ಪಿಸಿಬಿಯಲ್ಲಿ ಬದಲಾವಣೆಯ ಗಾಳಿ: ಮಾಜಿ ವೇಗಿ ಆಯ್ಕೆ ಸಮಿತಿಗೆ ಗ್ರ್ಯಾಂಡ್ ಎಂಟ್ರಿ
ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಪಾಕಿಸ್ತಾನ ಕ್ರಿಕೆಟ್ ಟೀಕೆಗೆ ಗುರಿಯಾಗಿದೆ. ಈಗ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನಲ್ಲೂ ಬದಲಾವಣೆಯ ಗಾಳಿ ಕೇಳಿ ಬರುತ್ತಿದೆ. ಅಮೆರಿಕ- ವೆಸ್ಟ್ ಇಂಡೀಸ್ ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ ಪಾಕ್ ತಂಡವನ್ನು ಟ್ರ್ಯಾಕ್‌ಗೆ ತರುವ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕ್‌ನ ಆಯ್ಕೆ ಸಮಿತಿಯ ಭಾಗವಾಗಿದ್ದ ವಹಬ್ ರಿಯಾಜ್ ಹಾಗೂ ಅಬ್ದುಲ್ ರಜಾಕ್ ಅವರಿಗೆ ಗೇಟ್ ಪಾಸ್ ನೀಡಲಾಗಿದೆ. ಇವರ ಸ್ಥಾನದಲ್ಲಿ ಈಗ ಮಾಜಿ ವೇಗದ ಬೌಲರ್ ಒಬ್ಬರು ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಗತ ವೈಭವವನ್ನು ಸ್ಥಾಪಿಸಲು ಟಿ20 ವಿಶ್ವಕಪ್‌ನಲ್ಲಿ ಮತ್ತೆ ಸ್ಟಾರ್ ಬ್ಯಾಟರ್ ಬಾಬರ್ ಅಜಂ ಅವರಿಗೆ ನಾಯಕತ್ವ ನೀಡಲಾಯಿತು. ಇದರಿಂದ ಎಲ್ವವೂ ಸರಿ ಹೋಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಡ್ರೆಸ್ಸಿಂಗ್ ರೂಮ್ ಒಡೆದ ಬಾಗಿಲಾಗಿತ್ತು. ಹೀಗಾಗಿ ಆಟಗಾರರಲ್ಲಿ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿತ್ತು. ಇದರ ಲಾಭವನ್ನು ಬೇರೆ ತಂಡಡಗಳು ಬಳಸಿಕೊಂಡವು. ಈಗ ಪಾಕ್ ಆಯ್ಕೆ ಸಮಿತಿಗೆ ಕೋಚ್‌ನನ್ನೆ ಆಯ್ಕೆ ಮಾಡಲಾಗಿದೆ. ಈ ನಿರ್ಧಾರ ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಆಯ್ಕೆ ಸಮಿತಿಗೆ ಎಂಟ್ರಿ ನೀಡಿದ ವೇಗಿ ಯಾರು?
ಟೆಸ್ಟ್ ಕೋಚ್ ಜೇಸನ್ ಗಿಲ್ಲೆಸ್ಪಿ ಆಯ್ಕೆ ಸಮಿತಿಗೆ ಎಂಟ್ರಿ ಕೊಟ್ಟಿದ್ದಾರೆ. ಇಎಸ್‌ಪಿನ್ ಕ್ರಿಕ್‌ಇನ್ಫೋ ಪ್ರಕಾರ, ಇದೀಗ ಟೆಸ್ಟ್ ಕೋಚ್ ಜೇಸನ್ ಗಿಲ್ಲೆಸ್ಪಿ ಮತ್ತು ಏಕದಿನ ಮತ್ತು ಟಿ20 ತಂಡದ ಕೋಚ್ ಗ್ಯಾರಿ ಕರ್ಸ್ಟನ್ ಅವರನ್ನು ಆಯ್ಕೆ ಸಮಿತಿಯಲ್ಲಿ ಸೇರಿಸಲಾಗಿದೆ. ಇವರು ಯಾವ ಯಾವ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ ಎಂಬ ಬಗ್ಗೆ ಇನ್ನು ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಟಿ20 ವಿಶ್ವಕಪ್‌ನಲ್ಲಿ ಸೋಲಿನ ಬಳಿಕ ಪಿಸಿಬಿ ಸಂಪೂರ್ಣ ವರದಿ ನೀಡುವಂತೆ ಗ್ಯಾರಿ ಕರ್ಸ್ಟನ್‌ಗೆ ಸೂಚಿಸಿತ್ತು.
ಆಟಗಾರರ ಒಪ್ಪಂದದ ಅವಧಿ ಕಡಿತ
ಆಟಗಾರರು ಹಾಗೂ ಪಿಸಿಬಿ ನಡುವೆ ಕಳೆದ ವರ್ಷ ನಡೆದ ಒಪ್ಪಂದದಂತೆ ಕೇಂದ್ರ ಒಪ್ಪಂದ ಮೂರು ವರ್ಷಗಳ ವರೆಗೆ ಇರುತ್ತಿತ್ತು. ಆದರೆ ಈಗ ಪಿಸಿಬಿ ಇದನ್ನು ಬದಲಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಒಪ್ಪಂದದ ಆಟಗಾರರ ವೇತನವನ್ನು ಕಡಿಮೆ ಮಾಡುವುದಿಲ್ಲ. ಆದರೆ ಒಪ್ಪಂದದ ಅವಧಿಯನ್ನು ಇಳಿಸುವ ಚಿಂತನೆ ನಡೆದಿದೆ.

ಪಾಕ್ ಮುಂದಿನ ಸರಣಿಗಳು
ಪಾಕಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್, ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಯೋಜಿಸಬೇಕಾಗಿದೆ. ಈ ಎಲ್ಲಾ ಟೆಸ್ಟ್ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿದೆ. ಶಾಹೀನ್ ಅಫ್ರಿದಿ ಮತ್ತು ಬಾಬರ್ ಅಜಮ್ ಅವರಂತಹ ಆಟಗಾರರು ಗ್ಲೋಬಲ್ ಟಿ 20 ಕೆನಡಾಕ್ಕೆ ಸೇರಲು ಸಿದ್ಧರಾಗಿದ್ದಾರೆ. ಆದರೆ ಈ ಆಟಗಾರರಿಗೂ ಎನ್ ಒಸಿ ಸಿಗುವ ಸಾಧ್ಯತೆ ಕಡಿಮೆ.












Click it and Unblock the Notifications