನ್ನಡಿಗ ಫಿಕ್ಸ್
IPL 2026 RCB Playing 11: ಆರ್‌ಸಿಬಿ ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತ್ತು. ಹಾಗೆಯೇ ಮುಂದಿನ ಬಾರಿಯೂ ಕಪ್ ತನ್ನದಾಗಿಸಿಕೊಳ್ಳುವತ್ತ ಗಮನಹರಿಸಿದೆ. ಇದೇ ಉದ್ದೇಶದಿಂದ ಮಿನಿ ಹರಾಜಿನಲ್ಲಿ 8 ಆಟಗಾರರನ್ನು ಖರೀದಿಸಿ ತಂಡವನ್ನು ಮತ್ತಷ್ಟು ಬಲಿಷ್ಠಪಡಿಸಿಕೊಂಡಿದೆ. ಹಾಗಾದ್ರೆ, 2026ರ ಉದ್ಘಾಟನಾ ಪಂದಕ್ಕೆ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲಲು ಪ್ರಮುಖ ಕಾರಣವಾಗಿದ್ದೇ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರಿದ್ದು. ಇದೀಗ ತಂಡವನ್ನು ಮತ್ತಷ್ಟು ಬಲಿಷ್ಠಪಡಿಸಿಕೊಂಡಿರುವ ಆರ್‌ಸಿಬಿ ಮುಂದಿನ 19ನೇ ಆವೃತ್ತಿಯಲ್ಲೂ ಚಾಂಪಿಯನ್ ಆಗಲೇಬೇಕೆಂಬ ಪಣ ತೊಟ್ಟಿದೆ. ಹಾಗಾದ್ರೆ, ಉದ್ಘಾಟನಾ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಬಹುತೇಕರಲ್ಲಿ ಇರುತ್ತದೆ. ಪಟ್ಟಿ ಇಲ್ಲಿದೆ ಗಮನಿಸಿ.

ಬೆಂಗಳೂರು ಫ್ರಾಂಚೈಸಿಯು ಐಪಿಎಲ್ 2026 ಮಿನಿ ಹರಾಜಿನಲ್ಲಿ ಮುಂದಾಲೋಚನೆ ದೃಷ್ಟಿಯಿಂದಲೇ 8 ಹೊಸ ಆಟಗಾರರನ್ನು ಕೊಂಡುಕೊಂಡಿದೆ. ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜಾಕೋಬ್ ಡಫ್ಫಿ, ಜೋರ್ಡಾನ್ ಕಾಕ್ಸ್, ಸಾತ್ವಿಕ್ ದೇಸ್ವಾಲ್, ವಿಕಿ ಓಸ್ಟ್ವಾಲ್, ಕನಿಷ್ಕ್ ಚೌಹಾಣ್, ವಿಹಾನ್ ಮಲ್ಹೋತ್ರಾ ಅವರನ್ನು ಸ್ವಾಗತಿಸಿದೆ. ಇದರಲ್ಲಿ ಒಬ್ಬರು ದೇವದತ್ ಪಡಿಕ್ಕಲ್ ಸ್ಥಾನಕ್ಕೆ ಬರಲಿದ್ದಾರೆ ಎನ್ನುವ ಮಾಹಿತಿಯಿದೆ.
ದೇವದತ್ ಪಡಿಕ್ಕಲ್ ಸ್ಥಾನದಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಆಡಿಸುವ ಸಾಧ್ಯತೆಯಿದೆ. ಆದರೆ, ಈಗಾಗಲೇ ಪಡಿಕ್ಕಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಟಾಪ್ ಆರ್ಡ್‌ರ್‌ನಲ್ಲಿ ಸ್ಫೋಟಕ ಬ್ಯಾಟ್ ಮಾಡಿ ಎದುರಾಳಿಗಳಿಗೆ ಬೆವರಿಳಿಸಿದ ಉದಾಹರಣೆಗಳಿವೆ. ಆದರೂ, ಸಹ ಇವರ ಬದಲಿಗೆ ವೆಂಕಟೇಶ್ ಅಯ್ಯರ್ ಅವರನ್ನು ತರುವ ಪ್ಲ್ಯಾನ್ ಮಾಡಿಕೊಂಡಿರುವುದರ ಹಿಂದಿದೆ ಬಿಗ್ ಫ್ಲ್ಯಾನ್.
ಅಸಲಿ ಸತ್ಯ ಏನಂದ್ರೆ, ಕನ್ನಡಿಗ ದೇವ್ ಅವರು ಗಾಯದಿಂದ ಹೊರಗುಳಿದ ಸಂದರ್ಭದಲ್ಲಿ ಆ ಸ್ಥಾನ ತುಂಬಬಲ್ಲ ಆಟಗಾರರನ್ನು ಹುಡುಕಾಟದಲ್ಲಿ ಆರ್‌ಸಿಬಿ ಇತ್ತು. ಅದರಂತೆಯೇ ಮಿನಿ ಹರಾಜಿನಲ್ಲಿ ಈ ಕ್ರಮಾಂಕದಲ್ಲಿ ಆಡಬಲ್ಲ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ.
ವೆಂಕಟೇಶ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಂಡರೂ, ದೇವದತ್ ಪಡಿಕ್ಕಲ್ ತಮ್ಮ 3ನೇ ಸ್ಥಾನವನ್ನು ಉಳಿಸಿಕೊಳ್ಳಬಹುದು. ಕಳೆದ 12 ತಿಂಗಳುಗಳಿಂದ ದೇಶೀಯ ಕ್ರಿಕೆಟ್‌ನಲ್ಲಿ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅಗತ್ಯ ಇದ್ದರೆ ಮಾತ್ರ ಬದಲಾವಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಆರ್‌ಸಿಬಿ ಸಾಂಭವ್ಯ ಪ್ಲೇಯಿಂಗ್ 11: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿ.ಕೀ.), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
ಈ ಬಾರಿ ಇದ್ದ ಆಟಗಾರರೇ ಮುಂದಿನ ಬಾರಿಯೂ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾಕಂದ್ರೆ, ಅಷ್ಟರ ಮಟ್ಟಿಗೆ ಸೆಟ್ ಆಗಿಬಿಟ್ಟಿದೆ ತಂಡ. ಬ್ಯಾಟಿಂಗ್, ಬೌಲಿಂಗ್ ಫೀಲ್ಡಿಂಗ್‌ನಲ್ಲೂ ಉತ್ತಮ ಪ್ರದರ್ಶನ ತೋರಿದ್ದಾರೆ. ಒಂದು ವೇಳೆ ಬದಲಾವಣೆಗಳು ಆದ್ರೆ ಸಣ್ಣ ಮಟ್ಟದಲ್ಲಿ ಆಗಬಹುದು ಎಂದು ಹೇಳಲಾಗುತ್ತಿದೆ. ಇನ್ನೂ ಐಪಿಎಲ್ 19ನೇ ಆವೃತ್ತಿಯು ಮುಂಬರುವ ಮಾರ್ಚ್ 26, 2026ರಿಂದ ಆರಂಭ ಆಗಲಿದ್ದು, ಮೇ 31ರವರೆಗೆ ನಡೆಯಲಿದೆ. ಆರ್‌ಸಿಬಿ ಉದ್ಘಾಟನಾ ಪಂದ್ಯ ಆಡಲಿದೆ.
ಆರ್‌ಸಿಬಿ ತಂಡದ ಆಟಗಾರರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್ (ನಾಯಕ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಝಲ್‌ವುಡ್, ಸುಯೇಶ್ ಶರ್ಮಾ, ಅಭಿನಂದನ್ ಸಿಂಗ್, ಜಾಕೋಬ್ ಬೆಥೆಲ್, ನುವಾನ್ ತುಷಾರ, ರಸಿಖ್ ಸಲಾಂ, ಸ್ವಪ್ನಿಲ್ ಸಿಂಗ್, ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜಾಕೋಬ್ ಡಫ್ಫಿ, ಜೋರ್ಡಾನ್ ಕಾಕ್ಸ್, ಸಾತ್ವಿಕ್ ದೇಸ್ವಾಲ್, ವಿಕಿ ಓಸ್ಟ್ವಾಲ್, ಕನಿಷ್ಕ್ ಚೌಹಾಣ್, ವಿಹಾನ್ ಮಲ್ಹೋತ್ರಾ.












Click it and Unblock the Notifications