Phil Salt: ಅದ್ಭುತ ಬ್ಯಾಟಿಂಗ್, ಫೀಲ್ಡಿಂಗ್‌; ಆರ್‌ಸಿಬಿಗೆ ಸಿಕ್ಕಿದ್ರು ಹೊಸ ಆಪತ್ಬಾಂಧವ

ಐಪಿಎಲ್ 2025ರ ಆವೃತ್ತಿಯಲ್ಲಿ ಆರ್ ಸಿಬಿ ತಂಡದ ಭರ್ಜರಿ ಪ್ರದರ್ಶನ ಮುಂದುವರೆದಿದೆ. ತವರಿನಲ್ಲಿ ಆಡಿದ ಎರಡು ಪಂದ್ಯಗಳನ್ನು ಸೋತಿದ್ದರೂ ಹೊರಗೆ ಆಡಿರುವ ನಾಲ್ಕೂ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಆರ್ ಸಿಬಿ ತಂಡದ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅಮೋಘ ಅರ್ಧಶತಕ ಸಿಡಿಸುವ ಮೂಲಕ ಆರ್ ಸಿಬಿ ಗೆಲುವನ್ನು ಸುಲಭವಾಗಿಸಿದರು. ಈ ಆವೃತ್ತಿಯಲ್ಲಿ ಫಿಲ್ ಸಾಲ್ಟ್ ಉತ್ತಮ ಫಾರ್ಮ್‌ನಲ್ಲಿದ್ದು ಆರ್ ಸಿಬಿ ತಂಡದ ಆಪತ್ಬಾಂಧವ ಎನಿಸಿಕೊಂಡಿದ್ದಾರೆ. ಪಿಚ್ ಎಂತಹದ್ದೇ ಇರಲಿ, ಎದುರಾಳಿ ಯಾರೇ ಇರಲಿ ಸಾಲ್ಟ್ ಅಬ್ಬರಿಸಲು ಶುರು ಮಾಡಿದರೆ ಎದುರಾಳಿ ಬೌಲರ್ ಗಳು ತಬ್ಬಿಬ್ಬಾಗುವುದು ಗ್ಯಾರಂಟಿ.

Phil salt shines with batting and fielding for rcb ipl 2025

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಫಿಲ್ ಸಾಲ್ಟ್ ಅಬ್ಬರ ಕಂಡು ಡೆಲ್ಲಿ ಕ್ಯಾಪಿಟಲ್ಸ್ ದಂಗಾಗಿದ್ದರು. ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಅವರಿಗೆ ಒಂದೇ ಓವರ್ ನಲ್ಲಿ 30 ರನ್ ಬಾರಿಸಿ ಅಬ್ಬರಿಸಿದರು. ಆದರೆ ದುರದೃಷ್ಟದಿಂದ ರನೌಟ್ ಆದರು. ಅದಾದ ಬಳಿಕ ದಾರಿ ತಪ್ಪಿದ ಆರ್ ಸಿಬಿ ಡೆಲ್ಲಿ ವಿರುದ್ಧ ಸೋಲು ಕಂಡಿತು.

Take a Poll

ರಾಜಸ್ಥಾನ ರಾಯಲ್ಸ್ ವಿರುದ್ಧ ಫಿಲ್ ಸಾಲ್ಟ್ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದರು. ಯಾವ ಪಿಚ್‌ನಲ್ಲಿ ರಾಜಸ್ಥಾನ ರಾಯಲ್ಸ್ ಬ್ಯಾಟರ್ ಗಳು ರನ್ ಗಳಿಸಲು ಪರದಾಡಿದರೋ, ಅದೇ ಪಿಚ್‌ನಲ್ಲಿ ಫಿಲ್ ಸಾಲ್ಟ್ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಅಬ್ಬರಿಸಿದರು. ವಿರಾಟ್ ಕೊಹ್ಲಿಗೆ ಯಾವುದೇ ಒತ್ತಡ ಕೊಡದೆ ವೇಗವಾಗಿ ರನ್ ಗಳಿಸಿದರು. ಕೊಹ್ಲಿ ಎಚ್ಚರಿಕೆಯಿಂದ ರನ್ ಗಳಿಸುತ್ತಿದ್ದರೆ, ಸಾಲ್ಟ್ ಮತ್ತೊಂದು ಕಡೆ ಅಬ್ಬರಿಸಿದರು. ಕೇವಲ 33 ಎಸೆತಗಳಲ್ಲಿ 5 ಬೌಂಡರಿ 6 ಸಿಕ್ಸರ್ ಸಹಿತ 65 ರನ್ ಗಳಿಸಿದರು.

ಉತ್ತಮ ಫಾರ್ಮ್‌ನಲ್ಲಿ ಸಾಲ್ಟ್

ಐಪಿಎಲ್ 2025ರ ಆವೃತ್ತಿಯಲ್ಲಿ ಫಿಲ್ ಸಾಲ್ಟ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. 6 ಪಂದ್ಯಗಳಲ್ಲಿ 34.67 ಸರಾಸರಿಯಲ್ಲಿ 208 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕ ಸೇರಿವೆ. ಮುಖ್ಯವಾಗಿ ಅವರ ಸ್ಟ್ರೈಕ್‌ರೇಟ್ 185.71 ಆಗಿದೆ. ವಿಕೆಟ್ ಕೀಪರ್ ಆದರೂ ಅಮೋಘ ಫೀಲ್ಡಿಂಗ್ ಮಾಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಓವರ್ ನಲ್ಲಿ ಟಿಮ್ ಡೇವಿಡ್ ಜೊತೆ ಅವರು ಹಿಡಿದ ಕ್ಯಾಚ್‌ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಕೂಡ ಅವರು ಸಿಕ್ಸರ್ ತಡೆದು ಎಬಿಡಿ ವಿಲಿಯರ್ಸ್ ಅವರನ್ನು ನೆನಪಿಸಿದರು.

ಫಿಲ್ ಸಾಲ್ಟ್ ಇದೇ ರೀತಿ ಪ್ರದರ್ಶನ ಮುಂದುವರೆಸಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಆರ್ ಸಿಬಿ ಮುಂದಿನ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಸೆಣೆಸಲಿದ್ದು ಈ ಪಂದ್ಯದಲ್ಲಿ ಸಾಲ್ಟ್ ಅಬ್ಬರಿಸಲಿ, ತವರಿನಲ್ಲಿ ಆರ್ ಸಿಬಿ ಮೊದಲ ಗೆಲುವು ಸಾಧಿಸಲಿ ಎನ್ನುವುದು ಅಭಿಮಾನಿಗಳ ಹಾರೈಕೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+