Champions Trophy 2025: ಭಾರತದ ವಿರುದ್ಧ ಚಾಂಪಿಯನ್ಸ್‌ ಟ್ರೋಫಿ ಪಂದ್ಯಕ್ಕೂ ಮುನ್ನ ಐಸಿಸಿ ಕ್ಯಾತೆ ತೆಗೆದ ಪಾಕ್‌

Champions Trophy 2025: ಫೆಬ್ರವರಿ 19, 2025ರಿಂದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಆರಂಭವಾಗಿದೆ. ನ್ಯೂಜಿಲೆಂಡ್‌ ಮತ್ತು ಪಾಕಿಸ್ತಾನದ ನಡುವೆ ಕರಾಚಿಯಲ್ಲಿ ಶುಭಾರಂಭದ ಪಂದ್ಯ ನಡೆದಿತ್ತು. ಇನ್ನು ಪಾಕಿಸ್ತಾನದಲ್ಲಿ ಆಯೋಜನೆ ಆಗಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯ ಆರಂಭ ಆದಾಗಿನಿಂದಲೂ ಒಂದಲ್ಲ ಒಂದು ವಿವಾದಗಳು ಕೇಳಿಬರುತ್ತಲಿವೆ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದೆ. ಹಾಗಾದರೆ ಕಾರಣ ಏನೆಂದು ಇಲ್ಲಿ ನೀಡಲಾಗಿದೆ ಗಮನಿಸಿ.

ಭಾರತ ಮತ್ತು ಪಾಕಿಸ್ತಾನದ ನಡುವೆ ನಾಳೆ (ಫೆಬ್ರವರಿ 23) ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿಯ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನವೇ ಪಾಕ್‌ ಕ್ರಿಕೆಟ್‌ ಮಂಡಳಿ ಐಸಿಸಿ ವಿರುದ್ಧ ಲೋಗೋ ವಿಚಾರವಾಗಿ ಕ್ಯಾತೆಯೊಂದನ್ನು ತೆಗೆದಿದೆ. ಇದೇ ಮೊದಲೇನಲ್ಲ.. ಪಾಕ್‌ ಪಂದ್ಯಗಳು ನಡೆಯುವ ಮುನ್ನ ಒಂದಿಲ್ಲೊಂದು ವಿಚಾರಕ್ಕೆ ಚಿಕ್ಕ ಮಕ್ಕಳು ಹಠ ಮಾಡುವಂತೆ ಕ್ಯಾತೆ ತೆಗೆದು ಸುದ್ದಿಯಾಗುತ್ತಲೇ ಬಂದಿದೆ.

PCB Expresses Anger against ICC Ahead of Champions Trophy Match Against India

ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಲೋಗೋ ವಿಚಾರಕ್ಕೆ ಪಿಸಿಬಿಯು ಐಸಿಸಿ ವಿರುದ್ಧ ಆಕ್ರೋಶ ಹೊರಹಾಕಿದೆ. ಅಷ್ಟೇ ಅಲ್ಲದೆ, ಈ ಬಗ್ಗೆ ಸ್ಪಷ್ಟನೆ ಕೇಳಿ ಐಸಿಸಿಗೆ ಪತ್ರ ಕೂಡ ಬರೆದಿದೆ ಎಂದು ತಿಳಿದುಬಂದಿದೆ. ಇನ್ನು ಇತ್ತೀಚೆಗಷ್ಟೇ ಚಾಂಪಿಯನ್ಸ್‌ ಟ್ರೋಫಿ ಆರಂಭಕ್ಕೂ ಮುನ್ನ ಭಾರತದ ಜರ್ಸಿ ಮೇಲೆ ಪಾಕಿಸ್ತಾನಸ ಹೆಸರನ್ನು ಮುದ್ರಿಸಲಾಗಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಇತ್ತೀಚೆಗೆ ದುಬೈನಲ್ಲಿ ನಡೆದ ಭಾರತ-ಬಾಂಗ್ಲಾದೇಶ ಗ್ರೂಪ್ ಎ ಪಂದ್ಯದ ನೇರ ಪ್ರಸಾರದ ಸಮಯದಲ್ಲಿ ಪಾಕಿಸ್ತಾನದ ಹೆಸರನ್ನು ಟೂರ್ನಮೆಂಟ್ ಲೋಗೋದಿಂದ ತೆಗೆದು ಹಾಕಲಾಗಿತ್ತು. ಈ ವಿಚಾರಕ್ಕೆ ಇದೀಗ ಪಿಸಿಬಿ ಅಸಮಾಧಾನಗೊಂಡಿದೆ ಎಂದು ಹೇಳಲಾಗಿದೆ. ಟಿವಿ ಲೋಗೋದಲ್ಲಿ ಪಾಕಿಸ್ತಾನದ ಹೆಸರು ಕಾಣದ ಹಿನ್ನೆಲೆ ಚಾಂಪಿಯನ್ಸ್ ಟ್ರೋಫಿ 2025 ಹೊಸ ವಿವಾದಕ್ಕೆ ಗುರಿಯಾಗಿದೆ.

ಟೂರ್ನಿಮೆಂಟ್ ಉದ್ಘಾಟನಾ ಪಂದ್ಯದ ವೇಳೆ ನೇರ ಪ್ರಸಾರದ ವೇಳೆ ಲೋಗೋದಲ್ಲಿ ಪಾಕಿಸ್ತಾನದ ಹೆಸರು ಕಾಣಿಸಿಕೊಂಡಿತ್ತು. ಆದರೆ ಬಳಿಕ ದುಬೈನಲ್ಲಿ ನಡೆದ ಭಾರತ ಬಾಂಗ್ಲಾದೇಶ ನಡುವಿನ ಎರಡನೇ ಪಂದ್ಯದ ಸಮಯದಲ್ಲಿ, ಪಾಕಿಸ್ತಾನದ ಹೆಸರು ಇರಲಿಲ್ಲ. ಆಗಲೇ ಅದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದೆ.

ಇದೊಂದು ತಾಂತ್ರಿಕ ದೋಷ ಎಂದು ಹೇಳಿದೆ. ಐಸಿಸಿ ಮತ್ತು ಟೂರ್ನಿ ಪ್ರಸಾರ ಮಾಡುತ್ತಿರುವ ಜಿಯೋ ಟಿವಿ ಪ್ರಕಾರ, ಇದು ತಾಂತ್ರಿಕ ದೋಷ ಎನ್ನಲಾಗಿದೆ. ಭಾರತದ ಎಲ್ಲಾ ಪಂದ್ಯಗಳ ಪ್ರಸಾರವು ಪಾಕಿಸ್ತಾನದ ಹೆಸರಿನೊಂದಿಗೆ ಟೂರ್ನಮೆಂಟ್ ಲೋಗೋವನ್ನು ಹೊಂದಿರುತ್ತದೆ ಎಂದು ಐಸಿಸಿ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. "ಗ್ರಾಫಿಕ್ಸ್ ಸಂಬಂಧಿತ ತಾಂತ್ರಿಕ ಸಮಸ್ಯೆಯಿಂದಾಗಿ ಈ ಲೋಪ ಉಂಟಾಗಿದ್ದು, ನಾಳೆಯಿಂದ ಅದನ್ನು ಸರಿಪಡಿಸಲಾಗುವುದು. ಪಂದ್ಯದ ಸಮಯದಲ್ಲಿ ಲೋಗೋವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ" ಎಂದು ವಕ್ತಾರರು ತಿಳಿಸಿದ್ದಾರೆ. ಇಎಸ್‌ಪಿಎನ್‌ಕ್ರಿಕ್‌ಇನ್ಫೊ ಪ್ರಕಾರ, ಐಸಿಸಿಯಿಂದ ಅನೌಪಚಾರಿಕ ಸಂವಹನದ ಹೊರತಾಗಿಯೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಘಟನೆಯ ಬಗ್ಗೆ ಐಸಿಸಿಯಿಂದ ಅಧಿಕೃತ ವಿವರಣೆಯನ್ನು ಕೇಳಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+